ಕಾರವಾರ: ಪ್ರವಾಹದಿಂದ ಹಾನಿಗೊಳಗಾದ ಅಂಕೋಲಾ ತಾಲೂಕಿನ ಶಿರೂರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿದರು.
ಗಂಗಾವಳಿ ನದಿ ತೀರದ ಪ್ರದೇಶವಾದ ಶಿರೂರು ಸಂಪೂರ್ಣ ಮುಳುಗಡೆಯಾದ ಕಾರಣ ಸುಮಾರು 300ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿದ್ದವು. ಅಲ್ಲದೆ ಇಬ್ಬರು ಮೃತಪಟ್ಟಿದ್ದು, ಈ ಪ್ರದೇಶಕ್ಕೆ ಶಾಸಕ ಶಿವರಾಮ ಹೆಬ್ಬಾರ್, ಶಾಸಕಿ ರೂಪಾಲಿ ನಾಯ್ಕ್, ಜಿಲ್ಲಾಧಿಕಾರಿ ಮುಲೈ ಮುಹಿಲನ್ ಜೊತೆ ತೆರಳಿ ಅಲ್ಲಿನ ಜನರ ಸಮಸ್ಯೆ ಆಲಿಸಿದರು.
ಬಳಿಕ ಕಾಳಜಿ ಕೇಂದ್ರಕ್ಕೆ ತೆರಳಿದ ಅವರು, ಸಂತ್ರಸ್ಥರಿಂದ ಸಂಕಷ್ಟ ಆಲಿಸಿದರು. ಮನೆ, ಆಸ್ತಿ- ಪಾಸ್ತಿ ಕಳೆದುಕೊಂಡ ಜನ ಸೂಕ್ತ ಪರಿಹಾರದ ಜೊತೆ ಇತರೆಡೆ ಮನೆಕಟ್ಟಲು ಜಾಗ ನೀಡುವಂತೆ ಮನವಿ ಮಾಡಿದರು. ಶಿರೂರು ಕಾಳಜಿ ಕೇಂದ್ರದಲ್ಲಿ ಒಟ್ಟು 1,226 ಜನರಿಗೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: 'ಪ್ರವಾಹ, ಭೂಕುಸಿತದಿಂದ ಸರ್ವಸ್ವವೂ ನಾಶ..' ಮುಖ್ಯಮಂತ್ರಿ ಮುಂದೆ ವಿದ್ಯಾರ್ಥಿಗಳ ಕಣ್ಣೀರು