ETV Bharat / state

ಭಟ್ಕಳದಲ್ಲಿ ಭರದಿಂದ ಸಾಗಿದ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯ - ವಿದ್ಯುತ್ ಕಂಬಗಳ ಸ್ಥಳಾಂತರ ಸುದ್ದಿ

ಜಾಗಟೆಬೈಲ್ ನಿಂದ ಭಟ್ಕಳ ಕೋರ್ಟ್‌ವರೆಗೆ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದ್ದು, ಹೆದ್ದಾರಿ ಬದಿಯಲ್ಲಿ ವಿದ್ಯುತ್ ಕಂಬಗಳಿಂದ ಕೇಬಲ್‌ಗಳನ್ನು ತೆಗೆದು ವಿದ್ಯುತ್ ಗೋಪುರಗಳಲ್ಲಿ ಅಳವಡಿಸಲಾಗಿದೆ.

Displacement function of power poles in Bhatkal
ಭರದಿಂದ ಸಾಗಿದ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯ
author img

By

Published : Sep 27, 2020, 12:29 PM IST

ಭಟ್ಕಳ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಂದುವರಿದಿದ್ದು, ಭಟ್ಕಳದಲ್ಲಿ ಹೆಸ್ಕಾಂ ಇಲಾಖೆಯಿಂದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕೆಲಸ ಭರದಿಂದ ಸಾಗಿದೆ.

ಭಟ್ಕಳ ಜಾಗಟೆಬೈಲ್ ರಾಷ್ಟ್ರೀಯ ಹೆದ್ದಾರಿಯಿಂದ ಪುಷ್ಪಾಂಜಲಿ ಕ್ರಾಸ್‌ವರೆಗಿನ ಹೆದ್ದಾರಿಯಲ್ಲಿ ಸಿಮೆಂಟ್ ಕಂಬಗಳನ್ನು ತೆಗೆದು ವಿದ್ಯುತ್ ಗೋಪುರಗಳನ್ನು ಅಳವಡಿಸಲು ಯೋಜಿಸಲಾಗಿದೆ ಎಂದು ಭಟ್ಕಳ ಹೆಸ್ಕಾಂನ ಸಹಾಯಕ ಎಂಜಿನಿಯರ್​ ಮಂಜುನಾಥ್ ತಿಳಿಸಿದ್ದಾರೆ.

ಭರದಿಂದ ಸಾಗಿದ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯ

ಇದೇ ಯೋಜನೆಯಡಿ, ವಿದ್ಯುತ್ ಗೋಪುರದ ಜಾಗಟೆಬೈಲ್ ನಿಂದ ಭಟ್ಕಳ ಕೋರ್ಟ್‌ವರೆಗೆ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದ್ದು, ಹೆದ್ದಾರಿ ಬದಿ ಲೈನ್‌ಮನ್‌ಗಳು ಮತ್ತು ಎಂಜಿನಿಯರ್‌ಗಳು ವಿದ್ಯುತ್ ಕಂಬಗಳಿಂದ ಕೇಬಲ್‌ಗಳನ್ನು ತೆಗೆದು ವಿದ್ಯುತ್ ಗೋಪುರಗಳಲ್ಲಿ ಅಳವಡಿಸಿದರು.

30 ಮೀಟರ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಶಮ್ಸುದ್ದೀನ್ ವೃತ್ತದಲ್ಲಿ ಫ್ಲೈ ಓವರ್ ಆಗಲಿದೆ ಎಂದು ಹೆಸ್ಕಾಂ ಅಧಿಕಾರಿ ತಿಳಿಸಿದ್ದಾರೆ. ಇಲ್ಲಿ ವಿದ್ಯುತ್ ಕೇಬಲ್, ಸರ್ಕಲ್ ನ ಆಸುಪಾಸಿನ ಮನೆಗಳಿಗೆ ಹಾದುಹೋಗುವ ಸಾಧ್ಯತೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು, 15 ಮೀಟರ್ ಉದ್ದದ ವಿದ್ಯುತ್ ಗೋಪುರದಲ್ಲಿ ಜಾಗಟೆಬೈಲ್ ‌ನಿಂದ ಪುಷ್ಪಾಂಜಲಿ ಥಿಯೇಟರ್ ಕ್ರಾಸ್‌ಗೆ ವಿದ್ಯುತ್ ಕೇಬಲ್ ಅಳವಡಿಸಲು ಹೆಸ್ಕಾಂ ಯೋಜಿಸಲಾಗಿದೆ.

ಭಟ್ಕಳ ಟೌನ್‌ನಲ್ಲಿ ಅಂಡರ್ ಗ್ರೌಂಡ್ ಕೇಬಲ್‌ಗಳನ್ನು ಹಾಕುವ ಪ್ರಸ್ತಾಪವನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದನ್ನು ಒಪ್ಪಿಕೊಂಡರೆ, ನಗರ ಪ್ರದೇಶಗಳಲ್ಲಿ ಆ ವ್ಯವಸ್ಥಯಲ್ಲಿಯೇ ಕೇಬಲ್‌ಗಳನ್ನು ಅಳವಡಿಸ ಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.