ETV Bharat / state

ಫಾಮ್‌ಶೀಟ್‌ನಲ್ಲಿ ಬಸ್ ತಯಾರಿಸಿ ಗಮನ ಸೆಳೆದಿದ್ದ ಬಾಲಕ, ಸೀಬರ್ಡ್ ಎಮ್‌ಡಿ ಭೇಟಿ - yadav of karwar who meet Seabird MD

ಯಾದವ್ ಕೃಷ್ಣ ಎಂಬ ವಿದ್ಯಾರ್ಥಿ ಆನ್‌ಲೈನ್ ತರಗತಿಯ ನಡುವೆ ಫಾಮ್‌ಶೀಟ್‌ಗಳನ್ನು ಬಳಸಿ ಬಸ್​ ತಯಾರಿಸಿ, ಗಮನ ಸೆಳೆದಿದ್ದ. ಇದೀಗ ಸೀಬರ್ಡ್ ಟೂರ್ಸ್ ಆ್ಯಂಡ್ ಟ್ಯಾವೆಲ್ಸ್‌ನ ವ್ಯವಸ್ಥಾಪಕ ನಿರ್ದೇಶಕರು ಯಾದವ್ ಹಾಗೂ ಆತನ ಕುಟುಂಬದವರನ್ನು ಬೆಂಗಳೂರಿಗೆ ಆಹ್ವಾನಿಸಿ, ಮಾತುಕತೆ ನಡೆಸಿದ್ದಾರೆ.

ಸೀಬರ್ಡ್ ಎಂಡಿ ಭೇಟಿ ಮಾಡಿದ ಯಾದವ್​ ಕೃಷ್ಣ
ಸೀಬರ್ಡ್ ಎಂಡಿ ಭೇಟಿ ಮಾಡಿದ ಯಾದವ್​ ಕೃಷ್ಣ
author img

By

Published : Mar 11, 2022, 10:21 PM IST

ಕಾರವಾರ: ಫಾಮ್‌ಶೀಟ್‌ನಲ್ಲಿ ಸೀಬರ್ಡ್ ಬಸ್ ಸೇರಿದಂತೆ ವಿವಿಧ ವಾಹನಗಳನ್ನು ತಯಾರಿಸಿ ಗಮನ ಸೆಳೆದಿದ್ದ ನಗರದ 9ನೇ ತರಗತಿ ವಿದ್ಯಾರ್ಥಿ ಯಾದವ್‌ನನ್ನು ಸೀಬರ್ಡ್ ಟೂರ್ಸ್ ಆ್ಯಂಡ್ ಟ್ಯಾವೆಲ್ಸ್‌ ವ್ಯವಸ್ಥಾಪಕ ನಿರ್ದೇಶಕರೇ ಬೆಂಗಳೂರಿಗೆ ಆಹ್ವಾನಿಸಿ, ಯಾದವ್ ಹಾಗೂ ಆತನ ಕುಟುಂಬದ ಜೊತೆ ಮಾತುಕತೆ ನಡೆಸಿದ್ದಾರೆ.

ನಗರದ ಗಿಡ್ಡ ರೋಡ್ ನಿವಾಸಿಯಾಗಿರುವ ಸೇಂಟ್ ಜೋಸೆಫ್ ಹೈಸ್ಕೂಲ್‌ನ 9ನೇ ತರಗತಿಯ ವಿದ್ಯಾರ್ಥಿ ಯಾದವ್ ಕೃಷ್ಣ, ಆನ್‌ಲೈನ್ ತರಗತಿಯ ನಡುವೆ ಫಾಮ್‌ಶೀಟ್‌ಗಳನ್ನು ಬಳಸಿ ಮಿನಿ ಡ್ಯಾಮ್, ಆಟಿಕೆ ಬಸ್, ಜೀಪುಗಳನ್ನ ತಯಾರಿಸಿ ಬಿಡುವಿನ ಸಮಯವನ್ನು ಸದ್ಬಳಕೆ ಮಾಡಿಕೊಂಡಿದ್ದ. ಈ ಬಗ್ಗೆ ಈಟಿವಿ ಭಾರತ್ ಬಾಲಕನ ಈ ಪ್ರತಿಭೆಯನ್ನು ಅನಾವರಗೊಳಿಸಿತ್ತು.

ಸೀಬರ್ಡ್ ಎಂಡಿ ಭೇಟಿ ಮಾಡಿದ ಯಾದವ್​ ಕೃಷ್ಣ
ಸೀಬರ್ಡ್ ಎಂಡಿ ಭೇಟಿ ಮಾಡಿದ ಯಾದವ್​ ಕೃಷ್ಣ

ಈಟಿವಿ ಭಾರತ ವರದಿಯನ್ನು ಗಮನಿಸಿದ ಸೀಬರ್ಡ್ ಟೂರ್ಸ್ ಆ್ಯಂಡ್ ಟ್ಯಾವೆಲ್ಸ್ ವ್ಯವಸ್ಥಾಪಕ ನಿರ್ದೇಶಕರಾದ ನಾಗರಾಜ್ ಹರತಿ ಹಾಗೂ ರೂಪಲಕ್ಷ್ಮಿ ಸ್ಥಳೀಯ ಕಾರವಾರದ ಕಚೇರಿ ಮೂಲಕ ಬಾಲಕನನ್ನು ಸಂಪರ್ಕಿಸಿ, ಕುಟುಂಬ ಸಮೇತ ಬೆಂಗಳೂರು ಕಚೇರಿಗೆ ಬರುವಂತೆ ತಿಳಿಸಿ ಎಲ್ಲಾ ವ್ಯವಸ್ಥೆ ಮಾಡಿಕೊಡಲು ಸೂಚಿಸಿದ್ದರು. ಯಾದವ್ ಹಾಗೂ ಕುಟುಂಬದವರಿಗೆ ತಮ್ಮದೇ ಕಂಪನಿಯ ಬಸ್‌ನಲ್ಲಿ ಉಚಿತವಾಗಿ ಬೆಂಗಳೂರಿಗೆ ಹೋಗಿಬರಲು, ಅಲ್ಲಿ ಹೋಟೆಲ್- ವಸತಿ ವ್ಯವಸ್ಥೆಗಳನ್ನೂ ಸೀಬರ್ಡ್‌ನವರೇ ಮಾಡಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಾಳೆಯಿಂದ ಪಿಂಕ್ ಬಾಲ್ ಟೆಸ್ಟ್.. ಮ್ಯೂಸಿಕ್ ಬಳಸಲು ಅನುಮತಿ, ನಗರ ಪೊಲೀಸರಿಂದ ಬಿಗಿ ಭದ್ರತೆ

ಬೆಂಗಳೂರಿನಲ್ಲಿ ನಾಗರಾಜ್ ಹರತಿ ಹಾಗೂ ರೂಪಲಕ್ಷ್ಮಿ ಅವರನ್ನು ಭೇಟಿಯಾದ ಯಾದವ್ ಹಾಗೂ ಕುಟುಂಬದೊಂದಿಗೆ ಮಾತುಕತೆ ನಡೆಸಿದ ನಾಗರಾಜ್ ಹರತಿ ಹಾಗೂ ರೂಪಲಕ್ಷ್ಮಿ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಏನೇ ಸಹಾಯ ಬೇಕಿದ್ದಲ್ಲಿ ನಮ್ಮನ್ನು ಸಂಪರ್ಕಿಸುವಂತೆ ತಿಳಿಸಿ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದೇ ವೇಳೆ ‘ಈ ಬಸ್ ನಮಗೆ ಕೊಡ್ತೀಯಾ?’ ಎಂದು ನಾಗರಾಜ್ ಹರತಿ ಕೇಳಿದ್ದಕ್ಕೆ ಯಾದವ್ ಅದನ್ನು ಸೀಬರ್ಡ್ ಕಂಪನಿಗೆ ಕೊಡುಗೆಯಾಗಿ ನೀಡಿದ್ದಾನೆ. ಈ ಭೇಟಿಯ ನಂತರ ಕಂಪನಿಯ ಕಾರಿನಲ್ಲಿಯೇ ಯಾದವ್‌ಗೆ ಕುಟುಂಬ ಸಮೇತರಾಗಿ ಬೆಂಗಳೂರು ಸುತ್ತಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೆ ನಾಗರಾಜ್ ಹರತಿ ಕಾರವಾರಕ್ಕೆ ಬಂದಾಗ ಸರ್ಪೈಸ್ ಗಿಫ್ಟ್ ಕೂಡ ನೀಡುವುದಾಗಿ ತಿಳಿಸಿದ್ದಾರೆ ಎಂದು ಆತನ ಕುಟುಂಬಸ್ಥರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.