ETV Bharat / state

ಅಕ್ರಮವಾಗಿ ಗೋ ಸಾಗಾಟ: 15 ಜಾನುವಾರುಗಳು ವಶಕ್ಕೆ - Cow Slaughter Prevention Laws in India

ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಕಂಟೇನರ್​​ ಲಾರಿಯನ್ನು ವಶಕ್ಕೆ ಪಡೆದು, ಆರೋಪಿಗಳಿಬ್ಬರನ್ನು ಮಂಕಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

arrest
ಆರೋಪಿಗಳ ಬಂಧನ
author img

By

Published : Jun 19, 2020, 6:50 PM IST

ಹೊನ್ನಾವರ: ಮಂಕಿ ಪೊಲೀಸರು ಮತ್ತೊಂದು ಭರ್ಜರಿ ಬೇಟೆಯಾಡಿದ್ದು, ಅಕ್ರಮವಾಗಿ 15 ಜಾನುವಾರುಗಳನ್ನು ಸಾಗಿಸುತ್ತಿದ್ದ ಕಂಟೇನರ್ ಲಾರಿಯನ್ನು ಹಾಗೂ ಭಟ್ಕಳ ಮೂಲದ ಇಬ್ಬರನ್ನು ಅನಂತವಾಡಿ ಚೆಕ್ ಪೋಸ್ಟ್​​​ನಲ್ಲಿ ಶುಕ್ರವಾರ ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ.

3 ಕೋಣ, ಒಂದು ಎಮ್ಮೆ ಹಾಗೂ 11 ಎತ್ತು ಸೇರಿ 15 ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಲಾರಿಯ ಚಾಲಕ ನಝರುಲ್ಲಾ ಬಶೀರ್ ಸಾಬ್ ಹಾಗೂ ಕ್ಲೀನರ್ ಮಹಮ್ಮದ್ ಹುಸೇನ್ ಇಬ್ಬರನ್ನು ಬಂಧಿಸಲಾಗಿದೆ. ಈ ಕುರಿತು ಮಂಕಿ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾನುವಾರು ಸಾಗಿಸುತ್ತಿದ್ದ ಆರೋಪಿಗಳ ಬಂಧನ

ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಮಂಕಿ ಹಾಗೂ ಮುರುಡೇಶ್ವರ ಠಾಣೆಯ ಸಿಬ್ಬಂದಿ ತಂಡ ಎಎಸ್ಪಿ ಬಿ.ನಿಖಿಲ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.