ETV Bharat / state

ಕಾಂಗ್ರೆಸ್ ಪ್ರಮಾದಕ್ಕೆ ಬಿಜೆಪಿಯನ್ನು ದೂರುವುದು ಸರಿಯಲ್ಲ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ - ಜನಾರ್ಧನ ರೆಡ್ಡಿ

ಡಿಕೆಶಿ ಬಂಧನದಲ್ಲಿ ಬಿಜೆಪಿ ಪಾತ್ರ ಇಲ್ಲ ಎಂಬುದನ್ನು ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಲಾಗಿದೆ. ಇಡಿ ತನ್ನದೇ ಆದ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಈ ಹಿಂದೆ ಜನಾರ್ಧನ ರೆಡ್ಡಿ ಅವರನ್ನು ಬಂಧಿಸಿದಾಗ ಯಾರ ಕೈವಾಡವಿತ್ತು ಎಂದು ಸಚಿವ ಕೋಟಾ ಶ್ರೀನಿವಾಸ್​ ಪೂಜಾರಿ ಪ್ರಶ್ನಿಸಿದ್ದಾರೆ.

ಕೋಟಾ ಶ್ರೀನಿವಾಸ ಪೂಜಾರಿ
author img

By

Published : Sep 19, 2019, 10:11 PM IST

ಕಾರವಾರ: ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಬಂಧನದಲ್ಲಿ ಬಿಜೆಪಿ ಕೈವಾಡ ಇದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಕಾಂಗ್ರೆಸ್​ನವರು ಮಾಡಿದ ಪ್ರಮಾದಗಳಿಗೆ ಬಿಜೆಪಿಯನ್ನು ದೂರುವುದು ಸರಿಯಲ್ಲ ಎಂದು ಮುಜರಾಯಿ ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿ ಬಂಧನದಲ್ಲಿ ಬಿಜೆಪಿ ಪಾತ್ರ ಇಲ್ಲ ಎಂಬುದನ್ನು ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಲಾಗಿದೆ. ಇಡಿ ತನ್ನದೇ ಆದ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದೆ. ಈ ಹಿಂದೆ ಜನಾರ್ಧನ ರೆಡ್ಡಿ ಅವರನ್ನು ಬಂಧಿಸಿದಾಗ ಯಾರ ಕೈವಾಡ ಇತ್ತು ಎಂದು ಪ್ರಶ್ನಿಸಿರುವ ಪೂಜಾರಿ, ಕಾಂಗ್ರೆಸ್ ತನ್ನ ಪ್ರಮಾದಗಳಿಗೆ ಬಿಜೆಪಿಯನ್ನು ಹೊಣೆ ಮಾಡುವುದು ಸರಿಯಲ್ಲ ಎಂದರು.

ಇನ್ನು ಕೋಡಿಮಠದ ಶ್ರೀಗಳ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ದೇಶದಲ್ಲಿ ಸಾಧು-ಸಂತರು ಆಗಾಗ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಇರುತ್ತಾರೆ. ಅವರ ಆಶಿರ್ವಾದವೂ ಸದಾ ನಮ್ಮ ಮೇಲೆ ಇರಲಿ ಎಂದು ಬೇಡಿಕೊಂಡರು.

ಮೀನುಗಾರ ಮಹಿಳೆಯರ ಸಾಲ ಮನ್ನಾ ವಿಚಾರವಾಗಿ ಮಾತನಾಡಿದ ಸಚಿವರು, ಶಾಸಕಾಂಗ ಸಭೆಯಲ್ಲಿ ಮೀನುಗಾರರ ಮಹಿಳೆಯರ 50 ಸಾವಿರ ವರೆಗಿನ ಸಾಲಮನ್ನಾ ಮಾಡುವಂತೆ ಕೇಳಿಕೊಂಡಾಗ ಮುಖ್ಯಮಂತ್ರಿಗಳು 2017 ರಿಂದ 19 ರವರೆಗೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಪಡೆದ 28 ಸಾವಿರ ಜನರ 63 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ. ಕೆಲವು ಬ್ಯಾಂಕ್ ನವರು ವಸೂಲಿಗೆ ಒತ್ತಾಯ ಮಾಡುತ್ತಿರುವ ಬಗ್ಗೆ ಕೇಳಿಬಂದಿದ್ದು, ಯಾವುದೇ ಕಾರಣಕ್ಕೂ ಬ್ಯಾಂಕ್​ನವರು ಒತ್ತಾಯಿಸಬಾರದು ಎಂದು ಸೂಚಿಸಿದ್ದಾರೆ.

Intro:ಕಾಂಗ್ರೆಸ್ ಪ್ರಮಾದಕ್ಕೆ ಬಿಜೆಪಿ ದೂರುವುದು ಸರಿಯಲ್ಲ... ಸಚಿವ ಕೋಟಾಶ್ರೀನಿವಾಸ ಪೂಜಾರಿ

ಕಾರವಾರ: ಡಿ.ಕೆ. ಶಿವಕುಮಾರ್ ಬಂಧನದಲ್ಲಿ ಬಿಜೆಪಿ ಕೈವಾಡ ಇದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಕಾಂಗ್ರೆಸ್ ನವರು ಮಾಡಿದ ಪ್ರಮಾದಗಳಿಗೆ ಬಿಜೆಪಿಯನ್ನು ದೂರುವುದು ಸರಿಯಲ್ಲ ಎಂದು ಮುಜರಾಯಿ ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕಾರವಾರದಲ್ಲಿ ಗುರುವಾರ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿ ಬಂಧನದಲ್ಲಿ ಬಿಜೆಪಿ ಪಾತ್ರ ಇಲ್ಲ ಎಂಬುದನ್ನು ಈಗಾಗಲೇ ಹಲವು ಭಾರಿ ಸ್ಪಷ್ಟಪಡಿಸಲಾಗಿದೆ. ಇಡಿಯರು ತಮ್ಮದೆಯಾದ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಈ ಹಿಂದೆ ಜನಾರ್ಧನ ರೆಡ್ಡಿ ಅವರನ್ನು ಬಂಧಿಸಿದಾಗ ಯಾರು ಮಾಡಿದ್ದರು ಹಾಗಾದರೇ? ಕಾಂಗ್ರೆಸ್ ಮಾಡಿದ ಪ್ರಮಾದಗಳಿಗೆ ಬಿಜೆಪಿ ಹೊಣೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಕೋಡಿಮಠದ ಶ್ರೀಗಳ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಸಾಧುಸಂತರು ಆಗಾಗ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಇರುತ್ತಾರೆ. ಅವರ ಆಶಿರ್ವಾದವೂ ಸದಾ ನಮ್ಮ ಮೇಲೆ ಇರಲಿ ಎಂದು ಬೇಡಿಕೊಳ್ಳುವುದಾಗಿ ಹೇಳಿದರು.
ಮೀನುಗಾರರ ಮಹಿಳೆಯರು ಸಾಲ ಮನ್ನಾ ವಿಚಾರವಾಗಿ ಮಾತನಾಡಿದ ಅವರು, ಶಾಸಕಾಂಗ ಸಭೆಯಲ್ಲಿ ಮೀನುಗಾರರ ಮಹಿಳೆಯರ ೫೦ ಸಾವಿರ ವರೆಗಿನ ಸಾಲಮನ್ನಾ ಮಾಡುವಂತೆ ಕೇಳಿಕೊಂಡಾಗ ಮುಖ್ಯಮಂತ್ರಿಗಳು ೨೦೧೭ ರಿಂದ ೧೯ ರವರೆಗೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಪಡೆದ ೨೮ ಸಾವಿರ ಜನರ ೬೩ ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ. ಕೆಲವು ಬ್ಯಾಂಕ್ ನವರು ವಸೂಲಿಗೆ ಒತ್ತಾಯ ಮಾಡುತ್ತಿರುವ ಬಗ್ಗೆ ಕೇಳಿಬಂದಿದ್ದು, ಯಾವುದೇ ಕಾರಣಕ್ಕೂ ಒತ್ತಾಯ ಮಾಡಬಾರದು ಎಂದು ಸೂಚಿಸಿದರು.

Body:ಕ

Conclusion:ಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.