ETV Bharat / state

ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಆಸ್ತಿ ಎಷ್ಟು ಗೊತ್ತಾ?

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಅವರ ಒಟ್ಟು ಆಸ್ತಿ 8.47 ಕೋಟಿ ರೂ. 2014ರ ಲೋಕಸಭಾ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್​ಗೆ ಹೋಲಿಕೆ ಮಾಡಿದರೆ ಒಟ್ಟು 5.23 ಕೋಟಿ ರೂ. ಏರಿಕೆಯಾಗಿದೆ.

author img

By

Published : Apr 3, 2019, 7:15 AM IST

ಅನಂತಕುಮಾರ್ ಹೆಗಡೆ

ಕಾರವಾರ: ಉತ್ತರಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅನಂತಕುಮಾರ್ ಹೆಗಡೆ ಅವರು ಅಫಿಡವಿಟ್​ನಲ್ಲಿ ತಮ್ಮ ಮತ್ತು ಕುಟುಂಬದ ಆಸ್ತಿ ವಿವರ ಬಹಿರಂಗಪಡಿಸಿದ್ದು, ಒಟ್ಟು 8.47 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

2014ರ ಲೋಕಸಭಾ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್​ಗೆ ಹೋಲಿಕೆ ಮಾಡಿದರೆ ಒಟ್ಟು 5.23 ಕೋಟಿ ಏರಿಕೆಯಾಗಿದೆ. ಅನಂತಕುಮಾರ್ ಹೆಗಡೆ 2.83 ಕೋಟಿ ರೂ. ಆಸ್ತಿ ಹೊಂದಿದ್ದು, 35.36 ಲಕ್ಷ ರೂ. ಚರಾಸ್ತಿ ಹಾಗೂ 2.47 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. 1.50 ಲಕ್ಷ ರೂ. ಮೌಲ್ಯದ 100 ಗ್ರಾಂ. ಚಿನ್ನವನ್ನು ಹೊಂದಿದ್ದು, 1.88 ಲಕ್ಷ ರೂ. ವಿವಿಧ ಬ್ಯಾಂಕುಗಳಲ್ಲಿ ಜಮಾ ಇರುವುದಾಗಿ ಘೋಷಿಸಿದ್ದಾರೆ.

ತಮ್ಮ ಬಳಿ 9.61 ಲಕ್ಷದ ಕಾರು ಇದೆ. 5.90 ಲಕ್ಷ ರೂ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದೇನೆ. 1.75 ಲಕ್ಷ ರೂ. ವಿಮೆ ಹಾಗೂ 35 ಸಾವಿರ ನಗದು ಹೊಂದಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಅವರ ಪತ್ನಿ ಶ್ರೀರೂಪಾ ಹೆಗಡೆ ಬಳಿ 5.62 ಕೋಟಿ ರೂ ಆಸ್ತಿ ಇದೆ. ಚರಾಸ್ತಿ 3.81 ಕೋಟಿ ರೂ. ಹಾಗೂ ಸ್ಥಿರಾಸ್ತಿ 1.81 ಕೋಟಿ ರೂ. ಇದೆ. 8.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದರೆ, ವಿವಿಧ ಬ್ಯಾಂಕುಗಳಲ್ಲಿ 4.70 ಲಕ್ಷ ರೂ. ಜಮಾ ಇದೆ. 5.50 ಲಕ್ಷ ರೂ. ಮೌಲ್ಯದ ವಾಹನವನ್ನು ಹೊಂದಿದ್ದು, 3.12 ಕೋಟಿ ರೂ. ವಿವಿಧೆಡೆ ಹೂಡಿಕೆ ಮಾಡಿದ್ದಾರೆ. 2 ಲಕ್ಷ ರೂ. ವಿಮೆ ಮಾಡಿಸಿದ್ದಾರೆ. ಇನ್ನು 45 ಲಕ್ಷ ರೂ. ಸಾಲ ನೀಡಿದ್ದಾರೆ. 55 ಸಾವಿರ ರೂ. ನಗದು ಇದೆ ಎಂದು ವಿವರದಲ್ಲಿ ತಿಳಿಸಲಾಗಿದೆ.

ಇನ್ನು ಪುತ್ರಿ ವೃಶಾಲಿ ಹೆಸರಿನಲ್ಲಿ ಚರಾಸ್ತಿ 72,836 ರೂ., 65 ಸಾವಿರ ರೂ. ವಿಮೆ ಹಾಗೂ ಬ್ಯಾಂಕಿನಲ್ಲಿ 7,800 ರೂಪಾಯಿ ಇದೆ. ಪುತ್ರ ಅಶುತೋಷ್ ಬಳಿ ಚರಾಸ್ತಿ ಮೌಲ್ಯ 1.52 ಲಕ್ಷ ರೂ. ವಿಮೆ 50 ಸಾವಿರ ರೂ. ಬ್ಯಾಂಕಿನಲ್ಲಿ 96 ಸಾವಿರ ರೂ. ಇದೆ. ಇದರ ಜತೆಗೆ ತಾವು 1.27 ಕೋಟಿ ರೂ. ಸಾಲವನ್ನು ಹಾಗೂ ತಮ್ಮ ಪತ್ನಿ 2.82 ಲಕ್ಷ ರೂ ಸಾಲವನ್ನು ಹೊಂದಿರುವುದಾಗಿ ನಾಮಪತ್ರ ಸಲ್ಲಿಸುವ ವೇಳೆ ಆಸ್ತಿ ವಿವರದ ಮಾಹಿತಿ ನೀಡಿದ್ದಾರೆ.

ಇದಲ್ಲದೆ ತಮ್ಮ ವಿರುದ್ಧ ಹೊನ್ನಾವರ, ಕಿತ್ತೂರು, ಶಿರಸಿ ಹಾಗೂ ಬೆಂಗಳೂರು ನ್ಯಾಯಾಲಯದಲ್ಲಿ ನಾಲ್ಕು ಪ್ರಕರಣಗಳ ವಿಚಾರಣೆ ನಡೆಯುತ್ತಿರುವುದಾಗಿ ಅಫಿಡವಿಟ್​ನಲ್ಲಿ ತಿಳಿಸಿದ್ದಾರೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.