ETV Bharat / state

'ಶ್ರೀಮಂತ ರಾಷ್ಟ್ರ' ಗಳಿಂದ ಬಂದವರ ನಿರ್ಲಕ್ಷ್ಯವೇ ಭಟ್ಕಳ ಮತ್ತೆ ಸುದ್ದಿಯಾಗಲು ಕಾರಣವಾಯ್ತಾ? - kovid-19

ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್​​ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಅಲ್ಲದೇ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ 9 ಪಾಸಿಟಿವ್​ ಪ್ರಕರಣಗಳು ಕಂಡು ಬಂದ ಹಿನ್ನೆಲೆ ಜನ ಜೀವ ಭಯದಲ್ಲಿ ಕಾಲ ಕಳೆಯುವಂತಾಗಿದೆ. ಇದೆಲ್ಲಕ್ಕೂ ಅನ್ಯ ರಾಷ್ಟ್ರಗಳಿಂದ ಮರಳಿ ತಾಲೂಕಿಗೆ ಬಂದ ಜನರ ನಿರ್ಲಕ್ಷ್ಯವೇ ಮೂಲ ಕಾರಣ ಎನ್ನುವ ಮಾತು ಭಟ್ಕಳದಲ್ಲಿ ಕೇಳಿ ಬರುತ್ತಿದೆ.

corona-cases-increasing-in-bhatkal-taluk
ಭಟ್ಕಳ ಕೊರೊನಾ ವೈರಸ್​ ಪ್ರಕರಣಗಳು
author img

By

Published : Mar 31, 2020, 10:05 PM IST

ಭಟ್ಕಳ: ಅತಿ ಹೆಚ್ಚು ಅರಣ್ಯ ಸಂಪತ್ತು, ಸಮುದ್ರ ಹೊಂದಿದ್ದ ಭಟ್ಕಳ ನೈಸರ್ಗಿಕ ಪೃಕ್ರತಿ ಸೌಂದರ್ಯಕ್ಕೆ ಹೆಸರಾಗಿತ್ತು. ಸದ್ಯ ಕೊರೊನಾ ಸೋಂಕಿತ ಸಂಖ್ಯೆ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಜನ ಸಂಬಂಧಿಕರನ್ನು ಭೇಟಿಯಾಗಲು ಭಯ ಭೀತರಾಗಿದ್ದಾರೆ. ಇದಕ್ಕೆ ಶ್ರೀಮಂತ ರಾಷ್ಟ್ರಗಳಿಂದ ಬಂದ ಜನರ ಅಜಾಗರೂಕತೆ, ನಿರ್ಲಕ್ಷತನವೇ ಕಾರಣವಾಯಿತಾ ಎಂಬ ಪ್ರಶ್ನೆ ಜನರಲ್ಲಿ ಮನೆ ಮಾಡಿದೆ.

ಬೇರೆ ದೇಶಗಳಿಂದ ಮರಳಿ ನಾಡಿಗೆ ಬಂದ ಜನರ ನಿರ್ಲಕ್ಷವೇ ಸೋಂಕು ಹರಡುವಿಕೆಗೆ ಮೂಲ ಕಾರಣ ಅಂದ್ರೆ ತಪ್ಪಾಗಲಾರದು. ಅಲ್ಲದೇ ಹೋಂ ಕ್ವಾರಂಟೈನ್​ನಲ್ಲಿ ಇದ್ದರೂ ಕೆಲವರ ಬೆಜಾವಾಬ್ದಾರಿತನದಿಂದ ಭಟ್ಕಳ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲೂ ಒಂದು ರೀತಿಯ ಕಾರಣವೂ ಹೌದು.

'ಶ್ರೀಮಂತ ರಾಷ್ಟ್ರ' ಗಳಿಂದ ಬಂದವರ ನಿರ್ಲಕ್ಷ್ಯತ ಕಾರಣವಾಯಿತೇ ಭಟ್ಕಳ ಮತ್ತೆ ಸುದ್ದಿಯಾಗಲು..?

ಒಂಬತ್ತು ಭಟ್ಕಳಿಗರಲ್ಲಿ ಸೋಂಕಿತ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ದಕ್ಷಿಣ ತುದಿಯ ಗಡಿ ತಾಲೂಕಾದ ಭಟ್ಕಳ ತಾಲೂಕು ಕೊರೋನಾ ಕಾಯಿಲೆಯ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗುವ ಮೂಲಕ ಮತ್ತೆ ಸುದ್ದಿಯಲ್ಲಿದೆ. ಇಲ್ಲಿಯ ತನಕ ಒಟ್ಟ ಎಂಟು ಪ್ರಕರಣಗಳು ಪತ್ತೆಯಾಗಿದ್ದು, ಮಂಗಳೂರಿನಲ್ಲೂ ಪಟ್ಟಣ ಮೂಲದ ವ್ಯಕ್ತಿಯೊಬ್ಬ ದಾಖಲಾಗುವ ಮೂಲಕ ಒಂಬತ್ತು ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಅಜಾಗರೂಕತೆ ಸೋಂಕು ಹರಡಲು ಕಾರಣ

ವಿದೇಶದಿಂದ ಬಂದವರು ಹಾಗೂ ಅವರ ಸಂಬಂಧಿಗಳು ಮೊದಲೇ ಜಾಗೃತರಾಗಿದ್ದಲ್ಲಿ ಸೋಂಕು ಇಷ್ಟೊಂದು ಹರಡುವುದಕ್ಕೆ ಕಾರಣವಾಗುತ್ತಿಲ್ಲವಾಗಿತ್ತು. ಸೋಂಕಿತರು ವಿದೇಶದಿಂದ ಬಂದು ಮನೆಯಲ್ಲಿರುವುದು, ಸಾರ್ವಜನಿಕ ಸಾರಿಗೆ ಬಳಸಿರುವುದು, ಸಾರ್ವಜನಿಕ ಪ್ರದೇಶಕ್ಕೆ ಭೇಟಿ ನೀಡಿರುವುದು ಇಂದು ಎಲ್ಲರನ್ನೂ ಆತಂಕಕ್ಕೆ ನೂಕಿದೆ. ಅಲ್ಲದೆ ವಿದೇಶದಿಂದ ಬಂದು ಹೋಮ್ ಕ್ವಾರಂಟೈನ್ ನಲ್ಲಿರುವುದನ್ನು ಬಿಟ್ಟು ಓಡಾಡಿಕೊಂಡಿದ್ದುದು ಹಲವರಲ್ಲಿ ಸೋಂಕು ಹರಡುವಂತಾಗಿದೆ.

ಹೋಮ್ ಕ್ವಾರಂಟೈನ್ ನಡುವೆ ಸುತ್ತಾಟ

ಜಿಲ್ಲಾಡಳಿತ ಸೋಂಕು ತಗಲಿರುವ ಶಂಕೆ ಇರುವವರು ಮನೆಯಲ್ಲಿಯೇ ಒಬ್ಬಂಟಿಯಾಗಿರುವಂತೆ ಸೂಚಿಸಿದ್ದನ್ನು ಪಾಲಿಸದೇ ಇರುವುದು ತಮ್ಮ ಮನೆಯವರು, ಅಕ್ಕಪಕ್ಕದವರು, ಸ್ನೇಹಿತರಲ್ಲದೇ ಸಮುದಾಯವನ್ನೇ ಆತಂಕಕ್ಕೆ ದೂಡುವಂತೆ ಮಾಡಿತು. ಸ್ವಲ್ಪ ಜಾಗೃತಿ ಮಾಡಿದ್ದರೂ ಸಹ ಇಂದು ಭಟ್ಕಳದಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸುವ ಪ್ರಸಂಗವೇ ಎದುರಾಗುತ್ತಿರಲಿಲ್ಲ ಎನ್ನುವುದು ಕೆಲವು ಭಟ್ಕಳಿಗರ ಮಾತು.

ಮನೆ ಮನೆ ಸರ್ವೆ

ಭಟ್ಕಳಕ್ಕೆ ವಿದೇಶದಿಂದ ಬಂದವರು, ಬೇರೆ ಬೇರೆ ಜಿಲ್ಲೆ, ರಾಜ್ಯದಿಂದ ಬಂದವರು ತಾವಾಗಿಯೇ ಬಂದು ನೋಂದಣಿ ಮಾಡಿಕೊಳ್ಳದೇ ಇರುವುದರಿಂದ ಆರೋಗ್ಯ ಕಾರ್ಯಕರ್ತರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಅಂಥವರ ವಿವರವನ್ನು ಸಂಗ್ರಹಿಸುವ ಅನಿವಾರ್ಯತೆ ಸೃಷ್ಟಿಸಿದೆ. ಸುಮಾರು 9 ಸಾವಿರ ಮನೆಗಳಿಗೆ ತೆರಳಿ ವಿವರಗಳನ್ನು ಸಂಗ್ರಹಿಸುವ ಕಾರ್ಯ ಈಗಾಗಲೇ ಪ್ರಗತಿಯಲ್ಲಿದ್ದು, ಇನ್ನೂ ಹೆಚ್ಚಿನ ಅಗತ್ಯತೆ ಕಂಡು ಬಂದರೆ ಸರ್ವೆ ಕಾರ್ಯವನ್ನು ಮುಂದುವರಿಸಲಾಗುವುದು ಎನ್ನುವುದನ್ನು ಜಿಲ್ಲಾಡಳಿತ ತಿಳಿಸಿದೆ.

ಭಟ್ಕಳ ಪಟ್ಟಣ ಹಾಗೂ ಪಟ್ಟಣಕ್ಕೆ ಹೊಂದಿಕೊಂಡ ಜಾಲಿ ಪಟ್ಟಣ ಪಂಚಾಯತಿ, ಕೆಲವು ಗ್ರಾಮ ಪಂಚಾಯತಿಗಳಲ್ಲಿ ಅನೇಕ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜನರು ಕೂಡ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕಾಗಿದೆ. ಕೊರೋನಾವನ್ನು ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಅಧಿಕಾರಿಗಳಿಗೆ ಮನೆಯಲ್ಲೇ ಕುಳಿತು ಸಾಥ್ ನೀಡಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.