ETV Bharat / state

ಭಟ್ಕಳ ತಾಲೂಕು ಆಡಳಿತ ಸೌಧದಲ್ಲಿ ತಿಂಗಳಿಂದ ಕೆಲಸ ನಿಲ್ಲಿಸಿದ ಲಿಫ್ಟ್ - ಲಿಫ್ಟ್ ನಿರ್ವಹಣೆಗೆ 1 ಲಕ್ಷ ರೂ

ಭಟ್ಕಳ ತಾಲೂಕು ಆಡಳಿತ ಸೌಧದಲ್ಲಿ ನಿರ್ವಹಣೆ ಇಲ್ಲದೇ ಲಿಫ್ಟ್ ಕೆಟ್ಟು ನಿಂತಿರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕರಿಗೆ ತೊಂದರೆಯಾಗಿದ್ದಕ್ಕೆ ವಿಷಾದವಿದೆ. ಕೂಡಲೇ ಲಿಫ್ಟ್ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು ಎಂದು ಸಹಾಯಕ ಆಯುಕ್ತೆ ಮಮತಾದೇವಿ ಎಸ್ ಸ್ಪಷ್ಟನೆ ನೀಡಿದ್ದಾರೆ.

Lift of Bhatkal Taluk Administration Building
ಭಟ್ಕಳ ತಾಲೂಕು ಆಡಳಿತ ಸೌಧದ ಲಿಪ್ಟ್​
author img

By

Published : Jun 9, 2023, 6:01 AM IST

ಭಟ್ಕಳ: ತಾಲೂಕಿನ ಸಾರ್ವಜನಿಕರು ನಿತ್ಯದ ಕೆಲಸ ಕಾರ್ಯಗಳಿಗೆ ಬಂದು ಹೋಗುವ ತಾಲೂಕು ಆಡಳಿತ ಕಚೇರಿಯಲ್ಲಿ ಕಳೆದ ಒಂದು ತಿಂಗಳಿನಿಂದ ಲಿಫ್ಟ್ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಮೇಲಿನ ಮಹಡಿಗಳಿಗೆ ತೆರಳಲು ವೃದ್ಧರು ಮಹಿಳೆಯರು ಪ್ರತಿದಿನ ಪರದಾಡಬೇಕಾಗಿದೆ.

ತಾಲೂಕು ಆಡಳಿತ ಕಚೇರಿ (ಮಿನಿ ವಿಧಾನಸೌಧ)ಗೆ ಪ್ರತಿದಿನ ಸಾವಿರಾರು ಜನರು ಭೇಟಿ ನೀಡುವರು. ಇಲ್ಲಿರುವ ಕಂದಾಯ ಇಲಾಖೆ, ಸಬ್ ರಿಜಿಸ್ಟ್ರಾರ್ ಕಚೇರಿ, ಸರ್ವೇ ಕಚೇರಿ, ಖಜಾನೆ, ಚುನಾವಣೆ ಕಚೇರಿ, ಪಹಣಿ ಪತ್ರ ಸೇರಿ ಅನೇಕ ಕಚೇರಿಗಳ ಕೆಲಸಗಳಿಗೆ ಸಾರ್ವಜನಿಕರು ಬಂದು ಹೋಗುತ್ತಾರೆ.

ಒಂದೊಂದು ಮಹಡಿಯಲ್ಲಿ ಒಂದೊಂದು ಇಲಾಖೆಯ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ತೆರಳಲು ಮೆಟ್ಟಿಲು ಹತ್ತಿ ಈಗ ಹೋಗಬೇಕಾಗಿದೆ. ವಯಸ್ಸಾದ ಹಿರಿಯ ನಾಗರಿಕರು ಮೆಟ್ಟಿಲು ಹತ್ತಲು ಆಗದೇ ವಾಪಸ್​ ಹೋಗಿರುವುದುಂಟು.

ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಸರ್ಕಾರ ಇಲ್ಲಿ ಲಿಫ್ಟ್ ವ್ಯವಸ್ಥೆ ಅಳವಡಿಸಿದೆ. ಆದರೆ, ಕಳೆದೊಂದು ತಿಂಗಳಿನಿಂದ ಇದು ಕಾರ್ಯನಿರ್ವಹಿಸುತ್ತಿಲ್ಲ. ಈ ಕುರಿತು ದೂರು ನೀಡಿದರೂ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.

ಲಿಫ್ಟ್ ನಿರ್ವಹಣೆಗೆ 1 ಲಕ್ಷ ರೂ: ಲಿಫ್ಟ್ ನಿರ್ವಹಣೆ ಮಾಡಿದ ಸಂಸ್ಥೆಗೆ ತಾಲೂಕು ಆಡಳಿತ ವರ್ಷಕ್ಕೆ 1 ಲಕ್ಷ ರೂ. ಪಾವತಿ ಮಾಡುತ್ತದೆ. ತಾಲೂಕು ಆಡಳಿತ ಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಕಚೇರಿಗಳು ಸೇರಿ ಅಭಿವೃದ್ಧಿ ಕಮಿಟಿ ಎಂದು ರಚಿಸಿಕೊಂಡಿವೆ. ಈ ಕಮಿಟಿ ಇಂತಹ ಸಣ್ಣಪುಟ್ಟ ವೆಚ್ಚ, ಲಿಫ್ಟ್ ನಿರ್ವಹಣೆ, ದುರಸ್ತಿ ಮಾಡಿಸಲು ಹಣ ಹೊಂದಿಸಿ ಪಾವತಿಸಬೇಕು. ಆದರೆ, ಈ ಕಮಿಟಿ ಭಟ್ಕಳದಲ್ಲಿ ಅಸ್ತಿತ್ವಕ್ಕೆ ಬಂದಿದೆಯೋ ಇಲ್ಲವೋ ಎಂಬ ಅನುಮಾನ ಜನರಲ್ಲಿ ಮೂಡಿದೆ.

ಏಕೆಂದರೆ ಒಂದು ತಿಂಗಳಿನಿಂದ ಲಿಫ್ಟ್ ನಿರ್ವಹಣೆ ಇಲ್ಲದೇ ನಿಂತಿದ್ದರೂ ಯಾವೊಂದು ಇಲಾಖೆಯೂ ಈ ಕುರಿತು ಚಕಾರ ಎತ್ತದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಮರ್ಪಕ ನಿರ್ವಹಣೆ ಇಲ್ಲದೇ ಭಟ್ಕಳ ತಾಲೂಕು ಆಡಳಿತ ಸೌಧದ ಲಿಪ್ಟ್ ಕೆಟ್ಟು ನಿಂತಿದೆ. ಆದಷ್ಟು ಬೇಗ ಲಿಫ್ಟ್ ಸರಿಪಡಿಸಬೇಕು ಎಂಬುದು ಹಿರಿಯ ನಾಗರಿಕರ ಆಗ್ರಹವಾಗಿದೆ.

ನಿರ್ವಹಣೆ ಇಲ್ಲದೇ ಲಿಫ್ಟ್ ಕೆಟ್ಟು ನಿಂತಿರುವದು ಗಮನಕ್ಕೆ ಬಂದಿದೆ. ಸಾರ್ವಜನಿಕರಿಗೆ ತೊಂದರೆಯಾಗಿದ್ದಕ್ಕೆ ವಿಷಾದವಿದೆ. ನಾನು ಕೆಲ ದಿನಗಳಿಂದ ರಜೆಯಲ್ಲಿದ್ದೆ. ಕಚೇರಿಗೆ ತೆರಳಿದ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುತ್ತೇನೆ. ಮೊದಲು ಲಿಫ್ಟ್ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು ಎಂದು ಸಹಾಯಕ ಆಯುಕ್ತೆ ಮಮತಾದೇವಿ ಎಸ್ ಸ್ಪಷ್ಟನೆ ನೀಡಿದ್ದಾರೆ.

ಸಾರ್ವಜನಿಕರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಸರ್ಕಾರ ಭಟ್ಕಳ ತಾಲೂಕಾ ಆಡಳಿತ ಸೌಧದಲ್ಲಿ ಲಿಫ್ಟ್ ವ್ಯವಸ್ಥೆ ಮಾಡಿದೆ. ಹಿರಿಯ ನಾಗರಿಕರ ಮಹಿಳೆಯರ ಹಿತದೃಷ್ಟಿಯಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಶೀಘ್ರ ದುರಸ್ತಿಗೊಳಿಸಿ, ಲಿಫ್ಟ್​​ ಕಾರ್ಯನಿರ್ವಹಣೆಗೆ ಕ್ರಮಕೈಗೊಳ್ಳಬೇಕೆಂಬುದು ಜನರ ಒತ್ತಾಯವಾಗಿದೆ.

ಇದನ್ನೂ ಓದಿ : ಕುಸಿದ ಅಂತರ್ಜಲಮಟ್ಟ: ಉತ್ತರಕನ್ನಡದ 110 ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಕೊರತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.