ಕಾರವಾರ : ಕಾರವಾರ ಸಾರಿಗೆ ಸಂಸ್ಥೆಯ ಬಸ್ವೊಂದರ ಟಯರ್ ಸ್ಫೋಟಗೊಂಡಿದ್ದು, ಚಾಲಕನ ಸಮಯಪ್ರಜ್ಞೆಯಿಂದ 80 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕಾರವಾರದ ಗೋಪಸಿಟ್ಟಾ ಸಮೀಪದ ಘಾಟಿ ಸೇತುವೆಯ ಬಳಿ ಇಂದು ಘಟನೆ ನಡೆಯಿತು.
ಕೆಎ 31 ಎಫ್ 1252 ನೋಂದಣಿಯ ಬಸ್ ಕಾರವಾರದಿಂದ ಮಲ್ಲಾಪುರ ಕದ್ರಾ ಮಾರ್ಗವಾಗಿ ಸಂಚರಿಸುತ್ತಿತ್ತು. ಗೋಪಸಿಟ್ಟಾ ಸಮೀಪದ ಘಾಟಿ ಸೇತುವೆಯ ಮೇಲೆ ಮುಂದಿನ ಟಯರ್ ಸ್ಪೋಟಗೊಂಡಿದೆ. ಚಾಲಕನ ಅಪಘಾತ ಸಂಭವಿಸುವ ಹಂತದಲ್ಲಿದ್ದ ಬಸ್ ಅನ್ನು ತಕ್ಷಣ ಮುಂದೆ ಹೋಗಿ ನಿಲ್ಲಿಸಿದ್ದಾರೆ. ಈ ಮೂಲಕ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ಬಸ್‌ನ ಮುಂದಿನ ಟೈರ್ ಸಂಪೂರ್ಣ ಸವೆದು ಹೋಗಿದೆ. ಅಪಘಾತವಾಗಿ ಸಾವು, ನೋವು ಸಂಭವಿಸಿದರೆ ಯಾರು ಹೊಣೆ?, ಕಂಡೀಶನ್‌ನಲ್ಲಿ ಇಲ್ಲದ ಹಾಗೂ ಟಯರ್ ಸವೆದು ಹೋದ ಬಸ್‌ಗೆ ಟೈಯರ್ ಅಳವಡಿಸಿ ಬಿಡಲಾಗುತ್ತಿದೆ. ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ಬಸ್ನಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು ಸೇರಿ 80ಕ್ಕೂ ಹೆಚ್ಚು ಮಂದಿ ಇದ್ದರು. ಬಸ್ ಟಯರ್ ಸ್ಪೋಟಗೊಂಡ ಸದ್ದಿಗೆ ಸ್ಥಳೀಯರು ಕೂಡಾ ಸ್ಥಳಕ್ಕೆ ಓಡಿ ಬಂದಿದ್ದರು. ಪ್ರಯಾಣಿಕರು ಬೇರೆ ವಾಹನ ಹಿಡಿದು ತೆರಳಿದ್ದಾರೆ.
ಗಂಗಾವಳಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷ : ಅಂಕೋಲಾದ ಹೊಸಕಂಬಿ ಸೇತುವೆ ಸಮೀಪದ ನದಿಯಲ್ಲಿ 7 ಅಡಿ ಉದ್ದದ ಬೃಹತ್ ಮೊಸಳೆ ಕಾಣಿಸಿಕೊಂಡಿದೆ. ಇದೇ ಪ್ರದೇಶದ ಬಳಿ ಮೀನುಗಾರಿಕೆ, ಕೃಷಿ ಕಾರ್ಯಕ್ಕೆ ಗಂಗಾವಳಿಯನ್ನೇ ಅವಲಂಬಿಸಿರುವ ಗ್ರಾಮಸ್ಥರು, ಇದೀಗ ನದಿ ತೀರಕ್ಕೆ ತೆರಳಲು ಭಯಪಡುವಂತಾಗಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿರುವ ಗ್ರಾಮಸ್ಥರು ಮೊಸಳೆ ಸೆರೆಹಿಡಿದು ಬೇರೆಡೆ ಬಿಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಕಾರವಾರ: ನಿಯಂತ್ರಣ ತಪ್ಪಿ ಪಲ್ಟಿಯಾದ ಖಾಸಗಿ ಬಸ್.. ಚಾಲಕ ಸಾವು, 25 ಪ್ರಯಾಣಿಕರಿಗೆ ಗಾಯ