ಕಾರವಾರ: ಹಾಸ್ಟೆಲ್ ಅಡುಗೆ ಸಹಾಯಕಿ ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 9 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ಬಂದ ಕುಮಟಾ ಮೂಲದ 24 ವರ್ಷದ ಮಹಿಳೆ, 28 ವರ್ಷದ ಮಹಿಳೆ, 42 ವರ್ಷದ ಪುರುಷ, 56 ವರ್ಷದ ಪುರುಷ, ಹೊನ್ನಾವರ ಮೂಲದ 42 ವರ್ಷದ ಪುರುಷ, 67 ವರ್ಷದ ವೃದ್ದೆ, 78 ವರ್ಷದ ವೃದ್ದ, 33 ವರ್ಷದ ಮಹಿಳೆ ಹಾಗೂ ದೆಹಲಿಯಿಂದ ಬಂದ p-7274 ಸಂಖ್ಯೆಯ ಪ್ರಾಥಮಿಕ ಸಂಪರ್ಕ ಹೊಂದಿದ ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್ -2 ನ ಹಾಸ್ಟೆಲ್ ಅಡುಗೆ ಸಹಾಯಕಿಗೂ ಸೋಂಕು ದೃಢಪಟ್ಟಿದೆ.
30 ವರ್ಷದ ಟಿಬೆಟಿಯನ್ ವ್ಯಕ್ತಿಯೋರ್ವ ಇತ್ತೀಚೆಗೆ ಟಿಬೆಟಿಯನ್ ಕ್ಯಾಂಪ್‍ನಲ್ಲಿರುವ ತನ್ನ ಹೆಂಡತಿ ಮನೆಗೆ ಬಂದಿದ್ದ. ಆತನನ್ನು ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಆತನಿಗೆ ಸೋಂಕು ದೃಢಪಟ್ಟ ಬಳಿಕ ಕ್ವಾರಂಟೈನ್ ಕೇಂದ್ರದ ಸಿಬ್ಬಂದಿಯನ್ನು ತಪಾಸಣೆ ಮಾಡಲಾಗಿತ್ತು. ಇದೀಗ ಇದೇ ಹಾಸ್ಟೆಲ್‍ನಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಇಂದು ಸೋಂಕು ದೃಢಪಟ್ಟಿದೆ. ಇದರಿಂದ ಈ ಹಾಸ್ಟೆಲ್‍ನ 54 ಕ್ವಾರಂಟೈನಿಗಳು ಹಾಗೂ ಈಕೆಯ ಮನೆಯಲ್ಲಿನ ನಾಲ್ವರು ಸದಸ್ಯರು, ಒಟ್ಟು 60 ಜನರನ್ನು ಪ್ರಾಥಮಿಕ ಸಂರ್ಪಕಿತರೆಂದು ಗುರುತಿಸಲಾಗಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 156 ಕ್ಕೆ ಏರಿಕೆಯಾಗಿದೆ. 112 ಮಂದಿ ಗುಣಮುಖರಾಗಿದ್ದು, ಇನ್ನು 44 ಮಂದಿ ಸಕ್ರೀಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.