ಕಾರವಾರ: ಕಾಳಿ ನದಿಯಿಂದ ಇಲ್ಲಿನ ದೇಶಪಾಂಡೆ ನಗರದ ಕೆಎಸ್ಆರ್ಟಿಸಿ ಡಿಪೋ ಬಳಿ ಬಂದಿದ್ದ ಮೊಸಳೆಯನ್ನು ರಕ್ಷಿಸಿ, ಮರಳಿ ನದಿಗೆ ಬಿಡಲಾಗಿದೆ. ಗುರುವಾರ ಬೆಳಂಬೆಳಗ್ಗೆ ಪಟ್ಟಣದ ಜನವಸತಿ ಪ್ರದೇಶದತ್ತ ಆಗಮಿಸಿದ್ದ ಬೃಹತ್ ಮೊಸಳೆಯನ್ನು ಕಂಡ ಸ್ಥಳೀಯರು ಆತಂಕಗೊಂಡಿದ್ದರು. ತಕ್ಷಣ ವಿಷಯವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು.
ಬಳಿಕ ಸ್ಥಳೀಯ ಯುವಕರು ಸೇರಿ ಹಗ್ಗದ ಸಹಾಯದಿಂದ ಮೊಸಳೆಯ ಬಾಯಿ, ದೇಹವನ್ನು ಬಿಗಿದು ಕಟ್ಟಿ ಹಾಕಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ವಾಹನದ ಮೂಲಕ ಪುನಃ ಕಾಳಿ ನದಿಗೆ ಬಿಟ್ಟಿದ್ದಾರೆ.
ಕಳೆದ ಕೆಲ ದಿನಗಳಿಂದ ಆಗಾಗ್ಗೆ ಮೊಸಳೆಗಳು ನದಿಯಿಂದ ನಗರದೊಳಗೆ ಬರುತ್ತಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
(ಇದನ್ನೂ ಓದಿ: ತಂದೆಯ ಕ್ಷೇತ್ರದಿಂದ ರಾಜಕೀಯ ಅದೃಷ್ಟ ಪರೀಕ್ಷೆಗಿಳಿದು ಸೋತ ಪರಿಕ್ಕರ್ ಮಗ.. ಪಣಜಿಯಲ್ಲಿ ಅರಳಿದ ಕಮಲ)