ETV Bharat / state

ಲಾಕ್​​ಡೌನ್​​​ನಲ್ಲಿ ಮತ್ಸ್ಯಕೃಷಿ ಮೂಲಕ ಹತ್ತಾರು ಜನರಿಗೆ ಉದ್ಯೋಗ: ಲಾಭದ ನಿರೀಕ್ಷೆಯಲ್ಲಿ ಪ್ರಗತಿಪರ ರೈತ

author img

By

Published : Nov 11, 2020, 8:32 PM IST

ಮಹಾಮಾರಿ ಕೊರೊನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದವರ ಸಂಖ್ಯೆ ಒಂದೆರಡಲ್ಲ. ನಾಲ್ಕೈದು ತಿಂಗಳುಗಳ ಕಾಲ ಹೇರಿದ್ದ ಲಾಕ್​​ಡೌನ್ ವೇಳೆ ಅದೆಷ್ಟೊ ಜನರು ಕೆಲಸವಿಲ್ಲದೆ ಖಾಲಿ ಕುಳಿತುಕುಳ್ಳೊವಂತಾಗಿತ್ತು. ಆದರೆ ಇಲ್ಲೋರ್ವರು ಮಾತ್ರ ಈ ವೇಳೆಯನ್ನು ಸದುಪಯೋಗ ಪಡಿಸಿಕೊಂಡಿದ್ದು, ಖಾಲಿ ಕುಳಿತ ಹತ್ತಾರು ಜನರನ್ನು ಒಟ್ಟುಗೂಡಿಸಿ ಮತ್ಸ್ಯ ಕೃಷಿ ಆರಂಭಿಸಿ ಇದೀಗ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಮತ್ಸ್ಯ ಕೃಷಿ
ಮತ್ಸ್ಯ ಕೃಷಿ

ಕಾರವಾರ: ಕೊರೊನಾ ಕಾಟದಿಂದಾಗಿ ದೇಶವೇ ನಾಲ್ಕೈದು ತಿಂಗಳುಗಳ ಕಾಲ ಸಂಪೂರ್ಣ ಸ್ತಬ್ಧಗೊಂಡಿತ್ತು. ಈ ವೇಳೆ ನಗರ, ಪಟ್ಟಣ ಪ್ರದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದ ಅದೆಷ್ಟೊ ಮಂದಿ ಕೆಲಸ ಕಳೆದುಕೊಂಡು ಮನೆ ಸೇರಿದವರಿಗೆ ಈವರೆಗೂ ಮತ್ತೆ ಉದ್ಯೋಗ ಹಿಡಿಯಲು ಸಾಧ್ಯವಾಗುತ್ತಿಲ್ಲ. ಆದರೆ ಉತ್ತರಕನ್ನಡ ಜಿಲ್ಲೆಯ ಕುಮಟಾದ ಕಾಗಲ್ ಗ್ರಾಮದ ಪ್ರಗತಿಪರ ಕೃಷಿಕ ಆರ್. ಎಚ್. ನಾಯ್ಕ ವಿಭಿನ್ನ ಆಲೋಚನೆ ಮಾಡಿ ಲಾಕ್ ಡೌನ್ ಸಮಯವನ್ನೇ ಸದುಪಯೋಗ ಪಡೆಸಿಕೊಂಡು ಮತ್ಸ್ಯಕೃಷಿ ಮಾಡುವ ಮೂಲಕ ಹತ್ತಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿದ್ದಾರೆ.

ಊರಲ್ಲಿ ಕೆಲಸವಿಲ್ಲದೆ ಖಾಲಿ ತಿರುಗುತ್ತಿದ್ದ ಜನರನ್ನು ಬಳಸಿಕೊಂಡು ಮತ್ಸ್ಯಕೃಷಿ ಮಾಡಿದ್ದಾರೆ. ಕರಾವಳಿ ಭಾಗದಲ್ಲಿ ನದಿಯಂಚಿನಲ್ಲಿರುವ ಉಪ್ಪು ನೀರಿನ 5 ಎಕರೆ ಪ್ರದೇಶದ ಘಜನಿ ಭೂಮಿಯನ್ನ 5 ವರ್ಷ ಲೀಸ್‌ಗೆ ಪಡೆದುಕೊಂಡಿದ್ದಾರೆ. ಇಲ್ಲಿ ಮಿಲ್ಕ್‌ಫಿಶ್, ಸೀ ಬಾಸ್, ಮಡ್ಲೆ, ತಿಲಪಿಯಾ, ಕಾಗಳಸಿ, ಟೈಗರ್ ಪ್ರಾನ್ಸ್, ವೈಟ್ ಪ್ರಾನ್ಸ್ ಬೆಳೆದಿದ್ದು, ಉತ್ತಮ ಆದಾಯ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಪ್ರಗತಿಪರ ರೈತ ಆರ್. ಎಚ್. ನಾಯ್ಕ್.

ಲಾಭದ ನಿರೀಕ್ಷೆಯಲ್ಲಿ ಪ್ರಗತಿಪರ ರೈತ

ಲಾಕ್​​ಡೌನ್ ಸಮಯದಲ್ಲಿ ಒಟ್ಟು 10 ಸಾವಿರ ಮೀನಿನ ಮರಿಗಳನ್ನು ಖರೀದಿ ಮಾಡಿ ಬೆಳೆಸಲಾಗುತ್ತಿದೆ. ಕೊರೊನಾ ಸಮಯದಲ್ಲಿ ಮೀನುಗಳಿಗೆ ಸಿಗೋ ರೆಡಿಮೇಡ್ ಆಹಾರ ದೊರಕದ ಕಾರಣ ಅವರೇ ತಯಾರಿಸಿದ ಗೋಧಿ, ಮೈದಾ, ಕಡ್ಲೆ, ಮೊಟ್ಟೆ, ಕಾರ್ನ್ ಹಾಗೂ ಮೀನಿನ ಫೀಡ್‌ಗಳನ್ನು ಮಿಶ್ರಣ ಮಾಡಿ ಆಹಾರದ ರೂಪದಲ್ಲಿ ಹಾಕಿ ಬೆಳೆಸಿದ್ದಾರೆ. ಮೀನು ಕೃಷಿಯನ್ನು ಮೀನುಗಾರಿಕೆ ನಿಷೇಧ, ಮತ್ಸ್ಯಕ್ಷಾಮದಂತಹ ಸಂದರ್ಭದಲ್ಲಿ ವ್ಯಾಪಾರ ಮಾಡಿದಲ್ಲಿ ಸಾಕಷ್ಟು ಲಾಭಗಳಿಸಲು ಸಾಧ್ಯವಿದೆ. ಯುವಜನತೆ ಇಂತಹ ಉದ್ಯೋಗದಲ್ಲಿ ತೊಡಗಬೇಕು.‌ ಸರ್ಕಾರ ಕೂಡ ಯುವಕರಿಗೆ ಈ ಬಗ್ಗೆ ಮಾಹಿತಿ ನೀಡಿ ಪ್ರೋತ್ಸಾಹಿಸಬೇಕು ಎಂಬುದು ಆರ್.ಎಚ್ ನಾಯ್ಕರ ಒತ್ತಾಯವಾಗಿದೆ.

ಮತ್ಸ್ಯ ಕೃಷಿ ಮೀನಿನ ಕೊರತೆ ನಿಗಿಸುವುದರ ಜೊತೆಗೆ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿ ಮಾಡಲಿದೆ. ಈ ನಿಟ್ಟಿನಲ್ಲಿ ಆರ್.ಎಚ್ ನಾಯ್ಕ ಅವರು ಯೋಚನೆ ಮಾದರಿಯಾಗಿದ್ದು, ಯುವಕರು ಹಾಗೂ ಈ ಬಗ್ಗೆ ಉತ್ಸಾಹಿಗಳು ಮುಂದೆ ಬಂದು ಮತ್ಸ್ಯಕೃಷಿ ಮಾಡಬೇಕು. ಇದರಿಂದ ಲಾಭದ ಜೊತೆಗೆ ಹತ್ತಾರು ಉದ್ಯೋಗವನ್ನು ಸೃಷ್ಟಿಸಲು ಸಾಧ್ಯವಿದೆ ಎನ್ನುತ್ತಾರೆ ಸ್ಥಳೀಯರಾದ ರವಿ ಕಸಬೇಕರ್​​​.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.