ETV Bharat / state

ಭಟ್ಕಳದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ: ಜಿಲ್ಲಾಧಿಕಾರಿ ‌ಹರೀಶ್​ ಕುಮಾರ್ - ಕೊರೊನಾ ಸೋಂಕಿತರ ಪ್ರಮಾಣ

ಭಟ್ಕಳದಲ್ಲಿ ಬೇರೆ ಕಾರಣಕ್ಕೆ ಮೃತಪಟ್ಟಿದ್ದು, ಅವರಲ್ಲಿ ಕೋವಿಡ್ ದೃಢಪಟ್ಟಿದೆ. ಇದು ಕೊನೆಯ ಹಂತದಲ್ಲಿ ಪತ್ತೆಯಾದಲ್ಲಿ ಅವರಿಗೆ ಅವರ ಕುಟುಂಬದವರಿಗೆ ಸಮಸ್ಯೆಯಾಗುವುದರೊಂದಿಗೆ ಸಮುದಾಯ ತೊಂದರೆ ಅನುಭವಿಸಬೇಕಾಗುತ್ತದೆ. ಇದರಿಂದ ತಾಲೂಕಾಡಳಿತದ ಅಥವಾ ವೈದ್ಯರನ್ನು ಸಂಪರ್ಕಿಸಿ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು.

Bhatkal
ಹರೀಶ್​ ಕುಮಾರ್
author img

By

Published : Jul 15, 2020, 7:14 PM IST

ಭಟ್ಕಳ: ಭಟ್ಕಳದಲ್ಲಿ ಸೋಂಕಿತರ ಪ್ರಮಾಣ ಹಾಗೂ‌ ಕೋವಿಡ್​ನಿಂದಾಗುವ ಮರಣವನ್ನಾಧರಿಸಿದ ಅಧ್ಯಯನದಿಂದ ಕೊರೊನಾ ನಿಯಂತ್ರಣದಲ್ಲಿರುವುದು ತಿಳಿದು ಬಂದಿದೆ. ಜನರು ತಾವೇ ಸ್ವಯಂ ತಮ್ಮ ಆರೋಗ್ಯದ ಕಾಳಜಿ ವಹಿಸಿ ಆಸ್ಪತ್ರೆಗೆ ಭೇಟಿ ನೀಡಿ‌ ತಪಾಸಣೆಗೊಳಗಾಗುವ ಮೂಲಕ ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.‌ ಹರೀಶ್ ಕುಮಾರ್ ಕೆ.‌ ತಿಳಿಸಿದರು.

ಕೊರೊನಾ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ

ಅವರು ಇಲ್ಲಿನ ಸಹಾಯಕ ಆಯುಕ್ತರ ಕಚೇರಿಗೆ ಕೋವಿಡ್ ನಿಯಂತ್ರಣದ ಕುರಿತಾದ ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಸದ್ಯ ಭಟ್ಕಳದ ಜನರಲ್ಲಿ ಕೋವಿಡ್ ಬಗ್ಗೆ ಅನಗತ್ಯ ಭಯ ಆವರಿಸಿದ್ದು, ಜನರು ಗೊಂದಲಕ್ಕೊಳಗಾಗುವ ಅವಶ್ಯಕತೆ ಇಲ್ಲ. ತಮ್ಮ ಆರೋಗ್ಯದಲ್ಲಿನ ಏರುಪೇರುಗಳನ್ನು ಅರಿತುಕೊಳ್ಳುವಷ್ಟರ ಮಟ್ಟಿಗೆ ಸಾಮಾನ್ಯ ಜ್ಞಾನ ಜನರಿಗೆ ಇದ್ದು ಜ್ವರ ನೆಗಡಿ, ಕೆಮ್ಮು ತಲೆನೋವು ಬಂದರೆ ಆರಂಭಿಕ ಹಂತದಲ್ಲಿಯೇ ಮುಂಜಾಗ್ರತೆ ವಹಿಸಿ ವೈದ್ಯರನ್ನು ಸಂಪರ್ಕಿಸಬಹುದು ಎಂದರು.

ಸದ್ಯ ಭಟ್ಕಳದಲ್ಲಿ ಬೇರೆ ಕಾಯಿಲೆಗಳಿದ್ದವರು ಮೃತಪಟ್ಟಿದ್ದು, ಅವರಲ್ಲಿ ಕೋವಿಡ್ ಸಹ ದೃಢಪಟ್ಟಿದೆ. ಇದು ಕೊನೆಯ ಹಂತದಲ್ಲಿ ಪತ್ತೆಯಾದಲ್ಲಿ ಮೃತರ ಕುಟುಂಬದವರಿಗೆ ಸಮಸ್ಯೆಯಾಗುತ್ತದೆ ಮತ್ತು ಸಮುದಾಯ ತೊಂದರೆ ಅನುಭವಿಸಬೇಕಾಗುತ್ತದೆ. ಇದರಿಂದ ತಾಲೂಕಾಡಳಿತದ ಅಥವಾ ವೈದ್ಯರ ಸಂಪರ್ಕವನ್ನು ಶೀಘ್ರದಲ್ಲಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ಗಮನಕ್ಕೆ ಬಾರದೇ ಇರುವುದರಿಂದ ಮುಂದೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಲಿದೆ ಎಂದು ಹೇಳಿದರು.

ಭಟ್ಕಳ ತಾಲೂಕಾಡಳಿತವೂ ವಿಶೇಷವಾಗಿ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಸೋಂಕಿತರಿಗೆ ಸಿಗಬೇಕಾದ ಎಲ್ಲಾ ವ್ಯವಸ್ಥೆ ಕಲ್ಪಿಸಿ ಹೆಚ್ಚುವರಿ ವ್ಯವಸ್ಥೆಯನ್ನು ನೀಡಲು ತಯಾರಾಗಿದೆ. ಸಾಮಾನ್ಯವಾಗಿ ಕೋವಿಡ್ ಸೋಂಕಿತರಲ್ಲಿ ರೋಗ ಲಕ್ಷಣಗಳಿಲ್ಲದಿದ್ದಲ್ಲಿ 7 ದಿನದಲ್ಲಿ ಗುಣಮುಖರಾಗುತ್ತಾರೆ. ಒಂದು ವೇಳೆ ರೋಗ ಲಕ್ಷಣ ಇದ್ದಲ್ಲಿ 10 ದಿನದಲ್ಲಿ ಗುಣಮುಖ ಆಗಲಿದ್ದು, ಬಹುತೇಕ ಎಲ್ಲರ ಎರಡನೇ ಗಂಟಲ ದ್ರವದ ಪರೀಕ್ಷೆ ನೆಗೆಟಿವ್ ಬಂದ ಉದಾಹರಣೆ ಇದೆ. ಅಗತ್ಯ ತುರ್ತು ಸಂದರ್ಭದಲ್ಲಿ ಕಾರವಾರದ ಜಿಲ್ಲಾ ಕೇಂದ್ರದಲ್ಲಿ 10 ರಿಂದ 14 ವೆಂಟಿಲೇಟರ್ ವ್ಯವಸ್ಥೆ ಇದೆ. ಪ್ರತಿ ಗ್ರಾಮ ಗ್ರಾಮದಲ್ಲಿ ವೆಂಟಿಲೇಟರ್​ ಇಡುವುದು ಅಸಾಧ್ಯ. ಕೋವಿಡ್ ರೋಗ ಲಕ್ಷಣ ಒಂದೇ ಸಮನೆ ಉಲ್ಬಣಗೊಂಡಿದ್ದಲ್ಲಿ ತುರ್ತು ವೆಂಟಿಲೇಟರ್ ವ್ಯವಸ್ಥೆಯನ್ನು ತಾಲೂಕು, ಗ್ರಾಮ ಮಟ್ಟದಲ್ಲೂ ಮಾಡಲು ತಯಾರಿದ್ದೇವೆ ಎಂದು ತಿಳಿಸಿದರು.

ಜನರು ಕೋವಿಡ್ ಹೊರತು ಪಡಿಸಿ ಉಳಿದಂತೆ ಸಾಮಾನ್ಯ ಜ್ವರ ಸೇರಿದಂತೆ ಎಲ್ಲಾ ಅನಾರೋಗ್ಯದ ಬಗ್ಗೆ ತಕ್ಷಣಕ್ಕೆ ವೈದ್ಯರನ್ನು ಸಂಪರ್ಕಿಸಿದ್ದಲ್ಲಿ ಗಂಟಲ ದ್ರವ ನೀಡಬೇಕೋ ಅಥವಾ ಚಿಕಿತ್ಸೆ ಅಥವಾ ಔಷಧಿ ನೀಡಬೇಕೆಂಬುದರ ಕುರಿತು ಸೂಚಿಸಲಿದ್ದಾರೆ. ಜನರು ಪಾಸಿಟಿವ್ ವರದಿಯಿಂದ ಕಂಗಾಲಾಗುತ್ತಿದ್ದು, ಮುಂದಿನ ದಿನದಲ್ಲಿ ವಿಶೇಷವಾಗಿ ಒಂದು ದಿನದಲ್ಲಿ ಪರೀಕ್ಷೆಗೊಳಗಾಗಿ ಗಂಟಲ ದ್ರವ ಸ್ಯಾಂಪಲ್ ಮಾಹಿತಿ, ಪಾಸಿಟಿವ್ ಬಂದ ಮಾಹಿತಿ ನೆಗೆಟಿವ್ ಬಂದ ಮಾಹಿತಿ ಎಲ್ಲವನ್ನು ಆಯಾ ತಾಲೂಕಾ ಕೇಂದ್ರಕ್ಕೆ ತಕ್ಷಣಕ್ಕೆ ಕಳುಹಿಸುವ ಕಾರ್ಯ ಮಾಡಲಾಗುವುದು. ಇದರಿಂದ‌ ಜನರಿಗೂ ಅನೂಕೂಲವಾಗಲಿದೆ ಎಂದರು.

ನಿತ್ಯವೂ ಕಿಮ್ಸ್​ನಲ್ಲಿ 600 ಜನರ ಗಂಟಲು ದ್ರವ ಸಂಗ್ರಹಣೆಯಾಗುತ್ತಿದ್ದು, 900 ಸ್ಯಾಂಪಲ್​ಗಳ ಪರೀಕ್ಷೆ ಮಾಡುತ್ತಿದ್ದಾರೆ‌. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಭರತ್ ಎಸ್.ಎ.ಎಸ್.ಪಿ. ನಿಖಿಲ್ ಬಿ., ತಹಶೀಲ್ದಾರ್ ಎಸ್. ರವಿಚಂದ್ರ, ತಾಲೂಕಾ ಆರೋಗ್ಯಾಧಿಕಾರಿ ಮೂರ್ತಿರಾಜ್ ಭಟ್, ಸಿಪಿಐ ದಿವಾಕರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.