ETV Bharat / state

ಸೋರುತಿಹುದು ಬನವಾಸಿಯ ಮಧುಕೇಶ್ವರ ಮಾಳಿಗೆ.. ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪ - ಬನವಾಸಿಯ ಉಮಾಮಧುಕೇಶ್ವರ ದೇವಾಲಯ

ಪ್ರತಿ ಬಾರಿ ಮಳೆಗಾಲದಲ್ಲಿ ದೇವಸ್ಥಾನದಲ್ಲಿ ಮಳೆನೀರು ಸೋರುವ ಸಮಸ್ಯೆ ಉಂಟಾಗುತ್ತಿದೆ. ದೇವಾಲಯದ ಒಳಾಂಗಣದಲ್ಲಿ ಮಳೆನೀರು ಸೋರಿಕೆಯಾಗುತ್ತಿರುವುದು ಐತಿಹಾಸಿಕ ದೇವಾಲಯವನ್ನು ಕೇಂದ್ರೀಯ ಪುರಾತತ್ವ ಇಲಾಖೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

Banavasi Madhukeshwar floor is leaking
ಸೋರುತಿದೆ ಬನವಾಸಿಯ ಮಧುಕೇಶ್ವರ ಮಾಳಿಗೆ
author img

By

Published : Jul 14, 2022, 2:15 PM IST

ಶಿರಸಿ : ಅಧಿಕಾರಿಗಳ ಅಜ್ಞಾನದಿಂದಾಗಿ ಪುರಾತನ ಪ್ರಸಿದ್ಧವಾದ, ನೂರಾರು ವರ್ಷಗಳ ಇತಿಹಾಸವುಳ್ಳ ಬನವಾಸಿಯ ಉಮಾಮಧುಕೇಶ್ವರ ದೇವಾಲಯದ ಪ್ರಾಂಗಣದಲ್ಲಿ ಮಳೆಯ ಅಬ್ಬರಕ್ಕೆ ನೀರು ಸೋರುತ್ತಿದ್ದು, ಭಕ್ತರಿಗೆ ಸಮಸ್ಯೆ ಉಂಟಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ದೇವಾಲಯಕ್ಕೆ ಅದರದ್ದೇ ಆದ ಆಡಳಿತ ಮಂಡಳಿ ಇದ್ದರೂ ಸಹ ಪುರಾತತ್ವ ಇಲಾಖೆಯವರೇ ಪುರಾತನ ಕಟ್ಟಡ ನೋಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ದೇವಾಲಯದ ಸಂರಕ್ಷಣೆ ಮಾಡಬೇಕಾಗಿದ್ದರೂ ಅವರ ನಿರಾಸಕ್ತಿಯಿಂದಾಗಿ ದೇವಾಲಯ ವರ್ಷದಿಂದ ವರ್ಷಕ್ಕೆ ಮಳೆ ನೀರಿನಿಂದ ಹಾಳಾಗುತ್ತಿದೆ ಎನ್ನಲಾಗ್ತಿದೆ.

ಈ ವರ್ಷ ಮಳೆಯ ಅಬ್ಬರಕ್ಕೆ ದೇವಾಲಯದ ಗರ್ಭಗುಡಿ, ನೃತ್ಯ ಮಂಟಪ, ಭಕ್ತರು ಕುಳಿತುಕೊಳ್ಳುವ ಆಸನಗಳ ಮೇಲೆ ನೀರು ತೊಟ್ಟಿಕ್ಕುತ್ತಿದೆ. ಇದರಿಂದ ಭಕ್ತರಿಗೂ ಕಿರಿಕಿರಿ ಉಂಟಾಗುತ್ತಿದೆ. ಆದರೆ ಇಲಾಖೆಯನ್ನು ಹೊರತುಪಡಿಸಿ ಬೇರೆ ಯಾರೂ ಅಭಿವೃದ್ಧಿ ಮಾಡಲು ಆಗದ ಕಾರಣ ಇಲ್ಲಿ ಅಜ್ಞಾನ ಎದ್ದು ಕಾಣುತ್ತಿದೆ ಎಂಬುದು ಆಡಳಿತ ಮಂಡಳಿಯವರ ಆರೋಪವಾಗಿದೆ.

ಸೋರುತಿದೆ ಬನವಾಸಿಯ ಮಧುಕೇಶ್ವರ ಮಾಳಿಗೆ

ಕದಂಬರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯ ಸಂಪೂರ್ಣ ಶಿಲೆಗಳಿಂದಲೇ ನಿರ್ಮಿತವಾಗಿದೆ. ಪ್ರತಿ ಬಾರಿ ಮಳೆಗಾಲದಲ್ಲಿ ದೇವಸ್ಥಾನದಲ್ಲಿ ಮಳೆನೀರು ಸೋರುವ ಸಮಸ್ಯೆ ಉಂಟಾಗುತ್ತಿದೆ. ದೇವಾಲಯದ ಒಳಾಂಗಣದಲ್ಲಿ ಮಳೆನೀರು ಸೋರಿಕೆಯಾಗುತ್ತಿರುವುದು ಐತಿಹಾಸಿಕ ದೇವಾಲಯವನ್ನು ಕೇಂದ್ರೀಯ ಪುರಾತತ್ವ ಇಲಾಖೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬುದರ ದ್ಯೋತಕ.

ಇಂತಹ ನಿರ್ಲಕ್ಷ್ಯ ಧೋರಣೆಯಿಂದಲೇ ಬನವಾಸಿಯ ಹಲವು ಐತಿಹಾಸಿಕ ಕುರುಹುಗಳು ಮರೆಯಾಗಿವೆ. ಶಿಲಾ ದೇಗುಲವಾಗಿರುವ ಜತೆಗೆ ಸೂಕ್ಷ್ಮ ಕಟ್ಟಡವೂ ಆಗಿರುವ ಕಾರಣ ಮಳೆನೀರು ಸೋರಿಕೆ ತಡೆಗೆ ವ್ಯವಸ್ಥೆ ಕಲ್ಪಿಸುವುದು ಸಾಧ್ಯವಾಗಿಲ್ಲ. ಕಟ್ಟಡ ದುರಸ್ತಿಗೆ ಪುರಾತತ್ವ ಇಲಾಖೆಯೇ ಅನುಮತಿಸಬೇಕಿದೆ. ಅಲ್ಲದೇ ಬನವಾಸಿ ಅಭಿವೃದ್ಧಿ ಪ್ರಾಧಿಕಾರದಿಂದಲೂ ಸಹ ಯಾವುದೇ ಅನುದಾನ ಇಲ್ಲದೇ, ಸಭೆ ನಡೆಯದೇ ಅಭಿವೃದ್ಧಿ ಹಿಂದುಳಿದಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.

ಪುರಾತತ್ವ ಇಲಾಖೆಯ ಪ್ರಾದೇಶಿಕ ಕಚೇರಿ ಧಾರವಾಡದಲ್ಲಿದೆ. ಇಲ್ಲಿನ ಸಮಸ್ಯೆ ತಿಳಿಸಲು ಅವರಾರು ಕೈಗೆ ಸಿಗುವುದಿಲ್ಲ ಎಂಬ ಗೋಳು ಸ್ಥಳೀಯರದ್ದಾಗಿದೆ. ಇಲ್ಲಿರುವ ಅಧಿಕಾರಿಗಳದ್ದೂ ಸ್ಪಂದನೆ ಇಲ್ಲದಂತಾಗಿದೆ. ಕಾರಣ ಸ್ಥಳೀಯ ಜನಪ್ರತಿನಿಧಿಗಳೇ ಈ ಬಗ್ಗೆ ಗಮನ ಹರಿಸಿ ಭಕ್ತರ ಹೆಮ್ಮೆಯ ಉಮಾಮಧುಕೇಶ್ವರ ದೇವಾಲಯವನ್ನು ಉಳಿಸುವ ಕೆಲಸ ಆಗಬೇಕಿದೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಮಳೆ ಹೆಚ್ಚಳ: ಏರಿಕೆಯತ್ತ ಸಾಗಿದ ಜಲಾಶಯಗಳ ನೀರಿನ ಮಟ್ಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.