ಕಾರವಾರ: ಜಾತ್ರೆ ಅಂಗಡಿ ಹಂಚಿಕೆ ವಿಚಾರವಾಗಿ ಶಾಸಕ ದಿನಕರ ಶೆಟ್ಟಿ ವಿರುದ್ಧ ಅವರ ಪಕ್ಷದ ಪುರಸಭೆ ಉಪಾಧ್ಯಕ್ಷರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಕುಮಟಾದಲ್ಲಿ ನಡೆದಿದೆ.
ಕುಮಟಾ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಾತ್ರೆಯಲ್ಲಿ ಅಂಗಡಿ ಹಂಚಿಕೆ ವಿಚಾರವಾಗಿ ಚರ್ಚೆ ನಡೆದಾಗ ಕೋವಿಡ್ ಹಿನ್ನಲೆಯಲ್ಲಿ ಜಾತ್ರೆಯಲ್ಲಿ ಅಂಗಡಿ ನೀಡದಂತೆ ಠರಾವು ಮಾಡಲಾಗಿತ್ತು. ಆದರೆ, ಪುರಸಭೆಯ ಸದಸ್ಯರ ಗಮನಕ್ಕೂ ತರದೆ ಅಂತಿಮ ಗಳಿಗೆಯಲ್ಲಿ ಜಾತ್ರೆಗೆ ಅಂಗಡಿ ಹಂಚಿಕೆ ಮಾಡಲಾಗಿದೆ.
ಶಾಸಕರು ಜಾತ್ರೆಯ ಮುನ್ನಾದಿನ ಅಂಗಡಿ ವಿಚಾರವಾಗಿ ಪುರಸಭೆಯಲ್ಲಿ ಸಭೆ ಮಾಡಿದ್ದು, ಸಭೆಗೆ ಸದಸ್ಯರನ್ನು ಕರೆಯದೆ ಪುರಸಭೆ ಅಧಿಕಾರಿ, ಶಾಸಕರು ಸೇರಿ ಅಂಗಡಿ ಹಂಚಿಕೆ ಠರಾವು ಮಾಡಿದ್ದಾರೆ. ಪುರಸಭೆಯಲ್ಲಿ ಸರ್ವಾಧಿಕಾರ ನಡೆಯುತ್ತಿದೆ ಎಂದು ಉಪಾಧ್ಯಕ್ಷ ರಾಜೇಶ ಪೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿರಿ: ಸೌರವ್ ಗಂಗೂಲಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ 'ಸುಳ್ಳು'... ನಾರಾಯಣ ಹೆಲ್ತ್ ಸಿಟಿ ಸ್ಪಷ್ಟನೆ
ಪುರಸಭೆಯಲ್ಲಿ ನಡೆಯುತ್ತಿರುವ ಭೃಷ್ಟಾಚಾರಗಳನ್ನು ಮುಂದಿನ ದಿನದಲ್ಲಿ ಬಯಲಿಗೆಳೆಯುತ್ತೇನೆ. ಎಲ್ಲವನ್ನು ಶಾಸಕರೇ ಮಾಡೋದಾದ್ರೆ ನಾವು ಇರೋದು ಯಾಕೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.