ಭಟ್ಕಳ: ಮುರುಡೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಬಸ್ತಿಮಕ್ಕಿ ಕ್ರಾಸ್ ಎಂಬಲ್ಲಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಹಿಂಬದಿ ಸವಾರ ಗಂಭೀರ ಸ್ಥಿತಿಯಲ್ಲಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ನಡೆದಿದೆ.
ಮೃತ ಬೈಕ್ ಸವಾರ ದಿನೇಶ್ ನಾರಾರಾಣ ಶೆಟ್ಟಿ(45) ಬಸ್ತಿ ಕಾಯ್ಕಿಣಿ ನಿವಾಸಿ ಎಂದು ತಿಳಿದು ಬಂದಿದ್ದು, ಇನ್ನೋರ್ವ ಬೈಕ್ ಹಿಂಬದಿ ಸವಾರ ಅಭಿ ಬಾಬು ಕುಂಬಾರ (18) ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ.
ಗಣೇಶ ಟ್ರಾವೆಲ್ಗೆ ಸಂಬಂಧಿಸಿದ ಬಸ್ಸೊಂದು ಭಟ್ಕಳದಿಂದ ಹೊನ್ನಾವರ ಕಡೆಗೆ ಹೊರಟಿದ್ದ ಬೈಕ್ ಸವಾರನಿಗೆ ಬಸ್ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಇನ್ನೋರ್ವ ಹಿಂಬದಿ ಸವಾರನಿಗೆ ತಲೆ ಹಾಗೂ ಕಾಲಿಗೆ ಬಲವಾದ ಪೆಟ್ಟು ಬಿದ್ದಿರುವ ಹಿನ್ನೆಲೆ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.
ಆರೋಪಿ ಕಾರ್ಕಳ ಮೂಲದ ಬಸ್ ಚಾಲಕ ಇಸ್ಮಾಯಿಲ್ ಖಾದರ್ನನ್ನು ಬಂಧಿಸಿ, ಪೊಲೀಸರು ಬಸ್ ವಶಪಡಿಸಿಕೊಂಡಿದ್ದಾರೆ. ಈ ಕುರಿತು ರಾಘವೇಂದ್ರ ಕುಂಬಾರ ಎಂಬುವವರು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.