ETV Bharat / state

ಮಳೆ ನೀರಲ್ಲೇ ಕರೆಂಟ್​​ ಉತ್ಪಾದಿಸುವ ರೈತ.. ಪ್ರತಿದಿನ ಮನೆಗಳಿಗೆ 250 ಮೆಘಾವ್ಯಾಟ್ ವಿದ್ಯುತ್​! - ಮಳೆ ನೀರು

ಉತ್ತರಕನ್ನಡ ಜಿಲ್ಲೆಯ ಮಲೆನಾಡಿನ ಭಾಗವಾದ ಶಿರಸಿಯಲ್ಲಿ ಮಳೆಗಾಲ ಆರಂಭವಾದರೆ ನಾಲ್ಕೈದು ತಿಂಗಳು ಬಿಡುವಿಲ್ಲದಂಗೆ ಸುರಿಯುತ್ತದೆ. ಹೀಗಾಗಿ ಈ ನಾಲ್ಕೈದು ತಿಂಗಳ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿರುತ್ತದೆ. ಇದಕ್ಕೆ ಪರಿಹಾರವಾಗಿ ಶಿರಸಿಯ ಗ್ರಾಮವೊಂದರಲ್ಲಿ ಮಳೆ ನೀರಲ್ಲೇ ವಿದ್ಯುತ್ ತಯಾರಿಸುವ ಹೊಸ ವಿಧಾನವನ್ನು ಗ್ರಾಮಸ್ಥರು ಕಂಡುಕೊಂಡಿದ್ದಾರೆ.

Electricity generation using rain water
ಮಳೆ ನೀರು ಬಳಸಿ ಕರೆಂಟ್​​ ಉತ್ಪಾದನೆ
author img

By

Published : Oct 11, 2022, 1:08 PM IST

ಶಿರಸಿ(ಉತ್ತರ ಕನ್ನಡ): ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತುಳಗೇರಿ ಗ್ರಾಮಸ್ಥರು ಮಳೆ ನೀರಲ್ಲೇ ವಿದ್ಯುತ್​ ತಯಾರಿಸುವ ವಿನೂತನ ಯೋಜನೆಯನ್ನು ಕಂಡುಕೊಂಡಿದ್ದಾರೆ. ವಿದ್ಯುತ್ ನಿಲುಗಡೆ, ದೂರವಾಣಿ ಸಂಪರ್ಕ ಕಡಿತ ಇದಕ್ಕೆಲ್ಲ ಶಾಶ್ವತ ಪರಿಹಾರವೆಂಬಂತೆ ತಮ್ಮ ತೋಟದಂಚಲ್ಲಿ, ಗುಡ್ಡದ ಕೆಳ ಭಾಗದಲ್ಲಿ ಹರಿವ ನೀರನ್ನೇ ಬಳಸಿ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರವೂ ಸಹ ಶೇ. 90 ಅನುದಾನವನ್ನು ನೀಡಿದೆ.

ಶಿವಮೊಗ್ಗ ಜಿಲ್ಲೆಯ ಪ್ರಕೃತಿ ಏಜೆನ್ಸಿ ಮೂಲಕ ಈ ವಿದ್ಯುತ್ ತಯಾರಿಕಾ ಯೋಜನೆಯನ್ನು ರೂಪಿಸಲಾಗಿದೆ. ಮಳೆ ನೀರಿನ ಮೂಲಕ ವಿದ್ಯುತ್ ಉತ್ಪಾದಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇದರಿಂದ ಗ್ರಾಮದ 10ಕ್ಕೂ ಹೆಚ್ಚಿನ ಮನೆಗಳು ವಿದ್ಯುತ್, ದೂರವಾಣಿ ಸಂಪರ್ಕ ಎಲ್ಲದರ ಪ್ರಯೋಜನ ಪಡೆದುಕೊಂಡಿದ್ದಾರೆ.

250 ಮೆಘಾವ್ಯಾಟ್​ ಉತ್ಪಾದನೆ: ಪ್ರತಿದಿನ 250 ಮೆಘಾವ್ಯಾಟ್ ವಿದ್ಯುತ್ ಒಂದೊಂದು ಮನೆಗಳಿಗೆ ಬರಲಿದೆ. ಮಳೆಗಾಲದಲ್ಲಿ ಹೆಚ್ಚಿನ ನೀರು, ವಿದ್ಯುತ್ ಕೂಡ ಲಭ್ಯವಾಗಲಿದೆ. ದಿನದ ಎಲ್ಲ ಸಮಯವೂ ವಿದ್ಯುತ್ ಬಳಕೆಗೆ ಸಿಗಲಿದೆ. ಇಂಥ ಯೋಜನೆ ಪ್ರತೀ ಹಳ್ಳಿಗಳಲ್ಲೂ ಮಾಡಿದರೆ, ಮಳೆ ನೀರಿನಿಂದಲೇ ಇಂಥ ಪ್ರಯೋಜನ ಪಡೆಯಬಹುದಾಗಿದೆ. ಇದೇ ನೀರನ್ನೂ ಸಹ ತೋಟ, ಗದ್ದೆಗಳಿಗೆ ಬಳಸಬಹುದಾಗಿದೆ. ಅಲ್ಲದೇ ತಾಲೂಕು ಸ್ಥಳದಿಂದ 30 ಕಿಲೋಮೀಟರ್ ದೂರ ಇರುವಂತಹ ಈ ಗ್ರಾಮದಲ್ಲಿ, ಯೋಜನೆಯಿಂದ 24 ಗಂಟೆಗಳ ಕಾಲವೂ ವಿದ್ಯುತ್ ದೊರೆಯಲಿದೆ.

ಮಳೆ ನೀರು ಬಳಸಿ ಕರೆಂಟ್​​ ಉತ್ಪಾದನೆ

ಇದನ್ನೂ ಓದಿ: ಕುದಿಯೋ ಎಣ್ಣೆಗೆ ಕೈ ಹಾಕಿ ವಡೆ ತೆಗೆದ ಭಕ್ತರು: ಕುಮಟಾದಲ್ಲೊಂದು ಅಚ್ಚರಿ ಉತ್ಸವ

ಒಟ್ಟಾರೆಯಾಗಿ ಪಿವಿಸಿ ಪೈಪಿನ ವೆಚ್ಚವಷ್ಟೇ ಭರಿಸಿ, ಸಬ್ಸಿಡಿ ಪಡೆದು ಗ್ರಾಮವು ನೈಸರ್ಗಿಕವಾಗಿ ಸಿಗುವ ಮಳೆ ನೀರನ್ನು ಬಳಸಿ ಸಾಧನೆ ಮಾಡಿದೆ. ಅಡುಗೆ ಕೆಲಸದಿಂದ ಹಿಡಿದು ಇಂಟರ್​ನೆಟ್, ದೂರವಾಣಿ, ಟಿವಿ ಎಲ್ಲವೂ ಇದೇ ವಿದ್ಯುತ್​ನಿಂದ ನಡೆಯುತ್ತಿದೆ. ತುಳಗೇರಿ ಗ್ರಾಮದ ಈ ವಿಶಿಷ್ಠ ಯೋಜನೆ ಎಲ್ಲರಿಗೂ ಮಾದರಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.