ಕಾರವಾರ: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ಬೋಟ್ ಮುಳುಗಿದ್ದು, 15 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಹೊನ್ನಾವರದಿಂದ 40 ನಾಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ಘಟನೆ ನಡೆದಿದೆ. ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದ ದುರ್ಗಾ ಭೈರವಿ ಬೋಟ್ ಮುಳುಗಡೆಯಾಗಿದೆ.
ಎರಡು ದಿನದ ಹಿಂದೆ ಹದಿನೈದು ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿದ ವೇಳೆ ಆಳ ಸಮುದ್ರದಲ್ಲಿ ವಿಪರೀತ ಗಾಳಿ ಹೆಚ್ಚಾಗಿದ್ದರಿಂದ ಬೋಟ್ ಮುಳುಗಡೆಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಗ್ರಾ.ಪಂ. ಚುನಾವಣಾ ರಾಜಕೀಯ.. 'ಕೈ' ಮುಖಂಡರ ಕಿತ್ತಾಟ
ಅಲ್ಲೆ ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇನ್ನೊಂದು ಮೀನುಗಾರಿಕಾ ಬೋಟ್ ಮುಳುಗುತ್ತಿದ್ದ ಬೋಟ್ನಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ.