ETV Bharat / state

ಭಟ್ಕಳ ಜಾಲಿ ಪಟ್ಟಣ ಪಂಚಾಯತ್​ ಚುನಾವಣೆ ಫಲಿತಾಂಶ: ಪಕ್ಷೇತರರ ಮೇಲುಗೈ - Bhatkal Jolly Town Panchayat Election

ಸೋಮವಾರದಂದು ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳ ಮತ ಭವಿಷ್ಯವು ಗುರುವಾರದಂದು ಇಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಮೂಲಕ ಕೊನೆಗೊಂಡಿತು.

bhatkal-jolly-town-panchayat-election-results-announced
ಭಟ್ಕಳ ಜಾಲಿ ಪಟ್ಟಣ ಪಂಚಾಯತ್​ನಲ್ಲಿ ಪಕ್ಷೇತರರು ಮೇಲುಗೈ
author img

By

Published : Dec 30, 2021, 4:35 PM IST

ಭಟ್ಕಳ: ಜಾಲಿ ಪಟ್ಟಣ ಪಂಚಾಯತ್​ನ 13 ವಾರ್ಡ್​ನ ಚುನಾವಣೆಯಲ್ಲಿ 6 ಪಕ್ಷೇತರರು ಅತೀ ಹೆಚ್ಚು ಗೆಲುವು ಸಾಧಿಸಿರುವುದರ ಮೂಲಕ ತಮ್ಮ ಪ್ರಭಾವ ತೋರಿಸಿದ್ದು, 7 ಅವಿರೋಧ ಆಯ್ಕೆ ಸೇರಿ ಬಹುಪಾಲು ತಂಜೀಂ ಬೆಂಬಲಿತ ಅಭ್ಯರ್ಥಿಗಳು ಒಟ್ಟಾರೆ ಗೆಲುವು ಸಾಧಿಸಿದಂತಾಗಿದೆ.

ಸೋಮವಾರದಂದು ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳ ಮತ ಭವಿಷ್ಯವು ಗುರುವಾರದಂದು ಇಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ನಡೆದ ಮತ ಎಣಿಕೆಯ ಮೂಲಕ ಕೊನೆಗೊಂಡಿತು. ಜಾಲಿ ಪಟ್ಟಣ ಪಂಚಾಯತ್​ನ ಒಟ್ಟು 20 ವಾರ್ಡ್​ಗಳಲ್ಲಿ 7 ಸ್ಥಾನವನ್ನು ಅವಿರೋಧವಾಗಿ ಪಕ್ಷೇತರರು ಆಯ್ಕೆಯಾಗಿದ್ದರು. ಬಳಿಕ ನಿಗದಿಯಂತೆ ಚುನಾವಣೆ 13 ವಾರ್ಡ್​ಗಳಲ್ಲಿ ನಡೆದಿದ್ದು, ಇದರಲ್ಲಿ 4 ಕಾಂಗ್ರೆಸ್​, 3 ಬಿಜೆಪಿ, 6 ಸ್ಥಾನದಲ್ಲಿ ಪಕ್ಷೇತರ ಗೆಲುವು ಕಾಣುವ ಮೂಲಕ ಒಟ್ಟು 13 ಸ್ಥಾನದಲ್ಲಿ ಪಕ್ಷೇತರರು ಗೆಲುವು ಕಂಡಿದ್ದಾರೆ.

Congress Candidates
ಕಾಂಗ್ರೆಸ್​ನ ಅಭ್ಯರ್ಥಿಗಳು

ಬಹುತೇಕ ಪಕ್ಷೇತರರು ತಂಜೀಂ ಸಂಸ್ಥೆ ಬೆಂಬಲದಿಂದ ಕಣಕ್ಕೆ ಇಳಿದಿದ್ದು, ಮೊದಲೇ ಅವರ ಗೆಲುವು ನಿಗದಿಪಡಿಸಿಕೊಂಡಂತೆ ವಿಶ್ವಾಸದಲ್ಲಿದ್ದರು‌.‌ ಇನ್ನು ಈ ಬಾರಿ ಆಶ್ಚರ್ಯಕರ ರೀತಿಯಲ್ಲಿ 72 ನೋಟಾ ಮತ ಹಾಕಿರುವ ಮತದಾರರು 3, 8 ಹಾಗೂ 11ನೇ ವಾರ್ಡ್​ನಲ್ಲಿ ಕ್ರಮವಾಗಿ 12, 12 ಮತ್ತು 15 ನೋಟಾ ಮತ ಚಲಾಯಿಸಿದ್ದಾರೆ.

ತಹಶೀಲ್ದಾರ್​ ಎಸ್. ರವಿಚಂದ್ರ, ಚುನಾವಣಾಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೋಗೆರ ಉಪಸ್ಥಿತಿಯಲ್ಲಿ ಮುಂಜಾನೆ 8 ಗಂಟೆಗೆ ಆರಂಭಗೊಂಡ ಮತ ಎಣಿಕೆಯು 13 ವಾರ್ಡ್​ಗಳ ಮತ ಕ್ಷೇತ್ರದಲ್ಲಿ ಮುಕ್ತಾಯಗೊಂಡಿತು. ಮತ ಎಣಿಕೆ ಹೊರ ಭಾಗದಲ್ಲಿ ಅಭ್ಯರ್ಥಿಗಳ ನೂರಾರು ಬೆಂಬಲಿಗರು ಮಲ್ಲಿಗೆ ಹಾರ ಹಾಕಿ ಅಭ್ಯರ್ಥಿಗಳ ಗೆಲುವಿಗೆ ಎರಡು ಪಕ್ಷದ ಹಾಗೂ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಸಂಭ್ರಮ ಪಟ್ಟರು.

ಡಿವೈಎಸ್​ಪಿ ಬೆಳ್ಳಿಯಪ್ಪ, ಸಿಪಿಐ ದಿವಾಕರ, ಮಹಾಬಲೇಶ್ವರ ನಾಯ್ಕ, ನಗರ ಹಾಗೂ ಗ್ರಾಮೀಣ ಪೊಲೀಸ್​ ಠಾಣಾ ಪಿಎಸ್ಐಗಳು ಸಿಬ್ಬಂದಿ ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಭದ್ರತೆ ಒದಗಿಸಿದರು. ಒಟ್ಟಾರೆ, ಈ ಬಾರಿ ಪಟ್ಟಣ ಪಂಚಾಯತ್ ಆಡಳಿತ ತಂಜೀಂ‌ ಬೆಂಬಲಿತ ಪಕ್ಷೇತರರ ಕೈಗೆ ಹೋಗುವ ಸಾಧ್ಯತೆಗಳಿದ್ದು, ಆಡಳಿತ ವೈಖರಿಯು ಹೇಗಿರಲಿವೆ ಎಂಬುದನ್ನು ಕಾದು ನೋಡಬೇಕಿದೆ.

ಓದಿ: ಸಿಇಒಗಳ ಕಾರ್ಯನಿರ್ವಹಣೆಗೆ ಜಿಲ್ಲಾವಾರು ಶ್ರೇಯಾಂಕ ವ್ಯವಸ್ಥೆ ಜಾರಿ: ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.