ಶಿರಸಿ : ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ಬದನಗೋಡ ಬಳಿ ಕಾಣಿಸಿಕೊಂಡ ಕಾಡಾನೆಗಳ ಹಿಂಡು ಪಕ್ಕದ ಕಂಡ್ರಾಜಿ ಹಾಗೂ ಕೋರ್ಲಕಟ್ಟಾ ಕಾಡಿಗೆ ಲಗ್ಗೆ ಇಟ್ಟಿದ್ದು, ಕಾಡಿನ ಪಕ್ಕದಲ್ಲಿ ಕೃಷಿ ಭೂಮಿ ಹೊಂದಿರುವ ರೈತರಲ್ಲಿ ಆತಂಕ ಮೂಡಿಸಿದೆ.
ಬದನಗೋಡದ ಕಾನೇಶ್ವರಿ ದೇವಾಲಯದ ಬಳಿಯಲ್ಲಿರುವ ರೈತರ ಜಮೀನಿನಲ್ಲಿ ಪುಂಡಾಟ ತೋರಿ ಪಕ್ಕದ ಕಾಡಿಗೆ ಸಾಗಿದ್ದ ಕಾಡಾನೆ ಹಿಂಡು ಕೋರ್ಲಕಟ್ಟಾ ಕಾಡಿನಲ್ಲಿ ಕಾಣಿಸಿಕೊಂಡಿವೆ. ಇವುಗಳನ್ನು ಓಡಿಸಲು ಸ್ಥಳೀಯರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಕಾಡಿನ ಪಕ್ಕದಲ್ಲಿ ಭತ್ತದ ಗದ್ದೆಗಳಿದ್ದು, ಕಾಡಾನೆಗಳು ರೈತರ ಜಾಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡಿವೆ.
ಈ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಕಾಡಾನೆಗಳನ್ನು ದೂರದ ಕಾಡಿಗೆ ಓಡಿಸಿ ಸಮಸ್ಯೆ ಪರಿಹಾರ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.