ETV Bharat / state

ಕೊರೊನಾ ಸೋಂಕಿತರು ಭಟ್ಕಳದಿಂದ ಕಾರವಾರಕ್ಕೆ ಶಿಫ್ಟ್​​​​

ಭಟ್ಕಳ ಮೂಲದ ಆರು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಭಟ್ಕಳ ತಾಲೂಕು ಕಚೇರಿಯಿಂದ ಕದಂಬ ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

corona possitive victims shifted to karavar hospital
ಕೊರೋನಾ ಸೋಂಕಿತರನ್ನ ಭಟ್ಕಳದಿಂದ ಕಾರವಾರಕ್ಕೆ ಶಿಫ್ಟ್.
author img

By

Published : Mar 28, 2020, 7:29 PM IST

ಭಟ್ಕಳ: ಕೊರೊನಾ ಸೋಂಕಿತರನ್ನ ಭಟ್ಕಳ‌ ತಾಲೂಕು‌ ಆಸ್ಪತ್ರೆಯಿಂದ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಸದ್ಯ ಭಟ್ಕಳ ಮೂಲದ ಆರು ಜನರಲ್ಲಿ ಸೋಂಕು ದೃಢಪಟ್ಟಿದ್ದು, ತಾಲೂಕು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡಲಾಗುತ್ತಿತ್ತು. ‌ಆಸ್ಪತ್ರೆಯಲ್ಲಿ ಜನರ ಓಡಾಟ ಇರುವ ಕಾರಣ ಸೋಂಕು ಹರಡಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ನಿರ್ಬಂಧಿತ ಪ್ರದೇಶದಲ್ಲಿರುವ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ಕೊಡಲು ಜಿಲ್ಲಾಡಳಿತದಿಂದ ನೌಕಾನೆಲೆ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು.

ನೌಕಾನೆಲೆಯ ಅಧಿಕಾರಿಗಳು ಇದಕ್ಕೆ ಹಸಿರು ನಿಶಾನೆ ತೋರಿದ ಹಿನ್ನೆಲೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡು ಆಂಬ್ಯುಲೆನ್ಸ್ ಮೂಲಕ ಒಬ್ಬೊಬ್ಬರನ್ನೇ ಪತಂಜಲಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ.

ಸೋಂಕಿನ ಶಂಕಿತರಿಗೆ ತಾಲೂಕಿನ ಮುರುಡೇಶ್ವರದ ಆರ್​ಎನ್​ಎಸ್ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಸೋಂಕು ದೃಢಪಟ್ಟ ನಂತರ ಪತಂಜಲಿ ಆಸ್ಪತ್ರೆಗೆ ರವಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.