ಕಾರವಾರ: ಕ್ರೈಸ್ತ ಧರ್ಮಗುರು ಸಂತ ಜೋನ್ ಬ್ಯಾಪ್ತಿಷ್ಟರ್ ಜನ್ಮ ದಿನದ ಅಂಗವಾಗಿ ಹೊನ್ನಾವರದ ಹಡನಬಾಳದಲ್ಲಿ ದೋಣಿ ಸ್ಪರ್ಧೆ ಆಯೋಜಿಸಲಾಗಿತ್ತು.
ತಾಲೂಕಿನ ಹಡಿನಬಾಳ ಸೇತುವೆಯಿಂದ ತಾರಿವರೆಗೆ ತೆರಳಿ ಪುನಃ ಸೇತುವೆಗೆ ಬರುವ 3 ಕಿ.ಮೀ ದೋಣಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ 8 ತಂಡಗಳು ಭಾಗವಹಿಸಿದ್ದವು.
ಶರಾವತಿ ನದಿ ದಡದ ಜನರಲ್ಲಿ ಹಬ್ಬದ ಸಂಭ್ರಮ ಮೂಡಿತ್ತು. ನೆರೆದಿದ್ದ ನೂರಾರು ಪ್ರೇಕ್ಷಕರು ಸ್ಪರ್ಧಾಳುಗಳನ್ನು ಹುರಿದುಂಬಿಸಲು ಕೇಕೆ, ಸೀಳೆ ಹಾಕುತ್ತಿದ್ದರು. ಸೇಂಟ್ ಫ್ರಾನ್ಸಿಸ್ ಎ ತಂಡ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರೆ, ಸೇಂಟ್ ಜೊಸೆಫ್ ಎ ದ್ವಿತೀಯಕ್ಕೆ ತೃಪ್ತಿ ಪಟ್ಟಿತು. ಸೇಂಟ್ ಫ್ರಾನ್ಸಿಸ್ ಬಿ ತಂಡ ತೃತೀಯ ಸ್ಥಾನ ಪಡೆಯಿತು.