ETV Bharat / state

ಸಂಬಂಧಿಕರಿಂದ ಕುಡಿಯುವ ನೀರು, ರಸ್ತೆಗೆ ಅಡ್ಡಿ.. ನೊಂದು ದಯಾಮರಣಕ್ಕೆ ಡಿಸಿ ಮೊರೆ ಹೋದ ಕುಟುಂಬ

ಕುಮಟಾ ತಾಲೂಕಿನ ಹೊಲನಗದ್ದೆಯ ಗಜಾನನ ಪಟಗಾರ ಎಂಬುವರ ಕುಟುಂಬ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಕುಡಿಯುವ ನೀರು ಹಾಗೂ ರಸ್ತೆ ಸಮಸ್ಯೆಯನ್ನ ಬಗೆಹರಿಸಿಕೊಡಿ, ಇಲ್ಲದಿದ್ದರೆ ದಯಾಮರಣಕ್ಕೆ ಅನುಮತಿ ನೀಡಿ ಎಂದು ಮನವಿ ಸಲ್ಲಿಸಿದೆ.

Euthanasia
ನೊಂದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಕುಟುಂಬ
author img

By

Published : Apr 2, 2022, 7:45 AM IST

Updated : Apr 2, 2022, 12:26 PM IST

ಕಾರವಾರ: ಸಂಬಂಧಿಕರು ಕುಡಿಯುವ ನೀರು ಹಾಗೂ ರಸ್ತೆಗೆ ಅಡ್ಡಿಪಡಿಸುತ್ತಿದ್ದು ಇದರಿಂದ ತೊಂದರೆ ಉಂಟಾಗಿದೆ. ಈ ಕುರಿತು ಗಮನಹರಿಸಿ ಸಮಸ್ಯೆ ಬಗೆಹರಿಸಿಕೊಡಬೇಕು, ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡುವಂತೆ ಕುಟುಂಬವೊಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಮನವಿ ಸಲ್ಲಿಸಿದೆ. ಕುಮಟಾ ತಾಲೂಕಿನ ಹೊಲನಗದ್ದೆಯ ಗಜಾನನ ಪಟಗಾರ (63) ಎಂಬುವರು ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ತೆರಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕೂಲಿ ಕೆಲಸ ಮಾಡುವ ನಾನು, ಪತ್ನಿ, ಮಗಳು ಹಾಗೂ ಮೊಮ್ಮಕ್ಕಳ ಸಮೇತ ಕುಮಟಾ ತಾಲೂಕಿನ ಹೊನಗದ್ದೆ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ವಾಸ ಮಾಡಿಕೊಂಡಿದ್ದೇನೆ. ನನಗೆ ಇಲ್ಲಿಯ 2 ಗುಂಟೆ ಜಾಗ ಬಿಟ್ಟರೆ ಬೇರೆ ಆಸ್ತಿ ಇಲ್ಲ. ಆಸ್ತಿ ಭಾಗವಾಗುವ ಮುನ್ನ ನನ್ನ ಅಣ್ಣನ ಮಗನ ಕುಟುಂಬದವರೊಂದಿಗೆ ಸೇರಿ ತಿರುಗಾಡಲು ಕಾಲು ದಾರಿ ಹಾಗೂ ಕುಡಿಯುವ ನೀರಿಗಾಗಿ ಬಾವಿಯನ್ನು ತೆಗೆದಿದ್ದೆವು. ಆಸ್ತಿ ಪಾಲು ಮಾಡುವ ವೇಳೆಗೆ ಆತನಿಗೆ ಹೆಚ್ಚುವರಿ ಸ್ಥಳ ನೀಡಿ, ಕಾಲು ದಾರಿಗಾಗಿ ಮತ್ತು ಕುಡಿಯಲು ನೀರು ನೀಡುವಂತೆ ಮಾತುಕತೆ ಆಗಿತ್ತು. ಇದೀಗ ದಾರಿ ಮಧ್ಯೆ ಬೇಲಿ ಕಟ್ಟಿ ಬಂದ್​ ಮಾಡಿದ್ದಾನೆ. ನಮಗೆ ಓಡಾಡಲು ರಸ್ತೆ ಇಲ್ಲದಂತಾಗಿದೆ. ಈ ಕುರಿತು ಸ್ಥಳೀಯ ಗ್ರಾಮಂ ಪಂಚಾಯತ್​ಗೆ ಮನವಿ ಸಲ್ಲಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ, ಪೊಲೀಸ್ ಠಾಣೆಗೆ ದೂರು ಸಹ ನೀಡಲಾಗಿದೆ ಎಂದು ಅಳಲು ತೋಡಿಕೊಂಡರು.

ನೊಂದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ರೈತನ ಕುಟುಂಬ

ನಮಗೆ ಈ ಜಮೀನು ಹೊರತಾಗಿ ಬೇರೆ ಕಡೆ ಜಾಗವಿಲ್ಲ. ಬೇರೆಡೆ ಜಮೀನು ಖರೀದಿಸುವಷ್ಟು ಆರ್ಥಿಕ ಸಾಮರ್ಥ್ಯ ಸಹ ಇಲ್ಲ. ಹೀಗಾಗಿ, ನನ್ನ ಅಣ್ಣನ ಮಗ ಹಾಗೂ ಆತನ ಕುಟುಂಬಕ್ಕೆ ಸೂಕ್ತ ತಿಳುವಳಿಕೆ ನೀಡಿ, ನನಗೆ ಮೊದಲಿನಂತೆ ಕುಡಿಯುವ ನೀರು ಉಪಯೋಗಿಸಲು ಹಾಗೂ ಕಾಲು ದಾರಿ ಬಳಸಲು ಅವಕಾಶ ಮಾಡಿಕೊಡಬೇಕು. ಒಂದು ವೇಳೆ ಜಿಲ್ಲಾಡಳಿತದಿಂದ ನಮಗೆ ನ್ಯಾಯ ಕೊಡಿಸಲು ಸಾಧ್ಯವಾಗದಿದ್ದರೆ ನನ್ನ ಕುಟುಂಬಕ್ಕೆ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ರೈಲಿನಿಂದ ಹಾರಿ ಸಹೋದರಿಯರಿಬ್ಬರ ಆತ್ಮಹತ್ಯೆ!

Last Updated : Apr 2, 2022, 12:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.