ಕಾರವಾರ: ನಿಸರ್ಗ್ ಚಂಡಮಾರುತದ ಅಬ್ಬರಕ್ಕೆ ಗೋವಾ ಬಳಿಯ ಆಳಸಮುದ್ರದಲ್ಲಿ ಬೋಟ್ ಮುಳುಗಡೆಯಾಗಿದ್ದು, ಅದೃಷ್ಟವಶಾತ್ 8 ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿಯ ಮಲ್ಪೆ ಮೂಲದ ದುರ್ಗಾ ಹನುಮ ಹೆಸರಿನ ಯಾಂತ್ರಿಕ ಬೋಟ್ ಮೀನುಗಾರಿಕೆಗೆ ತೆರಳಿ ವಾಪಸ್ ಆಗುತ್ತಿದ್ದಾಗ ನಿಸರ್ಗ್ ಚಂಡಮಾರುತದ ಅಬ್ಬರಕ್ಕೆ ಸಿಲುಕಿದೆ. ಅಲೆಗಳ ಅಬ್ಬರ ಜೋರಾಗುತ್ತಿದ್ದಂತೆ ಬೋಟ್ ಕೂಡ ಮುಳುಗಡೆಯಾಗಿದೆ.
ಉತ್ತರಕನ್ನಡ ಮೂಲದ ಒಟ್ಟು 8 ಮೀನುಗಾರರು ಬೋಟ್ನಲ್ಲಿದ್ದು ಅವರನ್ನು ಅಲ್ಲಿಯೇ ಇದ್ದ ಶಿವ ಭೈರವ ಮತ್ತು ಬ್ರಾಹ್ಮಿ ಹೆಸರಿನ ಬೋಟ್ನವರು ರಕ್ಷಣೆ ಮಾಡಿದ್ದಾರೆ. ಬಳಿಕ ಮೀನುಗಾರರನ್ನು ಗೋವಾ ಬಂದರಿಗೆ ಕರೆತರಲಾಗಿದೆ. ಗಾಳಿ ಮಳೆ ಅಬ್ಬರದಿಂದಾಗಿ ಮೀನುಗಾರಿಕೆಗೆ ತೆರಳಿದ ಬೋಟ್ಗಳು ಗೋವಾ ಬಂದರಿನಲ್ಲಿ ರಕ್ಷಣೆ ಪಡೆದಿದ್ದಾರೆ.