ETV Bharat / state

ಭೂ ಸುಧಾರಣೆ ಸೇರಿ ಇತರೆ ಕಾಯ್ದೆಗಳ ತಿದ್ದುಪಡಿಗೆ ವಿರೋಧ; ಜೆಡಿಎಸ್‍ನಿಂದ ಸರ್ಕಾರಕ್ಕೆ ಮನವಿ

author img

By

Published : Aug 27, 2020, 3:59 PM IST

ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣೆ ಕಾಯ್ದೆ, ಕೈಗಾರಿಕೆ, ಎಪಿಎಂಸಿ, ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದಿರುವುದು ಜನವಿರೋಧಿ ನೀತಿಯಾಗಿದೆ ಎಂದು ಜೆಡಿಎಸ್‌ ಮುಖಂಡರು ಹೇಳಿದ್ದಾರೆ.

JDS oppose the Land Reforms Act
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಜೆಡಿಎಸ್‍ನಿಂದ ಸರ್ಕಾರಕ್ಕೆ ಮನವಿ

ಭಟ್ಕಳ: ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಭಟ್ಕಳ ಜೆಡಿಎಸ್​ ಘಟಕದ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಮನವಿಯಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣೆ ಕಾಯ್ದೆ, ಕೈಗಾರಿಕೆ, ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ತಂದಿರುವುದು ಜನವಿರೋಧಿ ನೀತಿಯಾಗಿದೆ. ತಕ್ಷಣ ಈ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ.

ಭೂಸುಧಾರಣೆ ಕಾಯ್ದೆ, ಕಾರ್ಮಿಕ ಕಾಯ್ದೆ ಮತ್ತು ಎಪಿಎಂಸಿ, ಕೈಗಾರಿಕೆ ಕಾಯ್ದೆಗಳ ತಿದ್ದುಪಡಿಯಿಂದ ರೈತರು, ಕಾರ್ಮಿಕರ ಹಿತಕ್ಕೆ ಧಕ್ಕೆಯಾಗಲಿದೆ. ಕಾಯ್ದೆಗಳ ತಿದ್ದುಪಡಿ ಮಾರಕವಾಗಿದೆ. ಯಾವುದೇ ಕಾರಣಕ್ಕೂ ಇದನ್ನು ಜಾರಿಯಾಗಲು ಬಿಡಬಾರದು ಎಂದು ಮನವಿ ಮಾಡಿದರು.

ಸಹಾಯಕ ಆಯುಕ್ತ ಭರತ್.ಎಸ್‌ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಮುಖಂಡರಾದ ಎಂ.ಡಿ. ನಾಯ್ಕ, ಕೃಷ್ಣಾನಂದ ಪೈ, ಜೈನುಲ್ಲಾಬಿದ್ದೀನ್ ಫಾರೂಕಿ, ದೇವಯ್ಯ ನಾಯ್ಕ, ಗಣೇಶ ಹಳ್ಳೇರ, ಮಂಜುನಾಥ ಗೊಂಡ ಮುಂತಾದವರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.