ETV Bharat / state

ದಾಂಡೇಲಿಯ ಜಿಟಿಟಿಸಿ ಕೇಂದ್ರಕ್ಕೆ ಡಿಸಿಎಂ ಅಶ್ವತ್ಥ್ ನಾರಾಯಣ ಚಾಲನೆ - ಉತ್ತರಕನ್ನಡ

ಕೌಶಲ್ಯಾಭಿವೃದ್ಧಿ ಅಂದರೆ ಉತ್ತಮ ಗುಣಮಟ್ಟದ ತರಬೇತಿ ಸಿಗಬೇಕಾಗುತ್ತದೆ. ಅದರಲ್ಲೂ ಯುವಜನರಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡುವುದರ ಜತೆಗೆ ಅದಕ್ಕೆ ಸರಿಹೊಂದುವ ಮಾರ್ಗದರ್ಶನವನ್ನೂ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ..

ಜಿಟಿಟಿಸಿ ಕೇಂದ್ರಕ್ಕೆ ಚಾಲನೆ
ಜಿಟಿಟಿಸಿ ಕೇಂದ್ರಕ್ಕೆ ಚಾಲನೆ
author img

By

Published : Sep 15, 2020, 3:23 PM IST

ಬೆಂಗಳೂರು : ಹೊಸ ಹೊಸ ರೀತಿಯ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಲು ಸರ್ಕಾರ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದೆ. ಉದ್ಯೋಗ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಹೇಳಿದರು.

ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಸ್ಥಾಪಿಸಲಾಗಿರುವ ಜಿಟಿಟಿಸಿ ಕೇಂದ್ರವನ್ನು ಆನ್​ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಈ ಕೇಂದ್ರದ ಮೂಲಕ ರಾಜ್ಯದ ವಾಯವ್ಯ ಭಾಗದ ಯುವಜನರಿಗೆ ಉತ್ತಮ ಗುಣಮಟ್ಟದ ತರಬೇತಿ ಸಿಗುವುದರ ಜತೆಗೆ, ಉತ್ತಮ ರೀತಿಯ ಉದ್ಯೋಗಾವಕಾಶಗಳೂ ಸಿಗಲಿವೆ ಎಂದರು.

ಕೌಶಲ್ಯಾಭಿವೃದ್ಧಿ ಅಂದರೆ ಉತ್ತಮ ಗುಣಮಟ್ಟದ ತರಬೇತಿ ಸಿಗಬೇಕಾಗುತ್ತದೆ. ಅದರಲ್ಲೂ ಯುವಜನರಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡುವುದರ ಜತೆಗೆ ಅದಕ್ಕೆ ಸರಿಹೊಂದುವ ಮಾರ್ಗದರ್ಶನವನ್ನೂ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಡಿಸಿಎಂ ಹೇಳಿದರು.

ಜಗತ್ತು ಕಂಡ ಸರ್ವಶ್ರೇಷ್ಠ ಎಂಜಿನಿಯರ್‌ಗಳಲ್ಲಿ ಒಬ್ಬರಾಗಿದ್ದ ಸರ್‌ ಎಂ ವಿಶ್ವೇಶ್ವರಯ್ಯ ಅವರ ಹುಟ್ಟಿದ ದಿನವಾದ ಇಂದು ನಾವು ಎಂಜಿನಿಯರುಗಳ ದಿನವೆಂದು ಆಚರಿಸುತ್ತೇವೆ. ಇಂತಹ ಒಳ್ಳೆಯ ದಿನದಂದು ಜಿಟಿಟಿಸಿ ಕೇಂದ್ರವನ್ನು ಆರಂಭ ಮಾಡಿದ್ದು ಅತ್ಯಂತ ಅರ್ಥಪೂರ್ಣ. ಬೆಳಗಾವಿ, ಉತ್ತರಕನ್ನಡ ಮುಂತಾದ ಪ್ರದೇಶಗಳಿಗೆ ಈ ಕೇಂದ್ರದಿಂದ ಹೆಚ್ಚಿನ ಪ್ರಯೋಜನ ಆಗಲಿ ಎಂದು ಉಪಮುಖ್ಯಮಂತ್ರಿ ಹಾರೈಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.