ETV Bharat / state

ಶಿರಸಿಯಲ್ಲಿ ಮೋರಿಗೆ ಬಿದ್ದ ಬಸ್; ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಚಾಲಕನ ನಿಯಂತ್ರಣ ತಪ್ಪಿ ಬಸ್ ಮೋರಿಗೆ ಬಿದ್ದು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

bus
author img

By

Published : Jul 13, 2019, 10:49 PM IST

ಶಿರಸಿ: ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ಮೋರಿಗೆ ಬಿದ್ದು, 30 ಕ್ಕೂ ಅಧಿಕ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಉತ್ತರ ಕನ್ನಡದ ಶಿರಸಿ ತಾಲೂಕಿನ ಗೋಳಿಮಕ್ಕಿ ರಸ್ತೆ ಹಣಜಿಮನೆ ಬಳಿ ನಡೆದಿದೆ.

ಎದುರುಗಡೆಯಿಂದ ಬರುತ್ತಿದ್ದ ವಾಹನ ತಪ್ಪಿಸುವ ಭರದಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಮೋರಿಗೆ ಇಳಿದಿದೆ. ಈ ವೇಳೆ ಬಸ್ಸಿನಲ್ಲಿ 30ಕ್ಕೂ ಅಧಿಕ ಪ್ರಯಾಣಿಕರಿದ್ದು, ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

bus
ಮೋರಿಗೆ ಬಿದ್ದಿರುವ ಬಸ್
ಅಪಘಾತ ಸಂಭವಿಸಿದ ಸ್ಥಳದಲ್ಲಿ ಎರಡೂ ಕಡೆಗಳಲ್ಲೂ ಅಡಕೆ ತೋಟವಿದ್ದು, ಇಲ್ಲಿ ರಸ್ತೆ ಕಿರಿದಾಗಿದೆ. ಹೀಗಾಗಿ ಏಕಕಾಲಕ್ಕೆ ಒಂದು ಬಸ್ ಸಂಚರಿಸುವಂತಿದ್ದು ವಿದ್ಯುತ್ ತಂತಿ ಕೂಡಾ ಕೆಳಮಟ್ಟದಲ್ಲಿರುವ ಕಾರಣ ಚಾಲಕರು ಎಚ್ಚರಿಕೆಯಿಂದ ವಾಹನ ಓಡಿಸುವ ಅನಿವಾರ್ಯತೆ ಇದೆ. ಇದೇ ಕಾರಣದಿಂದ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ.

ಘಟನೆಯ ನಂತರ ಕ್ರೇನ್ ಮೂಲಕ ಬಸ್ ಮೇಲೆತ್ತಲಾಗಿದ್ದು, ಪ್ರಯಾಣಿಕರನ್ನು ಸುರಕ್ಷತೆಯಿಂದ ಮನೆಗೆ ತಲುಪಿಸಲಾಗಿದೆ.

Intro:ಶಿರಸಿ :
ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ಮೋರಿಗೆ ಬಿದ್ದು, ೩೦ ಕ್ಕೂ ಅಧಿಕ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾದ ಘಟನೆ ಉತ್ತರ ಕನ್ನಡದ ಶಿರಸಿ ತಾಲೂಕಿನ ಗೋಳಿಮಕ್ಕಿ ರಸ್ತೆ ಹಣಜಿಮನೆ ಬಳಿ ನಡೆದಿದೆ.

Body:ಎದುರಿನಿಂದ ಬಂದ ವಾಹನ ತಪ್ಪಿಸುವ ಭರದಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಇಳಿದಿದೆ. ಬಸ್ಸಿನಲ್ಲಿ 30 ಕ್ಕೂ ಅಧಿಕ ಪ್ರಯಾಣಿಕರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಜಾಗದಲ್ಲಿ ಎರಡೂ ಕಡೆಗಳಲ್ಲಿ ಅಡಕೆ ತೋಟವಿದ್ದು, ಇಲ್ಲಿ ರಸ್ತೆ ಚಿಕ್ಕದಾಗಿದೆ. ಇಲ್ಲಿ ಏಕ ಕಾಲಕ್ಕೆ ಒಂದು ಬಸ್ ದಾಟುವಂತಿದ್ದು, ವಿದ್ಯುತ್ ತಂತಿ ಸಹ ಕೆಳಮಟ್ಟದಲ್ಲಿರುವ ಕಾರಣ ಚಾಲಕರು ಎಚ್ಚರಿಕೆಯಿಂದ ವಾಹನ ಓಡಿಸುವ ಸ್ಥಿತಿ ಇದೆ. ಇದೇ ಕಾರಣದಿಂದ ಚಾಲಕನಿಗೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಘಟನೆಯ ನಂತರ ಕ್ರೇನ್ ಮೂಲಕ ಬಸ್ ಎತ್ತಲಾಗಿದ್ದು, ಪ್ರಯಾಣಿಕರನ್ನು ಸುರಕ್ಷತೆಯಿಂದ ಮನೆಗೆ ತಲುಪಿಸಲಾಗಿದೆ.
.......
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.