ETV Bharat / state

ಉತ್ತರ ಕನ್ನಡದಲ್ಲಿ ಸರಳ ಬಕ್ರೀದ್ ಆಚರಣೆಗೆ ಜಿಲ್ಲಾಧಿಕಾರಿ ಸೂಚನೆ

author img

By

Published : Jul 30, 2020, 4:08 PM IST

ಕೊರೊನಾ ಸೋಂಕು ಹರಡುವುದನ್ನು ತಡೆಯುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಹಾಗಾಗಿ ಹಬ್ಬವನ್ನು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸರಳವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಸೂಚಿಸಿದರು.

Bakrid preparations in uttarakannada
Bakrid preparations in uttarakannada

ಕಾರವಾರ: ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಕ್ರೀದ್ ಹಬ್ಬವನ್ನು ಮುಂಜಾಗ್ರತೆಯೊಂದಿಗೆ ಸರಳವಾಗಿ ಆಚರಿಸುವ ಮೂಲಕ ಸಮಾಜದ ಆರೋಗ್ಯ ಕಾಪಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು, ಪೊಲೀಸ್ ಅಧಿಕಾರಿಗಳು, ಹಿಂದು ಹಾಗೂ ಮುಸ್ಲಿಂ ಮುಖಂಡರೊಂದಿಗೆ ಶಾಂತಿ ಪಾಲನಾ ಸಭೆ ನಡೆಸಿ ಮಾತನಾಡಿದ ಅವರು, ಧಾರ್ಮಿಕ ಹಬ್ಬಗಳನ್ನು ಆಚರಿಸುವುದು ಜನರ ಹಕ್ಕು. ಆದರೆ ಇದೀಗ ಕೊವಿಡ್-19 ಎಲ್ಲೆಡೆ ಹಬ್ಬುತ್ತಿದ್ದು, ಇದನ್ನು ತಡೆಯುವ ಜವಾಬ್ದಾರಿ ಕೂಡಾ ಪ್ರತಿಯೊಬ್ಬರ ಮೇಲಿದೆ. ಹಾಗಾಗಿ ಹಬ್ಬವನ್ನು ಸರಳವಾಗಿ ಮತ್ತು ಯಾವುದೇ ಗಲಾಟೆಗಳು ನಡೆಯದಂತೆ ಆಚರಿಸಬೇಕಾಗಿದೆ ಎಂದರು.

ಹಬ್ಬವನ್ನು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಆಚರಿಸಬೇಕು. ಆಯಾ ಮಸೀದಿಗಳಲ್ಲಿ ಗರಿಷ್ಠ 50 ಜನರು ಮೀರದಂತೆ ಸಾಮೂಹಿಕ ಪ್ರಾರ್ಥನೆ ಮಾಡಬಹುದು. ಒಂದು ವೇಳೆ ಅಧಿಕ ಜನರು ಆಗಮಿಸಿದ್ದಲ್ಲಿ 2 ಅಥವಾ 3 ಬ್ಯಾಚ್‍ನಂತೆ ಆಯಾ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ಸರ್ಕಾರ ನಿರ್ದೇಶನ ನೀಡಿದ್ದು, ಈ ಆದೇಶ ಪಾಲನೆ ಆಗಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ಕೊರೊನಾ ಹಿನ್ನೆಲೆ ಈ ಬಾರಿ ಹಿಂದೂ ಅಥವಾ ಮುಸ್ಲಿಂ ಧಾರ್ಮಿಕ ಹಬ್ಬಗಳನ್ನು ಮೊದಲಿನಂತೆ ಆಚರಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಜನರ ಸಹಕಾರ ಅತ್ಯಗತ್ಯ. ಧಾರ್ಮಿಕ ಮುಖಂಡರು ಜನರಲ್ಲಿ ಮುಂಚಿತವಾಗಿ ತಿಳುವಳಿಕೆ ನೀಡುವ ಮೂಲಕ ಆರೋಗ್ಯಕರ ಹಬ್ಬ ಆಚರಿಸುವಂತಾಗಬೇಕು ಎಂದರು.

ಅಲ್ಲದೇ, ರಾಜ್ಯ ವಕ್ಫ್ ಮಂಡಳಿ ಬಕ್ರೀದ್ ಹಬ್ಬವನ್ನು ಆಚರಿಸಲು ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದು, ಅದರನ್ವಯ ಜನರು ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಿಕೊಳ್ಳಬೇಕು. ಪ್ರಾರ್ಥನೆ ಮಾಡುವವರ ನಡುವೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಪ್ರಾರ್ಥನೆಗೆ ಬರುವವರು ತಮ್ಮ-ತಮ್ಮ ಮನೆಗಳಿಂದಲೇ ಮ್ಯಾಟ್ ಕಡ್ಡಾಯವಾಗಿ ತರಬೇಕು. ಮಸೀದಿಗಳಲ್ಲಿ ಪ್ರವೇಶಿಸುವ ಮೊದಲು ದೇಹದ ತಾಪಮಾನವನ್ನು ತಪಾಸಣೆ ಮಾಡಿಸಿಕೊಳ್ಳಬೇಕು. 60 ವರ್ಷ ಮೇಲ್ಪಟ್ಟ 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡುವಂತೆ ತಿಳಿಸಬೇಕು. ಅಪರಿಚಿತರು ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಬಂದಲ್ಲಿ ಅವರ ಬಗ್ಗೆ ವಿಶೇಷ ಗಮನ ಹರಿಸಬೇಕು. ಇದಕ್ಕಾಗಿ ಒಂದು ರೆಜಿಸ್ಟ್ರೇಷನ್ ಪುಸ್ತಕವನ್ನು ನಿರ್ವಹಿಸುವುದು ಸೂಕ್ತವಾಗಿರುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.