ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೊನಾ ರಣಕೇಕೆ ಹಾಕಿದ್ದು, ಒಂದೇ ದಿನ ಜಿಲ್ಲೆಯ ವಿವಿಧೆಡೆ 24 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಯಲ್ಲಾಪುರದಲ್ಲಿ ಸೋಂಕಿತ ಕಂಡಕ್ಟರ್ ಸಂಪರ್ಕಕ್ಕೆ ಬಂದಿದ್ದ 26, 28, 26, 33, 42 ವರ್ಷದ ಪುರುಷರು ಹಾಗೂ 45ರ ಓರ್ವ ಮಹಿಳೆ ಮತ್ತು ಗೋವಾದಿಂದ ವಾಪಸ್ಸ್ ಆಗಿದ್ದ 33 ವರ್ಷದ ವ್ಯಕ್ತಿಗಳಲ್ಲಿ ಕೊರೊನಾ ಧೃಡಪಟ್ಟಿದೆ.
ಮುಂಡಗೋಡದಲ್ಲಿನ ಟಿಬೇಟಿಯನ್ ಕಾಲೋನಿಯ ಸೋಂಕಿತನ ಸಂಪರ್ಕಕ್ಕೆ ಬಂದಿದ್ದ 37 ಹಾಗೂ 51 ವರ್ಷದ ಪುರುಷ, 83 ವರ್ಷದ ವೃದ್ಧೆ, ಮತ್ತು 26 ವರ್ಷದ ಇಬ್ಬರು ಯುವಕರಲ್ಲಿ ಮತ್ತು ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವಕನಿಗೂ ಸಹ ಸೋಂಕು ಪತ್ತೆಯಾಗಿದೆ.
ಇದಲ್ಲದೆ ಹೊನ್ನಾವರ ಮೂಲದ ದುಬೈನಿಂದ ವಾಪಸ್ಸ್ ಆಗಿದ್ದ 35 ಹಾಗೂ 65 ವರ್ಷದ ಮಹಿಳೆಯರ ಜೊತೆಗೆ 39, 31, 53, 29, ವರ್ಷದ ಪುರುಷರಿಗೂ ಸಹ ಸೋಂಕು ತಗುಲಿದೆ.
ಇನ್ನು ಗೋವಾದ ಸೋಂಕಿತನ ಸಂಪರ್ಕಕ್ಕೆ ಬಂದಿದ್ದ ಕಾರವಾರದ 23 ಹಾಗೂ 25 ವರ್ಷದ ಇಬ್ಬರು ಪುರುಷರು, ಭಟ್ಕಳಕ್ಕೆ ಆಂದ್ರಪ್ರದೇಶದಿಂದ ಆಗಮಿಸಿದ್ದ 50 ವರ್ಷದ ಪುರುಷ, ಮುಂಬೈನಿಂದ ವಾಪಸ್ಸ್ ಆಗಿದ್ದ ಕುಮಟಾದ ಮಾದನಗೇರಿಯ 30 ವರ್ಷದ ಪುರುಷ ಮತ್ತು ಶಿರಸಿಯ 41 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಒಂದೇ ದಿನ 24 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 213 ಪ್ರಕರಣಗಳು ಪತ್ತೆಯಾಗಿದ್ದು, 154 ಮಂದಿ ಬಿಡುಗಡೆಯಾಗಿದ್ದಾರೆ. ಇನ್ನು 59 ಮಂದಿಗೆ ಕಾರವಾರದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಚಿಕಿತ್ಸೆ ಮುಂದುವರಿದಿದೆ.