ETV Bharat / state

ಕೊರೊನಾ ಜೊತೆಗೆ ಮಂಗನ ಕಾಯಿಲೆ ಭೀತಿ.. ಬೇಕಿದೆ ಶಾಶ್ವತ ಪರಿಹಾರ!

ಈವರೆಗೆ ಸುಮಾರು 33 ಜನರಿಗೆ ಪಾಸಿಟಿವ್ ಬಂದಿದ್ದು, 1 ಸಾವು ಸಂಭವಿಸಿದೆ. ಇದರ‌ ಜೊತೆಗೆ ತಾಲೂಕಿನಲ್ಲಿ 60ಕ್ಕೂ ಹೆಚ್ಚು ಮಂಗಗಳ ಸಾವು ಸಂಭವಿಸಿದೆ. 23 ಸಾವಿರ ಚುಚ್ಚುಮದ್ದುಗಳನ್ನು ಈಗಾಗಲೇ ನೀಡಲಾಗಿದೆ. ಆದ್ರೂ ಕೂಡಾ ಮಂಗನಕಾಯಿಲೆ ಹತೋಟಿಗೆ ಬರುತ್ತಿಲ್ಲ. ಕಳೆದ ವರ್ಷವೂ ಸಹ ಇದೇ ರೀತಿ ಸಾವು-ನೋವುಗಳು ಸಂಭವಿಸಿವೆ.

Disease in uttarakannada
ಕೊರೊನಾ ಜೊತೆಗೆ ಮಂಗನ ಕಾಯಿಲೆ ಭೀತಿ ; ಬೇಕಿದೆ ಶಾಶ್ವತ ಪರಿಹಾರ
author img

By

Published : Apr 14, 2020, 11:06 AM IST

ಶಿರಸಿ : ಕಳೆದ ವರ್ಷ 12 ಜನರನ್ನ ಬಲಿ ಪಡೆದು ಹಲವರನ್ನ ನರಳುವಂತೆ ಮಾಡಿದ್ದ ಮಂಗನಕಾಯಿಲೆ ಈ ವರ್ಷ ಕೂಡಾ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ತನ್ನ ಪ್ರತಾಪ ತೋರಿಸುತ್ತಿದೆ.

ಕೊರೊನಾ ಜೊತೆಗೆ ಮಂಗನ ಕಾಯಿಲೆ ಭೀತಿ.. ಬೇಕಿದೆ ಶಾಶ್ವತ ಪರಿಹಾರ

ಸಿದ್ದಾಪುರ ತಾಲೂಕಿನಲ್ಲಿ 220 ಮಂಗನಕಾಯಿಲೆಯ ರಕ್ತದ ಮಾದರಿ ಸಂಗ್ರಹಿಸಲಾಗಿದೆ. ಸುಮಾರು 160 ಮಾದರಿಗಳ ವರದಿ ಬಂದಿದೆ. ಈವರೆಗೆ ಸುಮಾರು 33 ಜನರಿಗೆ ಪಾಸಿಟಿವ್ ಬಂದಿದ್ದು, 1 ಸಾವು ಸಂಭವಿಸಿದೆ. ಇದರ‌ ಜೊತೆಗೆ ತಾಲೂಕಿನಲ್ಲಿ 60ಕ್ಕೂ ಹೆಚ್ಚು ಮಂಗಗಳ ಸಾವು ಸಂಭವಿಸಿದೆ. 23 ಸಾವಿರ ಚುಚ್ಚುಮದ್ದುಗಳನ್ನು ಈಗಾಗಲೇ ನೀಡಲಾಗಿದೆ. ಆದ್ರೂ ಕೂಡಾ ಮಂಗನಕಾಯಿಲೆ ಹತೋಟಿಗೆ ಬರುತ್ತಿಲ್ಲ. ಕಳೆದ ವರ್ಷವೂ ಸಹ ಇದೇ ರೀತಿ ಸಾವು-ನೋವುಗಳು ಸಂಭವಿಸಿವೆ. ಸರ್ಕಾರ ಇದನ್ನು ತಕ್ಷಣ ಹತೋಟಿಗೆ ತರಬೇಕು ಎನ್ನುವುದು ಜನರ ಬೇಡಿಕೆಯಾಗಿದೆ.‌

ಕಳೆದ ವರ್ಷ 12 ಜನರು ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದು, ಸಿದ್ದಾಪುರದ ಕ್ಯಾದಗಿ, ಹೊನ್ನೆಘಟಗಿ, ಬಾಳಗೋಡ, ಬೇಕಾರು, ನೆಗ್ಗುಬೈಲು ಹೀಗೆ ವಿವಿಧ ಗ್ರಾಮಗಳಲ್ಲಿ ಮಂಗನ ಕಾಯಿಲೆ ಭೀತಿ ಹೆಚ್ಚಾಗಿ ಆವರಿಸಿದೆ. ಪ್ರತಿ ವರ್ಷ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತಿದ್ದರೂ ಸರ್ಕಾರ ಸೂಕ್ತ ತುರ್ತು ಕ್ರಮಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ಅಸಮಾಧಾನವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.