ETV Bharat / state

ಪರಿಷತ್ ಚುನಾವಣೆ: ಕಾರವಾರದಲ್ಲಿ ಬಂಡಾಯ ಅಭ್ಯರ್ಥಿಯ ಅಸಮಾಧಾನ ಶಮನ - Council Election latest news

ಬಿಜೆಪಿ ಆಯ್ಕೆ ಮಾಡಿರುವ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರ ಗೆಲುವಿಗಾಗಿ ನಾವೆಲ್ಲರೂ ದುಡಿಯುತ್ತೇವೆ. ಅಂಕೋಲಾ ತಾಲೂಕಿನ ಜವಾಬ್ದಾರಿ ಹೊತ್ತು, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದು ಭಾಸ್ಕರ್ ನಾರ್ವೇಕರ್ (Bhaskar Narvekar) ಸ್ಪಷ್ಟಪಡಿಸಿದ್ದಾರೆ.

Council election: Minister Hebbar Meeting  successful with rebel candidate
ಪರಿಷತ್ ಚುನಾವಣೆ: ಕಾರವಾರದಲ್ಲಿ ಬಂಡಾಯ ಅಭ್ಯರ್ಥಿಯ ಅಸಮಾಧಾನ ಶಮನ
author img

By

Published : Nov 23, 2021, 7:05 AM IST

ಕಾರವಾರ: ವಿಧಾನ ಪರಿಷತ್​ ಚುನಾವಣೆ (Council Election) ಬಿಜೆಪಿಯಿಂದ ಟಿಕೆಟ್ ಸಿಗದೇ ಅಸಮಾಧಾನಗೊಂಡು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಅಂಕೋಲಾದ ಭಾಸ್ಕರ್ ನಾರ್ವೇಕರ್ ಅವರ ಮನವೊಲಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ (Minister Shivaram Hebbar) ಯಶಸ್ವಿಯಾಗಿದ್ದು, ನಾರ್ವೇಕರ್ ಕೊನೆಗೂ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಬಿಜೆಪಿಯಲ್ಲಿ ಗಣಪತಿ ಉಳ್ವೇಕರ್ (Ganapati Ulvekar) ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಯಾಗಿದ್ದ ‌ಭಾಸ್ಕರ್ ನಾರ್ವೇಕರ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಕಳೆದ 30 ವರ್ಷದಿಂದ ಪಕ್ಷದಲ್ಲಿ ನಿಷ್ಠಾವಂತರಾಗಿ ದುಡಿಯುತ್ತಿರುವ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಹಿತೈಷಿಗಳನ್ನು ಕೇಳಿ ಮಂಗಳವಾರ ನಾಮಪತ್ರ ಸಲ್ಲಿಸು‌ವುದಾಗಿ ಹೇಳಿದ್ದರು.

ಅದರಂತೆ ಸೋಮವಾರ ಅಂಕೋಲಾ ಮಂಡಲಾಧ್ಯಕ್ಷ ಸಂಜಯ ನಾಯಕ, ವಿಧಾನ ಪರಿಷತ್ ಅಭ್ಯರ್ಥಿ ಗಣಪತಿ ಉಳ್ವೇಕರ್, ಕಾರವಾರ ನಗರಸಭೆಯ ಅಧ್ಯಕ್ಷ ಡಾ.ನಿತಿನ್ ಪಿಕಳೆ ಸೇರಿದಂತೆ ಪ್ರಮುಖರ ಸಮ್ಮುಖದಲ್ಲಿ ಭಾಸ್ಕರ್ ನಾರ್ವೇಕರ್ (Bhaskar Narvekar) ಅವರೊಂದಿಗೆ ಯಲ್ಲಾಪುರದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಸಭೆ ನಡೆಸಿದರು.

ಪಕ್ಷದಲ್ಲಿ ಈ ರೀತಿ ಬಂಡಾಯವಾಗಿ ಸ್ಪರ್ಧೆ ಮಾಡುವುದರಿಂದ ಜನರಿಗೆ ಹಾಗೂ ಮತದಾರರಿಗೆ ತಪ್ಪು ಸಂದೇಶ ಹೋಗುತ್ತದೆ. ಬಿಜೆಪಿ ಎಂದರೆ ಸಂಘಟನೆಯ, ಶಿಸ್ತಿನ ಪಕ್ಷ. ಹೀಗಾಗಿ ಒಗ್ಗಟ್ಟಾಗಿ ಈ ಚುನಾವಣೆಯನ್ನು ನಾವೆಲ್ಲಾ ಎದುರಿಸಬೇಕಿದೆ. ಪಕ್ಷ ಆಯ್ಕೆ ಮಾಡಿರುವ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರನ್ನು ಗೆಲ್ಲಿಸಲು ನಾವು ಶ್ರಮ ವಹಿಸಬೇಕಿದ್ದು, ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದರು.

ಈ ವೇಳೆ, ಮಾತನಾಡಿದ ಭಾಸ್ಕರ್ ನಾರ್ವೇಕರ್, ಬಂಡಾಯವಾಗಿ ಸ್ಪರ್ಧಿಸುವುದಿಲ್ಲ. ಪಕ್ಷದ ತೀರ್ಮಾನಕ್ಕೆ ಬದ್ಧನಿದ್ದೇನೆ. ಪಕ್ಷ ಆಯ್ಕೆ ಮಾಡಿರುವ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರ ಗೆಲುವಿಗಾಗಿ ನಾವೆಲ್ಲರೂ ದುಡಿಯುತ್ತೇವೆ. ಅಂಕೋಲಾ ತಾಲೂಕಿನ ಜವಾಬ್ದಾರಿ ಹೊತ್ತು, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದರು. ಅಂತಿಮವಾಗಿ, ಒಗ್ಗಟ್ಟಾಗಿ ಎಲ್ಲರೂ ಈ ಚುನಾವಣೆ ನಡೆಸುತ್ತೇವೆ. ಮಂಗಳವಾರ ಪ್ರಮುಖರೆಲ್ಲರೂ ಸೇರಿ ಕಾರವಾರದಲ್ಲಿ ನಾಮಪತ್ರ (Nomination) ಸಲ್ಲಿಸುತ್ತೇವೆ ಎಂದು ಶಿವರಾಮ ಹೆಬ್ಬಾರ್ ತಿಳಿಸಿದರು.

ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಪುತ್ರನೂ ಹಗರಣದಲ್ಲಿ ಭಾಗಿ: ಜಾರಿ ನಿರ್ದೇಶನಾಲಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.