ಕಾರವಾರ: ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಅಂಕೋಲಾದ ಹೊನ್ನಳ್ಳಿಯ ವೃಕ್ಷಮಾತೆ ತುಳಸಿ ಗೌಡ ಅವರ ಮನೆಗೆ ಮಾಜಿ ಸಚಿವ ಹಾಗು ಹಾಲಿ ಶಾಸಕ ಆರ್. ವಿ. ದೇಶಪಾಂಡೆ ಭೇಟಿ ನೀಡಿ ಸನ್ಮಾನಿಸಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಇಂದು ವಿಶ್ವದಲ್ಲಿಯೇ ಚರ್ಚೆಯಾಗುತ್ತಿರುವ ವಿಷಯವಾಗಿದೆ. ತುಳಸಜ್ಜಿ ಅವರು ನಮಗೆಲ್ಲರಿಗೂ ಮಾದರಿಯಾಗಿದ್ದಾರೆ. 30 ಕ್ಕೂ ಹೆಚ್ಚು ವರ್ಷಗಳಿಂದ ಗಿಡಗಳನ್ನು ಪೋಷಿಸುತ್ತಿರುವ ಅವರು ಲಕ್ಷಾಂತರ ಮರಗಳನ್ನು ಬೆಳೆಸಿ ವನದೇವತೆಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜಿಲ್ಲೆಯ ಕರಾವಳಿ ಭಾಗದಲ್ಲಿರುವ ಹಾಲಕ್ಕಿ ಒಕ್ಕಲಿಗ ಸಮಾಜ, ಗೌಳಿ, ಕುಣಬಿ ಜನಾಂಗಗಳು ಬಡವರಾಗಿದ್ದು ಹಿಂದುಳಿದಿವೆ. ಇವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಕೂಗು ಕಳೆದ ಕೆಲ ವರ್ಷಗಳಿಂದ ಕೇಳುತ್ತಿದೆ. ಈ ಬಗ್ಗೆ ಹಾಲಕ್ಕಿ ಸಮಾಜದವರೂ ಸೇರಿದಂತೆ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು ಹೇಳಿದರು.