ಶಿರಸಿ: ದೇಶದಾದ್ಯಂತ ಲಾಕ್ಡೌನ್ ಆದೇಶ ಜಾರಿಯಾದಾಗಿನಿಂದ ರಸ್ತೆ ಮೇಲೆ ಜನರ ಓಡಾಟ ಕಡಿಮೆಯಾಗಿದೆ. ಈ ನಡುವೆ ಕಾಡು ಪ್ರಾಣಿಗಳು ರಸ್ತೆಗಿಳಿಯುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿ ಆನೆ ಯಾರ ಭಯವೂ ಇಲ್ಲದೆ ರಸ್ತೆ ಮೇಲೆ ಗಂಭೀರ ಹೆಜ್ಜೆ ಹಾಕಿತು.
ಲಾಕ್ಡೌನ್ ಆದೇಶದಿಂದ ರಸ್ತೆಗಳು ಖಾಲಿಯಾಗಿದ್ದು, ಕಾಡು ಪ್ರಾಣಿಗಳು ಇದರ ಲಾಭ ಪಡೆದು ಯಾರ ಭಯವಿಲ್ಲದೇ ಊರಿನ ರಸ್ತೆ ಮೇಲೆ ಹೆಜ್ಜೆ ಹಾಕಿವೆ. ಇಲ್ಲಿನ ಯಲ್ಲಾಪುರದ ರಾಜ್ಯ ಹೆದ್ದಾರಿ ದೌಗಿನಾಲಾ ಬಳಿ ಆನೆಯೊಂದು ಬಿಂದಾಸಾಗಿ ಸಂಚರಿಸಿತು. ಅರಣ್ಯ ಸಿಬ್ಬಂದಿ ಹತ್ತಿರ ಬಂದರೂ ಸ್ವಲ್ಪವೂ ಭಯಪಡದೇ ಅಳ್ನಾವರ-ತಾಳಗುಪ್ಪ ರಾಜ್ಯ ಹೆದ್ದಾರಿ ಮೇಲೆ ಸಾಗಿತು.