ETV Bharat / state

ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರ, ಬಿಜೆಪಿ ಕರ್ನಾಟಕದ ಜೊತೆಗಿದೆ: ಕೇಂದ್ರ ಸಚಿವ ನಾರಾಯಣಸ್ವಾಮಿ - ​ ETV Bharat Karnataka

ರಾಜ್ಯ ಸರ್ಕಾರ ಕಾವೇರಿ ನೀರು ವಿಚಾರವಾಗಿ ಕೇಂದ್ರ ಸರ್ಕಾರವನ್ನು ಅಪ್ರೋಚ್ ಮಾಡಿಲ್ಲ. ಹೀಗಾಗಿ ಕೇಂದ್ರ ಅಫಿಡವಿಟ್ ಸಲ್ಲಿಸಿಲ್ಲ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಹೇಳಿದರು.

ಕೇಂದ್ರ ಸಚಿವ ನಾರಾಯಣಸ್ವಾಮಿ
ಕೇಂದ್ರ ಸಚಿವ ನಾರಾಯಣಸ್ವಾಮಿ
author img

By ETV Bharat Karnataka Team

Published : Oct 1, 2023, 4:53 PM IST

ಕೇಂದ್ರ ಸಚಿವ ನಾರಾಯಣಸ್ವಾಮಿ ಪ್ರತಿಕ್ರಿಯೆ

ಶಿರಸಿ (ಉತ್ತರ ಕನ್ನಡ) : ಕಾವೇರಿ ಹೋರಾಟದ ವಿಚಾರವಾಗಿ ಕರ್ನಾಟಕದ ಸಮಸ್ತ ಜನತೆಯ ಜೊತೆಗೆ ಬಿಜೆಪಿ ಇದೆ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ತಿಳಿಸಿದ್ದಾರೆ. ಸಿದ್ದಾಪುರದಲ್ಲಿಂದು ಸ್ವಚ್ಛತೆಯೇ ಸೇವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಕಾವೇರಿ ಹೋರಾಟದ ಬಗ್ಗೆ ಕರ್ನಾಟಕದಲ್ಲಿ ಬಹಳ ಚರ್ಚೆಗಳಾಗುತ್ತಿವೆ. ಇಲ್ಲಿ ಕಾಂಗ್ರೆಸ್‌ನವರು ಲೋಕಸಭಾ ಸದಸ್ಯರು, ಬಿಜೆಪಿಯ ಬಗ್ಗೆ ಮಾತಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶ ಮಾಡಬೇಕು ಎನ್ನುತ್ತಾರೆ. ಬಹುಶಃ ನಮಗೆ ಹಿನ್ನಡೆಯಾಗಿದೆ. ಹೌದು, ಆದರೆ ಹಿನ್ನಡೆ ಆಗೋಕೆ ಇವರ್ಯಾರೂ ಕಾರಣ ಅಲ್ಲ ಎಂದರು.

ಇದನ್ನೂ ಓದಿ : ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಮರು ಪರಿಶೀಲನಾ ಅರ್ಜಿ ಸಲ್ಲಿಕೆ: ಸಿಎಂ ಸಿದ್ದರಾಮಯ್ಯ

ದೇಶದಲ್ಲಿ ರೆಗ್ಯುಲೇಟರಿ, ಅಥಾರಿಟಿ ಆದೇಶ ಬಂದಾಗ ನಮ್ಮ ರಾಜ್ಯದಿಂದ ಪ್ರತಿರೋಧ ವ್ಯಕ್ತವಾಗಿಲ್ಲ. ಅದನ್ನು ತಡೆಯೋ ಕೆಲಸ ಮಾಡಿಲ್ಲ. ಇದಕ್ಕೆ ರಾಜ್ಯ ಸರ್ಕಾರ ಅಥವಾ ನಮ್ಮ ವಕಾಲತ್ತು ಕಾರಣ. ನಾವು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಎರಡು ಕಡೆ ಜಲಾನಯನ ಪ್ರದೇಶಕ್ಕೆ ತಂಡವನ್ನು ಕಳುಹಿಸಿ ಅಧ್ಯಯನ ಮಾಡುವಂತೆ ಮನವಿ ಮಾಡಿದ್ದೇವೆ. ಆದರೆ ಇವತ್ತಿನವರೆಗೂ ರಾಜ್ಯದ ತಜ್ಞರಿಗೆ ತಮಿಳುನಾಡಿನಲ್ಲಿ ಕೃಷಿಗೆ ಎಷ್ಟು ಭೂಮಿ ಉಪಯೋಗ ಮಾಡಿದ್ದಾರೆ? ಎಷ್ಟು ನೀರು ಬೇಕು? ಅನ್ನೋದು ಗೊತ್ತಿಲ್ಲ.

ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಅಪ್ರೋಚ್ ಮಾಡಿದರೆ ಕೇಂದ್ರ ಅಫಿಡವಿಟ್ ಸಲ್ಲಿಸಬಹುದು. ಆದರೆ ರಾಜ್ಯ ಸರ್ಕಾರ ಆ ಕೆಲಸ ಮಾಡಿಲ್ಲ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಜೊತೆಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಕೂಡ ಕರ್ನಾಟಕ ಜನತೆಯ ಜೊತೆಗಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ : ಮಾಜಿ ಶಾಸಕ ಅಶ್ವಥ್ ಜೊತೆ ಸಂಸದ ಡಿ ಕೆ ಸುರೇಶ್ ಮಾತುಕತೆ: ಅ.2ಕ್ಕೆ ಕಾಂಗ್ರೆಸ್​ ಪಕ್ಷ ಸೇರ್ಪಡೆ ಪಕ್ಕಾ

ಇದೇ ವೇಳೆ ಮುಂಬರುವ ಲೋಕಸಭೆ ಚುನಾವಣೆಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರ, ಜೆಡಿಎಸ್‌ನಲ್ಲಿ ಉಂಟಾಗಿರುವ ಭಿನ್ನಮತದ ಕುರಿತು ಮಾತನಾಡಿದ ನಾರಾಯಣಸ್ವಾಮಿ, ಬಿಜೆಪಿಗೆ ಬೆಂಬಲ ಕೊಡೋ ಬಗ್ಗೆ ಜೆಡಿಎಸ್​ನ ಅಧ್ಯಕ್ಷರೇ ಚರ್ಚೆ ನಡೆಸಿದ್ದು, ಕರ್ನಾಟಕ ರಾಜ್ಯದ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಕೈಜೋಡಿಸಿದ್ದಾರೆ. ಜೆಡಿಎಸ್​ನ ಆಂತರಿಕ ವಿಚಾರಗಳ ಬಗ್ಗೆ ಬಿಜೆಪಿ ಚರ್ಚೆ ಮಾಡಲ್ಲ. ಜೆಡಿಎಸ್ ನಮ್ಮ ಜೊತೆಯಲ್ಲಿ ಯಾವುದೇ ಒಳ ಒಪ್ಪಂದ ಮಾಡಿಲ್ಲ. ಇದು ನಮಗೆ ಅನಿವಾರ್ಯತೆಯಲ್ಲ. ಮೋದಿಯವರ ಆಡಳಿತ ಒಪ್ಪಿ ಯಾವುದೇ ಪಕ್ಷ ನಮ್ಮ ಜೊತೆ ಬಂದರೂ ಸ್ವೀಕರಿಸೋದು ನಮ್ಮ ಧರ್ಮ ಎಂದರು. ಈ ಸಂದರ್ಭದಲ್ಲಿ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಬೆಂಗಳೂರಿನ ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಹಿಂಸಾಚಾರಕ್ಕೆ ಕಾಂಗ್ರೆಸ್ ಕುಮ್ಮಕ್ಕು: ಶೋಭಾ ಕರಂದ್ಲಾಜೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.