ಕಾರವಾರ: ಬೆಳಕಿನ ಹಬ್ಬ ದೀಪಾವಳಿಯ ಹಿನ್ನೆಲೆ ಪಟ್ಟಣದಲ್ಲಿ ವಾಹನಗಳಿಗೆ ಪೂಜೆ ಮಾಡುವ ಮುಖಾಂತರ ಆಚರಣೆ ಮಾಡಲಾಯಿತು.
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೂ ಸರ್ಕಾರಿ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ಸಂಜೆ ಎಲ್ಲೆಡೆ ಲಕ್ಷ್ಮಿ ಪೂಜೆ ನೆರವೇರಿತು. ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಸಿಹಿ ತಿಂಡಿಗಳು ಹಾಗೂ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿ ನಡೆಯಿತು.
ಅಲ್ಲಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಕೂಡ ಉಂಟಾಗಿತ್ತು.