ಶಿರಸಿ : ದನ ಮೇಯಿಸಲು ತೆರಳಿದ್ದ ವ್ಯಕ್ತಿಯ ಮೇಲೆ ಕರಡಿಗಳು ದಾಳಿ ನಡೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯೀಡಾ ತಾಲೂಕಿನ ಬಜಾರಕುಣಂಗ ಗ್ರಾಪಂ ವ್ಯಾಪ್ತಿಯ ಕರಂಜೆಯಲ್ಲಿ ನಡೆದಿದೆ.
ಜೊಯೀಡಾದ ಶಿವಾಜಿ ಗಾಯಗೊಂಡ ವ್ಯಕ್ತಿ. ಈತ ಪ್ರತಿ ದಿನದಂತೆ ರಸ್ತೆಯ ಪಕ್ಕದಲ್ಲಿಯೇ ದನ ಮೇಯಿಸುವ ಸಂದರ್ಭದಲ್ಲಿ ಏಕಾಏಕಿ ಎರಡು ಕರಡಿಗಳು ದಾಳಿ ನಡೆಸಿವೆ. ಈತನ ಚೀರಾಟ ಕೇಳಿ ಗ್ರಾಮಸ್ಥರು ಬಂದು ಶಿವಾಜಿಯನ್ನು ರಕ್ಷಿಸಿದ್ದಾರೆ. ಇನ್ನು, ಕರಡಿ ದಾಳಿಯಿಂದ ಗಾಯಗಳಾಗಿದ್ದ ಇವರನ್ನು ತಕ್ಷಣ ರಾಮನಗರದ ಸರ್ಕಾರಿ ಆಸ್ಪತ್ರೆಗೆ ಕರೆದ್ಯೊಯಲಾಗಿತ್ತು. ಬಳಿಕ ನಂತರ ಹೆಚ್ಚಿನ ಚಿಕಿತ್ಸೆಗೆಗಾಗಿ ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ.