ETV Bharat / state

ಆಹ್ವಾನ ಇಲ್ಲದೇ ಬಿರಿಯಾನಿ ತಿನ್ನಲು ಪಾಕಿಸ್ತಾನಕ್ಕೆ ಹೋದವರು ಮೋದಿ: ಬಿ.ಕೆ.ಹರಿಪ್ರಸಾದ್ ವಾಗ್ದಾಳಿ - Petrol Rate

ಆಹ್ವಾನ- ಆಮಂತ್ರಣ ಇಲ್ಲದೇ ಪಾಕಿಸ್ತಾನಕ್ಕೆ ಬಿರಿಯಾನಿ ತಿನ್ನಲು ಹೋಗಿದ್ದರೆ ಅದು ನರೇಂದ್ರ ಮೋದಿ. ಈ ದೇಶಕ್ಕೆ ಇದಕ್ಕಿಂತ ಬೇರೆ ಅವಮಾನ ಇಲ್ಲ ಎಂದು ಕಾಂಗ್ರೆಸ್​ನ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಬಿ.ಕೆ.ಹರಿಪ್ರಸಾದ್ ವಾಗ್ದಾಳಿ
ಬಿ.ಕೆ.ಹರಿಪ್ರಸಾದ್ ವಾಗ್ದಾಳಿ
author img

By

Published : Jun 14, 2021, 6:02 PM IST

Updated : Jun 14, 2021, 8:40 PM IST

ಕಾರವಾರ: ಪಾಕಿಸ್ತಾನದ ಹೆಸರು ತೆಗೆದುಕೊಂಡಿಲ್ಲ ಅಂದ್ರೆ ಬಿಜೆಪಿಗೆ ಒಂದೇ ಒಂದು ದಿನ ರಾಜಕಾರಣ ಮಾಡಲಾಗುವುದಿಲ್ಲ. ಜಮೀರ್, ಸಿದ್ದರಾಮಯ್ಯ, ದಿಗ್ವಿಜಯ ಸಿಂಗ್ ಯಾರೂ ಕೂಡ ಪಾಕಿಸ್ತಾನಕ್ಕೆ ಹೋಗಿಲ್ಲ. ಹೋಗೋ ಮನಸೂ ಕೂಡ ಅವರಿಗಿಲ್ಲ. ಆದರೆ ಪಾಕಿಸ್ತಾನದವರು ಕರೆಯದೇ, ಆಹ್ವಾನ - ಆಮಂತ್ರಣ ಇಲ್ಲದೇ ಯಾರಾದರೂ ಮಹಾನ್ ನಾಯಕ ಅಲ್ಲಿಗೆ ಬಿರಿಯಾನಿ ತಿನ್ನಲು, ಶರ್ವಾನಿ ಹಾಕಿಕೊಳ್ಳಲು ಹೋಗಿದ್ದರೆಂದರೆ ಅದು ನರೇಂದ್ರ ಮೋದಿ. ಈ ದೇಶಕ್ಕೆ ಇದಕ್ಕಿಂತ ಬೇರೆ ಅವಮಾನ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್​ನ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯವರು ಮನಮೋಹನ್ ಸಿಂಗ್ ದುರ್ಬಲ ಪ್ರಧಾನಿ ಎನ್ನುತ್ತಿದ್ದರು. ಆದರೆ ಎಲ್ಲಿಯವರೆಗೆ ಉಗ್ರವಾದ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ಇಲ್ಲ ಎಂದು ಅಂದು ಮನಮೋಹನ್ ಸಿಂಗ್ ಖಡಾಖಂಡಿತವಾಗಿ ಹೇಳಿದ್ದರು.

ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಆದರೆ 56 ಇಂಚಿನ ಎದೆ ಇರುವವರು ಮುಷರಫ್ ಮೊಮ್ಮಗಳ ಜನ್ಮ ದಿನಾಚರಣೆಗೆ ಹೋಗಿದ್ದರು. 300 ರೈತರು ಸತ್ತರು, ಲಕ್ಷಾಂತರ ಜನ ಕೋವಿಡ್​ನಲ್ಲಿ ಸತ್ತಿದ್ದಾರೆ. ಯಾರಿಗಾದರೂ ಒಂದು ದಿನ ಕಣ್ಣೀರು ಸುರಿಸಿದ್ದಾರಾ? ಒಂದಿನ ಮೊಸಳೆ ಕಣ್ಣೀರು ಹಾಕಿದ್ದಾರೆ ಅಷ್ಟೇ. ಅಂಬಾನಿ ಮೊಮ್ಮಗಳು ಹುಟ್ಟಿದ್ದಾಳೆಂದು ನೋಡಲು ಮುಂಬೈಗೆ ಹೋಗಿದ್ದರು. ಇವರು ನಮ್ಮ ದೇಶದ ಪ್ರಧಾನಮಂತ್ರಿ. ನಾಚಿಕೆಯಾಗಬೇಕು ನಮಗೆ ಇಂಥವರನ್ನ ದೇಶದ ಪ್ರಧಾನಮಂತ್ರಿ ಮಾಡಿದ್ದೇವಲ್ಲ ಎಂದು‌ ಎಂದಿದ್ದಾರೆ.

ಇನ್ನು ಮಾಧ್ಯಮಗಳ ಮಾಲೀಕರೇ ಪೆಟ್ರೋಲ್ ಕಂಪನಿಗಳ ಮಾಲೀಕತ್ವ ಹೊಂದಿರುವುದರಿಂದ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಎಷ್ಟೇ ಪ್ರತಿಭಟಿಸಿದ್ದರೂ ಮಾಧ್ಯಮಗಳಲ್ಲಿ ವರದಿಯಾಗುತ್ತಿಲ್ಲ. ಆದರೆ, ಇಂದು ದೇಶ ಉಳಿದುಕೊಂಡಿರುವುದು ವರದಿಗಾರರಿಂದ ಮಾತ್ರ. ಅವರು ವರದಿ ಮಾಡಿದರೂ ಅದು ಬರದಂತೆ ನೋಡಿಕೊಳ್ಳುವಲ್ಲಿ ಪೆಟ್ರೋಲಿಯಂ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

2014 ರಿಂದ 2021ರವರೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೆ ಏರಿಸಿರುವುದರ ಕುರಿತು ಖಂಡನೆ ವ್ಯಕ್ತಪಡಿಸಿದ್ದು, ಬೆಲೆಗಳನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಇನ್ನು ಕೊರೊನಾ ಕಾರಣದಿಂದ ಬೆಲೆ ಏರಿಕೆ ಸಂಭವಿಸುತ್ತಿದೆ ಎಂದು ಬಿಜೆಪಿ ಸಮರ್ಥಿಸಿಕೊಳ್ಳುತ್ತಿರುವುದರ ಕುರಿತು ಕಿಡಿ ಕಾರಿದ ಹರಿಪ್ರಸಾದ್ ಬಿಜೆಪಿಯ ಅಂಧಭಕ್ತರಿಗೆ ರಾಷ್ಟ್ರದ ಪರಿಸ್ಥಿತಿ, ಬಡವರ ನೋವಿನ ಅರಿವಿಲ್ಲ. ಇಂತಹವರಿಂದ ಜಾಸ್ತಿ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಅಂತಾ ಟೀಕಿಸಿದ್ದಾರೆ.

Last Updated : Jun 14, 2021, 8:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.