ಶಿರಸಿ: ಉತ್ತರ ಕನ್ನಡ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ಅನೀಸ್ ತಹಶೀಲ್ದಾರ ಮೇಲಿನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕುಮಟಾ ಮತ್ತು ಭಟ್ಕಳದ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕುಮಟಾ ಮಿರ್ಜಾನಿನ ಮುಕ್ತಿಯಾರ್ ಶಬಾಬುದ್ಧಿಮ್ ಖಾಜಿ (39) ಹಾಗೂ ಭಟ್ಕಳದ ಯಹ್ಯಾ ಶಬಾಬುದ್ಧಿನ್ ಖಾಜಿ (32) ಎಂಬ ಆರೋಪಿಗಳನ್ನು ಕಲಂ 307 ಅಡಿಯಲ್ಲಿ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಕಳೆದ ಏಪ್ರಿಲ್ 23ರಂದು ಅನೀಸ್ ಅವರ ಕೊಲೆಗೆ ಯತ್ನ ನಡೆದಿತ್ತು. ಈ ಕುರಿತು ಪ್ರಕರಣ ದಾಖಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಶಿರಸಿ ಪೊಲೀಸರು 14 ಜನರನ್ನು ಬಂಧಿಸಿದ್ದು, ಬಹುತೇಕರು ಎಸ್.ಡಿ.ಪಿ.ಐ. ಸಂಘಟನೆಗೆ ಸೇರಿದವರಾಗಿದ್ದಾರೆ ಎನ್ನಲಾಗಿದೆ. ತನಿಖೆ ಮುಂದುವರೆದಿದ್ದು, ಸಿಪಿಐ ಗಿರೀಶ್, ಮಾರುಕಟ್ಟೆ ಠಾಣೆ ಪಿಎಸ್ಐ ಶಶಿಕುಮಾರ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.