ಭಟ್ಕಳ: ಮೀನುಗಾರಿಕೆಗೆ ತೆರಳಿದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೋಟ್ವೊಂದು ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗುತ್ತಿರುವ ಸಂದರ್ಭದಲ್ಲಿ ಎಂಟು ಬೋಟುಗಳ ಸಹಾಯದಿಂದ ರಕ್ಷಣೆ ಮಾಡಲಾಗಿದೆ.
ಭಟ್ಕಳ ಮೂಲದ ಶ್ರೀ ಮೂಕಾಂಬಿಕಾ ಹೆಸರಿನ ಬೋಟ್ ಇದಾಗಿದ್ದು, ಭಟ್ಕಳ ಬಂದರಿನಿಂದ 25 ನಾಟಿಕಲ್ ಮೈಲು ದೂರದಲ್ಲಿ ಈ ಘಟನೆ ನಡೆದಿದೆ. ಬೋಟಿನ ತಳಭಾಗದಲ್ಲಿ ಡ್ಯಾಮೇಜ್ ಆಗಿ ನೀರು ತುಂಬಿದ್ದು, ಬೋಟ್ನಲ್ಲಿದ್ದ 25 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.