ETV Bharat / state

ಪ್ರಧಾನಿ ಮೋದಿ 'ಮನ್ ಕಿ ಬಾತ್'ನಲ್ಲಿ ಪ್ರಸ್ತಾಪಿಸಿದ 'ಬಾಕಾಹು'ಗೆ ಬಹುಬೇಡಿಕೆ: ದೇಶವ್ಯಾಪಿ ಕ್ರಾಂತಿಯ ಕಂಪು

ಆಕಾಶವಾಣಿಯ ಮನ್‌ ಕಿ ಬಾತ್‌ ಸರಣಿಯಲ್ಲಿ ಪ್ರಧಾನಿ ಮೋದಿ ಮಾತನಾಡಿ, ಕೊರೊನಾ ಕಾಲಘಟ್ಟದಲ್ಲಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರು ಬಾಕಾಹುವಿನಿಂದಾಗಿ ಆದಾಯ ಹೆಚ್ಚಿಸಿಕೊಂಡು ಸ್ವಾವಲಂಬಿ ಜೀವನಕ್ಕೆ ಹೊಸ ದಾರಿ ಕಂಡುಕೊಂಡಿರೋ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು.

sirsi
'ಬಾಕಾಹು'ಗೆ ಬಹುಬೇಡಿಕೆ
author img

By

Published : Sep 8, 2021, 10:03 AM IST

Updated : Sep 8, 2021, 11:58 AM IST

ಶಿರಸಿ: ಕಳೆದ ತಿಂಗಳು ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದ ವಿಷಯವೊಂದು ದಿಢೀದರ್ ಫೇಮಸ್ ಆಗ್ತಿದೆ. ಆ ಒಂದು ಮಾತಿನ ಪ್ರಸ್ತಾಪದಿಂದ ಉತ್ತರ ಕನ್ನಡ ಜಿಲ್ಲೆಯ ಈ ಉತ್ಪನ್ನಕ್ಕೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಮನ್‌ ಕಿ ಬಾತ್‌ನಲ್ಲಿ ಪ್ರಸ್ತಾವಿಸುವ ಮೂಲಕ ಬಾಳೆಕಾಯಿ ಹುಡಿ (ಬಾಕಾಹು) ಕ್ರಾಂತಿಯ ಕಂಪು ಈಗ ಎಲ್ಲೆಡೆ ದೇಶಾದ್ಯಂತ ಪಸರಿಸಿದೆ.

ಆಕಾಶವಾಣಿಯ ಮನ್‌ ಕಿ ಬಾತ್‌ ಸರಣಿಯಲ್ಲಿ ಪ್ರಧಾನಿ ಮಾತನಾಡಿ, ಕೊರೊನಾ ಕಾಲಘಟ್ಟದಲ್ಲಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರು ಬಾಕಾಹುವಿನಿಂದಾಗಿ ಆದಾಯ ಹೆಚ್ಚಿಸಿಕೊಂಡು ಸ್ವಾವಲಂಬಿ ಜೀವನಕ್ಕೆ ಹೊಸ ದಾರಿ ಕಂಡುಕೊಂಡಿರೋ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು.

'ಮನ್ ಕಿ ಬಾತ್'ನಲ್ಲಿ ಪ್ರಸ್ತಾಪಿಸಿದ 'ಬಾಕಾಹು'ಗೆ ಬಹುಬೇಡಿಕೆ

ಬಾಕಾಹು ಎಂದರೇನು?

ಈ ಬಾಕಾಹು ಅಂದರೆ ಬಾಳೆಕಾಯಿ ಹುಡಿ ಎಂದರ್ಥ. ಈ ಹುಡಿ ವಿವಿಧ ಖಾದ್ಯ ರೂಪದಲ್ಲಿ ಅಡುಗೆ ಮನೆ ಪ್ರವೇಶಿಸಿದ್ದು, ಆರೋಗ್ಯ ಮತ್ತು ಆದಾಯದ ದೃಷ್ಟಿಯಿಂದ ಜನಮನ್ನಣೆ ಪಡೆಯುತಿದೆ. ಜೊತೆಗೆ ಕಿರು ಉದ್ಯಮ ಸ್ವರೂಪ ಪಡೆಯುತ್ತಿದೆ. ಗೋಧಿ, ಮೈದಾಕ್ಕೆ ಪರ್ಯಾಯವಾಗಿ ಹಲವು ವಿಟಮಿನ್‌, ಮೆಗ್ನಿಷಿಯಂ, ಪೊಟಾಶಿಯಂನಂತಹ ಸತ್ವಭರಿತ ಪೋಷಕಾಂಶಗಳಿಂದ ಕೂಡಿದ ಬಾಕಾಹುವನ್ನು ಗೋಧಿ ಪುಡಿ ಮತ್ತು ಮೈದಾ ಹಿಟ್ಟಿಗೆ ಪರ್ಯಾಯವಾಗಿ ಬಳಸಬಹುದಾಗಿದೆ.

ಜನಪ್ರಿಯ ಆಗ್ತಿದೆ ಬಾಕಾಹು

ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಲಾಕ್​ಡೌನ್ ವೇಳೆ ಸದ್ದಿಲ್ಲದೇ ತಯಾರಾದ ಬಾಕಾಹು(ಬಾಳೆಕಾಯಿ ಹುಡಿ) ಇಂದು ಜನಪ್ರಿಯವಾಗಿದೆ. ಸ್ವಾವಲಂಬಿ ಭಾರತದ ಕನಸು ಕಾಣುತ್ತಿರುವ ಕಾಲದಲ್ಲಿ ದೇಶೀ ಉತ್ಪನ್ನಗಳ ತಯಾರಿಕೆಯಲ್ಲಿ ಬಾಕಾಹು ಯಶಸ್ವಿ ಪ್ರಯೋಗವಾಗಿದೆ.

ಬಾಕಾಹು ತಯಾರಿ ಸುಲಭ. ಬಲಿತ ಬಾಳೆಕಾಯಿಯನ್ನು ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿ ಬಿಸಿಲಲ್ಲಿ ಅಥವಾ ಡ್ರೈಯರ್‌ನಲ್ಲಿ ಒಣಗಿಸಬೇಕು. ಸಿಪ್ಪೆ ತೆಗೆದ ಕೂಡಲೇ ಆಕ್ಸಿಡೈಸ್‌ ಆಗಿ ಕಪ್ಪಾಗುವುದನ್ನು ತಡೆಯಲು ಒಂದು ಲೀಟರ್‌ ನೀರಿಗೆ ಗಂಜಿ ಮತ್ತು ಉಪ್ಪು ಮಿಶ್ರಣ ಮಾಡಿ ಅದಕ್ಕೆ ಸುಲಿದ ಬಾಳೆಕಾಯಿ ಹಾಕಬೇಕು.

ಒಣಗಿದ ಬಳಿಕ ಪುಡಿ ಮಾಡಿ ಖಾದ್ಯಗಳ ತಯಾರಿಗೆ ಬಳಸಬಹುದಾಗಿದೆ. ಅಲ್ಲದೇ ಇದು ಆರೋಗ್ಯಕ್ಕೂ ಉತ್ತಮಾಗಿರುವ ಕಾರಣ ಸಾಕಷ್ಟು ಬೇಡಿಕೆಯೂ ಹೆಚ್ಚಾಗಿದೆ.

Last Updated : Sep 8, 2021, 11:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.