ETV Bharat / state

ಈಡೇರದ ಸುಸಜ್ಜಿತ ಆಸ್ಪತ್ರೆ ಕನಸು.. ಫೇಸ್​ಬುಕ್ ಅಭಿಯಾನಕ್ಕೆ ಮುಂದಾದ ಉತ್ತರ ಕನ್ನಡಿಗರು - ಕಾರವಾರ ಸುದ್ದಿ

ಕಳೆದ ಬಾರಿಯೂ ಜಿಲ್ಲೆಯ ಯುವಕರು ಟ್ವಿಟರ್ ಮೂಲಕ #WeNeedEmergencyHospitalInUK ಎಂಬ ಹ್ಯಾಶ್​ಟ್ಯಾಗ್​ ಮೂಲಕ ಅಭಿಯಾನ ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು..

ಉತ್ತರ ಕನ್ನಡದಲ್ಲಿ  ಫೇಸ್​ಬುಕ್ ಅಭಿಯಾನ
ಉತ್ತರ ಕನ್ನಡದಲ್ಲಿ ಫೇಸ್​ಬುಕ್ ಅಭಿಯಾನ
author img

By

Published : Dec 1, 2020, 12:38 PM IST

ಕಾರವಾರ: ವಿಸ್ತಾರವಾದ ಜಿಲ್ಲೆ ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕೆಂಬ ಕೂಗು ಮತ್ತೆ ಜೋರಾಗಿದೆ. ಕಳೆದ ಬಾರಿ ಟ್ವಿಟರ್ ಮೂಲಕ ಅಭಿಯಾನ ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆದಿದ್ದ ಯುವಕರು, ಇದೀಗ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಈ ಬಾರಿ ಮತ್ತೆ ಫೇಸ್​ಬುಕ್ ಮೂಲಕ ಜಿಲ್ಲೆಯ ಜನಪ್ರತಿನಿಧಿಗಳನ್ನು ಎಚ್ಚರಿಸಿ ಆಸ್ಪತ್ರೆ ಕನಸನ್ನು ನನಸಾಗಿಸಿಕೊಳ್ಳಲು ಮುಂದಾಗಿದ್ದಾರೆ.

12 ತಾಲೂಕುಗಳನ್ನ ಒಳಗೊಂಡಿರುವ ವಿಸ್ತಾರವಾದ ಜಿಲ್ಲೆಯಲ್ಲಿ ಎಲ್ಲಿಯೂ ಕೂಡ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲ. ಜನರು ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಿಕೊಳ್ಳಬೇಕೆಂದ್ರೆ ಪಕ್ಕದ ಗೋವಾ ಇಲ್ಲವೇ ಹುಬ್ಬಳ್ಳಿ, ಮಂಗಳೂರು, ಮಣಿಪಾಲ್, ಶಿವಮೊಗ್ಗ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ. ಈ ಕಾರಣದಿಂದಲೇ ಕಳೆದ ಹಲವು ವರ್ಷಗಳಿಂದ ಸುಸಜ್ಜಿತ ಆಸ್ಪತ್ರೆಗಾಗಿ ಒತ್ತಾಯಿಸಲಾಗುತ್ತಿದೆ.

ಫೇಸ್​ಬುಕ್ ಅಭಿಯಾನ
ಫೇಸ್​ಬುಕ್ ಅಭಿಯಾನ

ಕಳೆದ ಬಾರಿಯೂ ಜಿಲ್ಲೆಯ ಯುವಕರು ಟ್ವಿಟರ್ ಮೂಲಕ #WeNeedEmergencyHospitalInUK ಎಂಬ ಹ್ಯಾಶ್​ಟ್ಯಾಗ್​ ಮೂಲಕ ಅಭಿಯಾನ ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು.

ಆದರೆ, ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ಕಾರಣದಿಂದ ಇದೀಗ ಮತ್ತೆ ಯುವಕರು "ಉತ್ತರ ಕನ್ನಡಕ್ಕೆ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಯಾವಾಗ?" ಎಂದು ಫೇಸ್​ಬುಕ್ ಅಭಿಯಾನ ಆರಂಭಿಸಿದ್ದಾರೆ.

ಇದನ್ನು ಉತ್ತರ ಕನ್ನಡದ ಎಲ್ಲಾ ಶಾಸಕ, ಸಚಿವ, ಸಂಸದರ ಫೇಸ್​ಬುಕ್ ಖಾತೆಗೆ ಟ್ಯಾಗ್​ ಮಾಡಿ ಕಮೆಂಟ್ ಮಾಡುವ ಮೂಲಕ ಪ್ರಶ್ನಿಸುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ವಿಧಾನಸಭೆಯ ಸಚಿವ ಸಂಪುಟ ಸಭೆ ಮತ್ತು ಚಳಿಗಾಲದ ಅಧಿವೇಶನದಲ್ಲಾದ್ರೂ ಜನನಾಯಕರು ಜನರ ಬೇಡಿಕೆಗೆ ಧ್ವನಿಯಾಗಲಿ.

ಈ ಅಭಿಯಾನ ಯಾವುದೇ ಪಕ್ಷದ ವಿರುದ್ಧವಲ್ಲ. ಬದಲಿಗೆ ಜಿಲ್ಲೆಗೆ ಅವಶ್ಯವಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಎಲ್ಲರೂ ಕೈ ಜೋಡಿಸುವ ಮೂಲಕ ಸಹಕಾರ ನೀಡುವಂತೆ ಅಭಿಯಾನ ತಂಡದ ಸದಸ್ಯ ರಾಜೇಶ ಶೇಟ್ ಗುಂಡಬಾಳ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.