ETV Bharat / state

ಯೋಧರ ಹೆಸರಲ್ಲಿ ಸೈಬರ್ ಕ್ರೈಂ: ನಿಮಗೂ ಬರಬಹುದು ಇಂತಹ ಕರೆ ಎಚ್ಚರ! - ನಿಮಗೂ ಬರಬಹುದು ಇಂತಹ ಕರೆ ಎಚ್ಚರ

ಯೋಧರ ಸಂಸ್ಥೆಯ ಹೆಸರು ಹೇಳಿ ಶಾಲೆ ಅಥವಾ ಇತರ ಕಾರಣಗಳನ್ನು ನೀಡಿ ವ್ಯವಹಾರ ನಡೆಸುವುದಾಗಿ ವಂಚನೆ ಮಾಡುತ್ತಿರುವ ಬಗ್ಗೆ ಕಾರವಾರದಲ್ಲಿ ತಿಳಿದು ಬಂದಿದೆ.

Cyber  crime in the name of soldier Karwar
ಯೋಧರ ಹೆಸರಲ್ಲಿ ಸೈಬರ್ ಕ್ರೈಂ
author img

By

Published : Nov 30, 2022, 10:28 PM IST

ಕಾರವಾರ(ಉತ್ತರ ಕನ್ನಡ): ಆನ್​ಲೈನ್​ನಲ್ಲಿ ಬ್ಯಾಂಕರ್​ಗಳು ಎಂದು ಹೇಳಿ ಒಟಿಪಿ ಪಡೆದು ಹಣ ವಂಚನೆ ಮಾಡುವ ಬಗ್ಗೆ ಜನಕ್ಕೆ ಜಾಗೃತಿ ಮೂಡಿದ ನಂತರ ವಂಚಕರು ಕ್ರಮ ಬದಲಾಯಿಸಿದ್ದಾರೆ. ಹಣಕ್ಕಾಗಿ ಅವರು ದೇಶದ ಹೆಮ್ಮೆಯ ಯೋಧರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಕಾರವಾರದ ಲಲಿತ್ ಎಂಟರ್‌ಪ್ರೈಸರ್ಸ್‌ ಮಾಲೀಕ ಶುಭಂ ಕಳಸ ಎಂಬುವವರಿಗೆ ಕರೆ ಮಾಡಿದ ವ್ಯಕ್ತಿಯೋರ್ವ ಸಿಐಎಸ್‌ಎಫ್ ಯೋಧನೆಂದು ಹೇಳಿಕೊಂಡು ಪರಿಚಯ ಮಾಡಿಕೊಂಡಿದ್ದ. ತಾಲೂಕಿನ ಮಾಜಾಳಿಯ ಬಾವಳ್ ಗ್ರಾಮದ ಫಿಶರೀಸ್ ಶಾಲೆಗೆ 2,000 ಸಿಮೆಂಟ್ ಬ್ಲಾಕ್ಸ್ ಬೇಕಿದೆ ಎಂದು ಹೇಳಿದ್ದ ವಂಚಕ, ಶಾಲೆಯ ವಿಳಾಸದ ಗೂಗಲ್ ಮ್ಯಾಪ್ ಕೂಡ ಕಳುಹಿಸಿ ಫೋನ್ ಪೇ ಮೂಲಕ ಹಣ ಸಂದಾಯ ಮಾಡುವುದಾಗಿ ನಂಬಿಸಿದ್ದಾನೆ.

ಯೋಧರ ಹೆಸರಲ್ಲಿ ಸೈಬರ್ ಕ್ರೈಂ ನಡೆಯುತ್ತಿರುವ ಬಗ್ಗೆ ಎಚ್ಚರ ಇರಲಿ

ಈತನ ಮಾತು ನಂಬಿದ ಉದ್ಯಮಿ ಶುಭಂ ತಮ್ಮ ಟ್ರಕ್ ಮೂಲಕ ಸಿಮೆಂಟ್ ಬ್ಲಾಕ್‌ಗಳನ್ನ ಕಳುಹಿಸಿಕೊಟ್ಟಿದ್ದಾರೆ. ಬ್ಲಾಕ್‌ಗಳು ಶಾಲೆಗೆ ತೆರಳುವಷ್ಟರೊಳಗೆ ಸೇನೆಯ ಸಿಬ್ಬಂದಿ ಎಂದು ಹೇಳಿಕೊಂಡು ಕರೆ ಮಾಡಿದಾತ ಬ್ಲಾಕ್‌ಗಳ ಹಣ ಸಂದಾಯ ಮಾಡಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಒಂದು ರೂಪಾಯಿ ಕಳುಹಿಸುವಂತೆ ತಿಳಿಸಿದ್ದಾರೆ. ಶುಭಂ ಕೂಡ ಸ್ಕ್ಯಾನ್ ಮಾಡಿ ಹಣ ಹಾಕಿದ್ದಾರೆ. ಈ ವೇಳೆ ಲೋಡ್ ತೆಗೆದುಕೊಂಡು ತೆರಳಿದ್ದ ಲಾರಿ ಚಾಲಕ ಕರೆಮಾಡಿ ಶಾಲೆಗೆ ಯಾವುದೇ ಸಿಮೆಂಟ್ ಬ್ಲಾಕ್‌ಗಳ ಅವಶ್ಯಕತೆ ಇಲ್ಲ ಎಂದು ಹೇಳುತ್ತಿರುವುದಾಗಿ ತಿಳಿಸಿದ್ದಾನೆ.

ಇದೇ ವೇಳೆ ಶುಭಂ ಅವರ ಖಾತೆಯಿಂದ 500 ರೂಪಾಯಿ ಕಡಿತಗೊಂಡಿದ್ದು, ತಕ್ಷಣವೇ ತಮ್ಮ ಖಾತೆಯಲ್ಲಿದ್ದ ಸಂಪೂರ್ಣ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡ ಶುಭಂ ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

Cyber  crime in the name of soldier
ಯೋಧರ ಹೆಸರಲ್ಲಿ ಸೈಬರ್ ಕ್ರೈಂ

ಕಾರವಾರದಲ್ಲಿ ಈ ರೀತಿಯ ವಂಚನೆ ಯತ್ನ ನಡೆದಿರುವುದು ಇದೇ ಮೊದಲೇನಲ್ಲ. ನಗರದ ಹೂವು ಹಣ್ಣಿನ ವ್ಯಾಪಾರಿ, ಹೊಟೇಲ್ ಉದ್ಯಮಿ, ಮೀನು ವ್ಯಾಪಾರಿಗೂ ಸಹ ಯೋಧರ ಹೆಸರಿನಲ್ಲಿ ವಿವಿಧ ಆರ್ಡರ್ ನೀಡಿ ಹಣ ಪಾವತಿಸಲು ತಾವು ಕಳುಹಿಸುವ ಕ್ಯೂಆರ್ ಕೋಡ್‌ಗೆ ಒಂದು ರೂಪಾಯಿ ಕಳುಹಿಸುವಂತೆ ಹೇಳಿ ಹಣ ಪೀಕಲು ಯತ್ನಿಸಿದ್ದು, ಕೆಲವರು ಹಣವನ್ನು ಕಳೆದುಕೊಂಡಿದ್ದಾರೆ.

ಈ ವಂಚನೆಯಲ್ಲಿ ಸ್ಥಳೀಯರ ಕೈವಾಡ ಇರುವ ಬಗ್ಗೆ ಶಂಕಿಸಲಾಗಿದೆ. ವಂಚನೆ ನಡೆದ ಸಂದರ್ಭದಲ್ಲಿ ಟೋಲ್ ಫ್ರೀ ಸಂಖ್ಯೆ 1930ಗೆ ಕರೆ ಮಾಡಿ ದೂರು ದಾಖಲಿಸುವಂತೆ ಎಸ್​ಪಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಹಣ ಹೂಡಿಕೆ: ನಾಲ್ವರಿಗೆ ಲಕ್ಷಾಂತರ ರೂಪಾಯಿ ವಂಚನೆ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.