ಕಾರವಾರ: ಬೈಕ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಾಂಡೇಲಿ ತಾಲೂಕಿನ ತಾವರಗಟ್ಟಿ ಬಳಿ ನಡೆದಿದೆ.
ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾಸ್ತಿಹೊಳೆ ಗ್ರಾಮದವರಾದ ಬೈಕ್ ಚಾಲಕ ನಿರ್ವಹಣೆಪ್ಪ ಶಿವಪ್ಪ ಕಮತಿ (26) ಮತ್ತು ಹಿಂಬದಿಯ ಸವಾರ ಚಂದ್ರಶೇಖರ ಶಿವರುದ್ರಪ್ಪ ಕಮಿತಿ(40) ಸಾವನ್ನಪ್ಪಿದವರಾಗಿದ್ದಾರೆ. ದಾಂಡೇಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಲಿನ ಕಾರ್ಮಿಕರಾಗಿದ್ದ ಇಬ್ಬರು ಬೆಳಗಾವಿಯಿಂದ ದಾಂಡೇಲಿಗೆ ಬರುತ್ತಿದ್ದಾಗ ಲಾರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಓದಿ: ಶಾಂತಗೇರಾ ಮರ್ಡರ್ ಪ್ರಕರಣ: ಆರೋಪಿಗಳನ್ನ ಸೆರೆ ಹಿಡಿಯಲು ವಿಶೇಷ ತಂಡ ರಚನೆ!
ಸದ್ಯ ಲಾರಿ ಚಾಲಕ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಪಿ.ಎಸ್.ಐ ಸತ್ಯಪ್ಪ ಹುಕ್ಕೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.