ಕಾರವಾರ: ಜಾತ್ರೆಗಳನ್ನು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ. ಭಿನ್ನ-ವಿಭಿನ್ನವಾದ ಆಚರಣೆಗಳಿಂದಲೇ ಈ ಜಾತ್ರೆಗಳು ಜನರನ್ನು ಆಕರ್ಷಿಸುತ್ತವೆ.
ಕಾರವಾರದ ಬೈತಖೋಲ ಗ್ರಾಮದಲ್ಲಿ ಪ್ರತಿವರ್ಷದಂತೆ ನಡೆದ ಭೂದೇವಿ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಆಚರಿಸುವ ದಹಿಂಕಾಲ ಉತ್ಸವ ಬುಧವಾರ ಅದ್ದೂರಿಯಾಗಿ ನಡೆಯಿತು.
ಇದನ್ನೂ ಓದಿ: ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯಿಂದ ಪ್ರತಿಭಟನೆಗೆ ನಿರ್ಧಾರ
ಎರಡು ದಿನಗಳ ಕಾಲ ಭೂದೇವಿಗೆ ಪೂಜೆ ಸಲ್ಲಿಸಿದ ಇಲ್ಲಿನ ಸ್ಥಳೀಯರು, ಜಾತ್ರೆಯ ಪ್ರಯುಕ್ತ ಮನೆಗಳ ಎದುರಿನ ರಸ್ತೆಗೆ ತೋರಣಗಳನ್ನು ಕಟ್ಟಿದ್ದರು. ಇದರ ಜೊತೆಗೆ ಹೂವು, ಬಗೆ ಬಗೆಯ ಹಣ್ಣುಗಳು, ತರಕಾರಿ, ತಿಂಡಿ ಪೊಟ್ಟಣಗಳು ಸೇರಿದಂತೆ ತಂಪು ಪಾನೀಯಗಳನ್ನು ಕಟ್ಟಿರುತ್ತಾರೆ.
ಜಾತ್ರೆಯ ಕೊನೆಯ ದಿನವಾದ ಬುಧವಾರ ದಹಿಂಕಾಲ ಉತ್ಸವವನ್ನು ಆಚರಿಸಿದ ಬಡಾವಣೆಗಳ ಯುವಕರು ಕುಣಿದು ಕುಪ್ಪಳಿಸುತ್ತ, ಒಬ್ಬರ ಮೇಲೊಬ್ಬರು ಪಿರಮಿಡ್ ಆಕಾರದಲ್ಲಿ ನಿಂತು ತೋರಣಗಳಲ್ಲಿನ ತಿಂಡಿ, ತಿನಿಸುಗಳನ್ನು ತೆಗೆದು ಹಂಚುವ ಮೂಲಕ ಸಂಭ್ರಮಿಸಿದರು.
ಅನಾದಿ ಕಾಲದಿಂದಲೂ ಬಂದ ಈ ಆಚರಣೆ ಸಾಕಷ್ಟು ಈ ಭಾಗದಲ್ಲಿ ಸಾಕಷ್ಟು ಜನಪ್ರಿಯವಾಗಿದೆ.