ಶಿರಸಿ: ಮಗಳ ಅಕಾಲಿಕ ಮರಣದಿಂದ ನೊಂದ ತಂದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೂರ್ಸೆ ಬಳಿ ನಡೆದಿದೆ.
ರೇಷ್ಮೆ ಇಲಾಖೆಯ ನೌಕರ ತಾಲೂಕಿನ ಹುತ್ಗಾರ ಬಳಿಯ ರಘುಪತಿ ವೆಂಕಟ್ರಮಣ ಹೆಗಡೆ (59) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವೆಂಕಟ್ರಮಣ ಹೆಗಡೆಯವರ ಮಗಳು 5 ತಿಂಗಳ ಹಿಂದೆ ಅಕಾಲಿಕವಾಗಿ ಮೃತಪಟ್ಟಿದ್ದರು. ಇದರಿಂದ ತುಂಬಾ ನೊಂದಿದ್ದ ವೆಂಕಟ್ರಮಣ ಹೆಗಡೆ, ಮಾ. 7ರಂದು ಕೆಲಸಕ್ಕೆ ತೆರಳಿದವರು ಮರಳಿ ಬಾರದೆ ಕಾಣೆಯಾಗಿದ್ದರು.
ಈ ಕುರಿತು ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಕೂರ್ಸೆ ಬಳಿಯ ಮೊಸಳೆ ಗುಂಡಿ ನದಿಯಲ್ಲಿ ಮೃತದೇಹ ಪತ್ತೆ ಹಚ್ಚಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.