ETV Bharat / state

ಸಂವಿಧಾನಬದ್ಧವಾಗಿ ಸಿಕ್ಕಿರುವ ಮಾಧ್ಯಮ ಸ್ವಾತಂತ್ರ್ಯ ಮಾರಾಟವಾಗಬಾರದು: ಡಾ.ಹರೀಶ್ ಕುಮಾರ್ ಎಚ್ಚರಿಕೆ

ಸಂವಿಧಾನಬದ್ಧವಾಗಿ ಸಿಕ್ಕಿರುವ ಮಾಧ್ಯಮ ಸ್ವಾತಂತ್ರ್ಯ ಮಾರಾಟದ ಸರಕಾಗಬಾರದು ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಹೇಳಿದ್ದಾರೆ.

constitutional-freedom-of-the-press-should-not-be-sold-said-by-dr-harish-kumar
ಜಿಲ್ಲಾ ಮಟ್ಟದ ಕೇಬಲ್ ಟೆಲಿವಿಷನ್ ನೆಟ್ ವರ್ಕ್ ನಿರ್ವಹಣಾ ಸಮಿತಿ ಪರಿಶೀಲನಾ ಸಭೆ
author img

By

Published : Dec 8, 2019, 7:48 PM IST

ಕಾರವಾರ: ಸಂವಿಧಾನಬದ್ಧವಾಗಿ ಸಿಕ್ಕಿರುವ ಮಾಧ್ಯಮ ಸ್ವಾತಂತ್ರ್ಯ ಮಾರಾಟವಾಗಬಾರದು ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿರ್ವಹಣಾ ಸಮಿತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಅವರು, ಮಾಧ್ಯಮಗಳು ತಮಗೆ ಸಿಕ್ಕಿರುವ ಸಂವಿಧಾನ ಬದ್ಧವಾದ ಹಕ್ಕನ್ನು ಪಡೆದು ಸ್ವಾರ್ಥಕ್ಕಾಗಿ ಮಾರಾಟ ಮಾಡಿಕೊಳ್ಳಬಾರದು. ಸ್ವೇಚ್ಛಾಚಾರದ ಸ್ವಾತಂತ್ರ್ಯವನ್ನು ಕಾನೂನು ಸಹಿಸುವುದಿಲ್ಲ ಎಂದರು.

constitutional-freedom-of-the-press-should-not-be-sold-said-by-dr-harish-kumar
ಜಿಲ್ಲಾ ಮಟ್ಟದ ಕೇಬಲ್ ಟೆಲಿವಿಷನ್ ನೆಟ್ ವರ್ಕ್ ನಿರ್ವಹಣಾ ಸಮಿತಿ ಪರಿಶೀಲನಾ ಸಭೆ

ಕೇಬಲ್ ಮತ್ತು ಟಿವಿ ಮಾಧ್ಯಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಚೋಧನಾತ್ಮಕ ಸುದ್ದಿಗಳಿಂದ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನಗಳು ನಡೆಯುತ್ತಿವೆ. ಅದು ಸರಿಯಾದ ಕ್ರಮವಲ್ಲ, ಸಾರ್ವಜನಿಕ ನೆಮ್ಮದಿಗೆ ಭಂಗ ತರುವಂತಹ ಯಾವುದೇ ಸುದ್ದಿಗಳನ್ನು ಮಾಧ್ಯಮ ಪ್ರಸಾರ ಮಾಡಿದರೆ, ಸಾರ್ವಜನಿಕರು ತಕ್ಷಣ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಕಂಟ್ರೋಲ್ ರೂಮ್‌ಗೆ ಅಥವಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿರುವ ಕೇಬಲ್ ಟಿಲಿವಿಷನ್ ನೆಟ್‌ವರ್ಕ್ ದೂರುಕೋಶಕ್ಕೆ ತಿಳಿಸಬಹುದು ಎಂದರು.

ನಿಷ್ಪಕ್ಷಪಾತ ವರದಿಗಾರಿಕೆಗೆ ಯಾರ ಅಭ್ಯಂತರವೂ ಇಲ್ಲ, ಕಾನೂನಿನ ಸಹಕಾರವಿರುತ್ತದೆ. ಆದರೆ ಬೆದರಿಕೆ ತಂತ್ರಗಳ ವರದಿಗಾರಿಕೆ ಅಥವಾ ಕೋಮು ಸೌಹಾರ್ದವನ್ನು ಕದಡುವ ಪ್ರಯತ್ನಗಳಿಗೆ ಸಹಕಾರ ಸಿಗುವುದಿಲ್ಲ. ಅಂತಹ ಕಾರಣಗಳಿಗಾಗಿ ದೂರು ಬಂದರೆ ತಕ್ಷಣ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ರು.

ಈ ಬಗ್ಗೆ ಸಾರ್ವಜನಿಕರಲ್ಲಿ ದೂರುಗಳಿದ್ದರೆ ಕೇಬಲ್ ಟೆಲಿವಿಷನ್ ನೆಟ್​ವರ್ಕ್ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಮತ್ತು ದೂರು ಕೋಶ, ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಭವನ, ಕಾರವಾರ-508301, ದೂರವಾಣಿ 08382-226344 ಅಥವಾ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್ ರೂಮ್ ಸಹಾಯವಾಣಿ 1950, ವಾಟ್ಸ್ಆಪ್ ಸಂಖ್ಯೆ 9483511015 ಇಲ್ಲಿಗೆ ದಾಖಲಿಸಬಹುದು ಎಂದು ತಿಳಿಸಿದ್ರು.

Intro:Body:ಮಾಧ್ಯಮ ಸ್ವಾತಂತ್ರ್ಯ ಮಾರಾಟಕ್ಕಲ್ಲ: ಡಿಸಿ ಡಾ.ಹರೀಶಕುಮಾರ್

ಕಾರವಾರ: ಸಂವಿಧಾನ ಬದ್ಧವಾಗಿ ಸಿಕ್ಕಿರುವ ಮಾಧ್ಯಮ ಸ್ವಾತಂತ್ರ್ಯ ಮಾರಾಟವಾಗಬಾರದು ಎಂದು ಜಿಲ್ಲಾಧಿಕಾರಿ ಡಾ.ಹರೀಶ್ಕುಮಾರ್ ಕೆ. ಹೇಳಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಕೇಬಲ್ ಟೆಲಿವಿಷನ್ ನೆಟ್ ವರ್ಕ್ ನಿರ್ವಹಣಾ ಸಮಿತಿ ಹಾಗೂ ದೂರುಕೋಶದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಅವರು ಮಾಧ್ಯಮಗಳು ತಮಗೆ ಸಿಕ್ಕಿರುವ ಸಂವಿಧಾನ ಬದ್ಧವಾದ ಹಕ್ಕನ್ನು ಪಡೆದು ಸ್ವಾರ್ಥಕ್ಕಾಗಿ ಮಾರಾಟ ಮಾಡಿಕೊಳ್ಳಬಾರದು. ಸ್ವೇಚ್ಛಾಚಾರದ ಸ್ವಾತಂತ್ರ್ಯವನ್ನು ಕಾನೂನು ಸಹಿಸುವುದಿಲ್ಲ ಎಂದರು.
ಕೇಬಲ್ ಮತ್ತು ಟಿವಿ ಮಾಧ್ಯಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಚೋನಾತ್ಮಕ ಸುದ್ದಿಗಳಿಂದ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನಗಳು ನಡೆಯುತ್ತಿವೆ. ಅದು ಸರಿಯಾದ ಕ್ರಮವಲ್ಲ. ಸಾರ್ವಜನಿಕ ನೆಮ್ಮದಿಗೆ ಭಂಗ ತರುವಂತಹ ಯಾವುದೇ ಮಾಧ್ಯಮ ಪ್ರಸಾರ ಮಾಡಿದರೆ ಸಾರ್ವಜನಿಕರು ತಕ್ಷಣ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಕಂಟ್ರೋಲ್ ರೂಂ ಗೆ ಅಥವಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿರುವ ಕೇಬಲ್ ಟಿಲಿವಿಷನ್ ನೆಟ್ ವರ್ಕ್ ದೂರುಕೋಶಕ್ಕೆ ದೂರು ನೀಡಬಹುದಾಗಿದೆ ಎಂದರು.
ನಿಷ್ಪಕ್ಷಪಾತವಾದ ವರದಿಗಾರಿಕೆಗೆ ಯಾರ ಅಭ್ಯಂತರವೂ ಇಲ್ಲ ಮತ್ತು ಕಾನೂನಿನ ಸಹಕಾರವಿರುತ್ತದೆ. ಆದರೆ ಬೆದರಿಕೆ ತಂತ್ರಗಳ ವರದಿಗಾರಿಕೆ ಅಥವಾ ಕೋಮು ಸೌಹಾರ್ಧವನ್ನು ಕದಡುವ ಪ್ರಯತ್ನಗಳಿಗೆ ಸಹಕಾರ ಸಿಗುವುದಿಲ್ಲ. ಅಂತಹ ಕಾರಣಗಳಿಗೆ ದೂರು ಬಂದರೆ ತಕ್ಷಣ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಬಗ್ಗೆ ಸಾರ್ವಜನಿಕರಲ್ಲಿ ದೂರುಗಳಿದ್ದರೆ ಕೇಬಲ್ ಟೆಲಿವಿಷನ್ ನೆಟ್ವರ್ಕ್ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಮತ್ತು ದೂರು ಕೋಶ, ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಭವನ, ಕಾರವಾರ-508301 ದೂರವಾಣಿ 08382-226344 ಅಥವಾ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್ ರೂಮ್ ಸಹಾಯವಾಣಿ 1950, ವಾಟ್ಸ್ಆಪ್ ಸಂಖ್ಯೆ 9483511015 ಇಲ್ಲಿಗೆ ದಾಖಲಿಸಬಹುದು ಎಂದು ಅವರು ತಿಳಿಸಿದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.