ETV Bharat / state

ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ - ಪೊಲೀಸರು ತಪಾಸಣೆ

ಬಲಿ ಕೊಡುವ ಉದ್ದೇಶದಿಂದ ರಾಣಿಬೆನ್ನೂರಿನಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಏಳು ಎತ್ತುಗಳು ಹಾಗೂ ಎರಡು ಎಮ್ಮೆಗಳನ್ನು ಹಿಂಸಾತ್ಮಕವಾಗಿ ತುಂಬಿಕೊಂಡು, ನೀರು, ಆಹಾರ ನೀಡದೇ ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.

truck
truck
author img

By

Published : Nov 2, 2020, 11:32 PM IST

ಶಿರಸಿ (ಉತ್ತರ ಕನ್ನಡ): ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಲಾರಿಯೊಂದರಲ್ಲಿ ಸಾಗಿಸಲಾಗುತ್ತಿದ್ದ 9 ಜಾನುವಾರುಗಳನ್ನು ಯಲ್ಲಾಪುರ ಪಟ್ಟಣದ ಜೋಡುಕೆರೆ ಬಳಿ ಪೊಲೀಸರು ರಕ್ಷಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.

ಬಂಧಿತರನ್ನು ಮಂಗಳೂರಿನ ಮಹಮ್ಮದ್‌ ಹುಸೇನ್‌ ಮೊವಾರಿ ಅಬ್ಬಾ, ಸಾದಿಕ್‌ ಇದಿನಬ್ಬಾ, ಬಾತೀಶ ಅಬ್ದುಲ್‌ ರಜಾಕ್‌, ಮಹಮ್ಮದ್‌ ಅರಫಾತ್‌ ಅಬ್ದುಲ್ ಖಾದರ್ ಹಾಗೂ ಮಹಮ್ಮದ್‌ ಹನೀಫ್‌ ಗುಡೆಮನೆ ಖಾದರಸಾಬ್‌ ಎಂದು ಗುರುತಿಸಲಾಗಿದೆ.

cows saved in shirsi
ಜಾನುವಾರುಗಳ ರಕ್ಷಣೆ

ಇವರು ಬಲಿ ಕೊಡುವ ಉದ್ದೇಶದಿಂದ ರಾಣಿಬೆನ್ನೂರಿನಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಏಳು ಎತ್ತುಗಳು ಹಾಗೂ ಎರಡು ಎಮ್ಮೆಗಳನ್ನು ಹಿಂಸಾತ್ಮಕವಾಗಿ ತುಂಬಿಕೊಂಡು, ನೀರು, ಆಹಾರ ನೀಡದೇ ಸಾಗಿಸುತ್ತಿದ್ದ ವೇಳೆ ಪಟ್ಟಣದ ಜೋಡುಕೆರೆ ಬಳಿ ಪೊಲೀಸರು ತಪಾಸಣೆ ನಡೆಸಿದಾಗ ಸಿಕ್ಕಿ ಬಿದ್ದಿದ್ದಾರೆ.

ಲಾರಿಯಲ್ಲಿ ಹಿಂಸಾತ್ಮಕವಾಗಿ ತುಂಬಿದ ಪರಿಣಾಮ ಒಂದು ಎತ್ತು ಮೃತಪಟ್ಟಿದೆ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.