ಶಿರಸಿ: ಮೀಸಲಾತಿ ಸೂಕ್ಷ್ಮ ವಿಚಾರವಾಗಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಲಿದ್ದಾರೆ. ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಬೇಡ್ತಿ ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಕಲ್ಯಾಣ ಉಪಚುನಾವಣೆಗೆ ಸ್ಪರ್ಧಿಸುವುದಿಲ್ಲ, ಇದು ಗಾಳಿ ಸುದ್ದಿ. ಕೇವಲ ಉಸ್ತುವಾರಿ ಮಾತ್ರ, ನಾವು ಉಪಚುನಾವಣೆ ಗೆಲ್ಲುತ್ತೇವೆ ಎಂದರು.
ಓದಿ : ದೇಶ ಕಟ್ಟುವಲ್ಲಿ ಶಿಕ್ಷಣದ ಪಾತ್ರ ನಿರ್ಣಾಯಕ: ಡಿಸಿಎಂ ಅಶ್ವತ್ಥ ನಾರಾಯಣ
ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಅಲ್ಲಿನ ಸರ್ಕಾರ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರ ಸರ್ಕಾರದ್ದು ಮನೆಯೊಂದು ಮೂರು ಬಾಗಿಲು, ಅವರಲ್ಲೇ ಸಹಮತವಿಲ್ಲ ಎಂದರು. ಕೆಎಸ್ಆರ್ಟಿಸಿ ನೌಕರರ ಹತ್ತು ಬೇಡಿಕೆಯಲ್ಲಿ 8 ಈಡೇರಿಸಿದ್ದೇವೆ. ನಾಲ್ಕು ಬೇಡಿಕೆ ಈಡೇರಿಸಲು ಸಮಯಾವಕಾಶ ಬೇಕು. ನೌಕರರೊಂದಿಗೆ ಇನ್ನೆರಡು ಸಭೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ನಾವು ಒಪ್ಪಿಕೊಂಡ ಬೇಡಿಕೆ ಈಡೇರಿಸುತ್ತೇವೆ ಎಂದರು.
ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕೊರೊನಾ ಬಂದ ನಂತರ ಹಣಕಾಸಿನ ವ್ಯವಹಾರದಲ್ಲಿ ಏರುಪೇರಾಗಿರುವುದು ನಿಜ.
ಸಿದ್ದರಾಮಯ್ಯ ನಮ್ಮನ್ನು ಟೀಕೆ ಮಾಡ್ತಾನೆ ಇರ್ತಾರೆ. ಅವರು ಇರೋದೆ ಟೀಕೆ ಮಾಡೋಕೆ, ಮತ್ತೇನು ಹೊಗಳ್ತಾರಾ ಎಂದರು.