ಭಟ್ಕಳ: ಕೊರೊನಾ ಶಂಕೆ ಹಿನ್ನೆಲೆ 42 ವಯಸ್ಸಿನ ಮಹಿಳೆಯೊಬ್ಬರು ನಿನ್ನೆ ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರೊಂದಿಗೆ ಭಟ್ಕಳದಲ್ಲಿ ಐಸೋಲೇಶನ್ (ಪ್ರತ್ಯೇಕ) ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಎರಡಕ್ಕೇರಿದೆ.
ಈ ಮಹಿಳೆ ವಾರದ ಹಿಂದಷ್ಟೇ ಬ್ಯಾಂಕಾಕ್ ನಿಂದ ಭಟ್ಕಳಕ್ಕೆ ವಾಪಸಾಗಿದ್ದು, ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈಕೆಯ ಗಂಟಲಿನ ದ್ರವ್ಯ ಲೇಪವನ್ನು ಪರೀಕ್ಷೆಯಾಗಿ ಶಿವಮೊಗ್ಗಕ್ಕೆ ಕಳುಹಿಸಿಕೊಡಲಾಗಿದೆ. ಈ ನಡುವೆ ಕೊರೊನಾ ಶಂಕೆ ಹಿನ್ನೆಲೆ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದ 40 ವರ್ಷದ ವ್ಯಕ್ತಿಯ ರಕ್ತ ಹಾಗೂ ಗಂಟಲು ದ್ರವದ ಲೇಪನ ಪರೀಕ್ಷಿಸಲಾಗಿದ್ದು, ವರದಿಯಲ್ಲಿ ನೆಗೆಟಿವ್ ಅಂಶ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಆದರೆ, ಇದನ್ನು ಮತ್ತೊಮ್ಮೆ ಪರಿಶೀಲಿಸಿ ದೃಢೀಕರಿಸಿಕೊಳ್ಳಲು ರಕ್ತ ಹಾಗೂ ಗಂಟಲಿನ ದ್ರವ್ಯ ಮಾದರಿಯನ್ನು ಪುಣೆ ಪ್ರಯೋಗಕ್ಕೆ ಕಳುಹಿಸಲಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.