ETV Bharat / state

ಕ್ಷುಲ್ಲಕ ಕಾರಣಕ್ಕೆ ಹಲ್ಲೆ: ರಕ್ಷಣೆಗಾಗಿ ಸೈನಿಕರಿಬ್ಬರ ತಂದೆ-ತಾಯಿಯ ಅಳಲು

author img

By

Published : Mar 18, 2019, 11:43 AM IST

ಸೈನಿಕರಿಬ್ಬರ ತಂದೆ ತಾಯಿಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಪಕ್ಕದ ಮನಯವರೇ ಹಲ್ಲೆ ಮಾಡಿರುವ ಘಟನೆ ಕಾರವಾರದಲ್ಲಿ ನಡೆದಿದೆ.

ಸೈನಿಕರ ತಂದೆ-ತಾಯಿಯ ಮೇಲೆ ಪಕ್ಕದ ಮನೆಯವರೇ ಮಾರಣಾಂತಿ ಹಲ್ಲೆ

ಕಾರವಾರ: ಕ್ಷುಲ್ಲಕ ಕಾರಣಕ್ಕೆ ಸೈನಿಕರ ತಂದೆ-ತಾಯಿಯ ಮೇಲೆ ಪಕ್ಕದ ಮನೆಯವರೇ ಮಾರಣಾಂತಿ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರ ಮಾವಳ್ಳಿ-1 ಪಂಚಾಯಿತಿ ವ್ಯಾಪ್ತಿಯ ಹಿರೇದೋಮಿಯಲ್ಲಿ ನಡೆದಿದ್ದು, ತಮಗೆ ರಕ್ಷಣೆ ನೀಡುವಂತೆ ಸೈನಿಕರಿಬ್ಬರ ತಂದೆ -ತಾಯಿ ಅಂಗಲಾಚಿದ್ದಾರೆ.

ಹಲ್ಲೆಗೊಳಗಾದ ಸೈನಿಕರ ತಂದೆ-ತಾಯಿಗಳು ಮುರ್ಡೇಶ್ವರ ಹೀರೆದೋಮಿಯ ಮಂಜುನಾಥ ಶನಿಯಾರ ನಾಯ್ಕ, ಯಮುನಾ ಮಂಜುನಾಥ ನಾಯ್ಕ ಎಂದು ತಿಳಿದು ಬಂದಿದೆ. ಇನ್ನು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಹಿರೆದೋಮಿಯ ಶ್ರೀಧರ ತಿಮ್ಮಪ್ಪ ಮೊಗೇರ, ತಿಮ್ಮಪ್ಪ ನಾರಾಯಣ ಮೊಗೇರ, ಮಾದೇವಿ ತಿಮ್ಮಪ್ಪ ಮೊಗೇರ, ನೇತ್ರಾ ಉಮೇಶ ಮೊಗೇರ ಎಂಬುವವರ ಮೇಲೆ ದೂರು ದಾಖಲಾಗಿದೆ.

ಎರಡು ಕುಟುಂಬಗಳು ಅಕ್ಕಪಕ್ಕದಲ್ಲಿ ವಾಸವಾಗಿದ್ದು, ಪಂಚಾಯ್ತಿಯಿಂದ ನೀಡಿದ ಕುಡಿಯುವ ನೀರಿನ ಪೈಪ್​ಲೈನ್ ಹಾಗೂ ದನಕರು ಓಡಾಡುವ ವಿಚಾರವಾಗಿ ಇಬ್ಬರ ನಡುವೆ ಮನಸ್ಥಾಪವಿತ್ತು. ಅಲ್ಲದೆ ಈ ನಡುವೆ ಪಕ್ಕದ ಮನೆಯವರು ಸೈನಿಕರ ಮನೆಗೆ ನೀಡಿದ ಪೈಪ್‌ಲೈನ್ ಆಗಾಗ ಕಟ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಂಜುನಾಥ ನಾಯ್ಕ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದರು. ಪೈಪ್​ಲೈನ್ ಪರಿಶೀಲಿಸಿ ಕ್ರಮ‌ ಕೈಗೊಳ್ಳುವಂತೆ ಮಾವಳ್ಳಿ ಪಂಚಾಯಿತಿ ಪಿಡಿಒ ಅವರಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಚಿಸಿದ್ದರು. ಅದರಂತೆ ಪಿಡಿಒ ಸ್ಥಳಕ್ಕೆ ತೆರಳಿದಾಗಲೂ ಆರೋಪಿಗಳು ಕ್ಯಾತೆ ತೆಗೆದಿದ್ದರು. ಆದರೆ ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವದು ಅನಿವಾರ್ಯ ಎಂದು ಪಿಡಿಒ ಎಚ್ಚರಿಕೆ ನೀಡಿದ್ದರು.

ಆದರೆ ಈ ವಿಷಯವಾಗಿ ದ್ವೇಷ ಹೊಂದಿದ್ದ ಆರೋಪಿಗಳು ದನ ಮೇಯಿಸಲು ಯಮುನಾ ಮಂಜುನಾಥ ನಾಯ್ಕ ತೆರಳಿದಾಗ ಹಿಂದಿನಿಂದ ಬಂದು ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಮಂಜುನಾಥ ಶನಿಯಾರ ನಾಯ್ಕ ಇವರ ಮೇಲೂ ಕುತ್ತಿಗೆ ಸೇರಿದಂತೆ ವಿವಿಧೆಡೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೈನಿಕರ ತಾಯಿಯ ಕೈಗೆ ಬಲವಾದ ಗಾಯವಾಗಿದ್ದು, ತಂದೆಯ ಎದೆ ಭಾಗಕ್ಕೆ ಪೆಟ್ಟಾಗಿದೆ. ಸದ್ಯ ಇಬ್ಬರು ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇವರ ಇಬ್ಬರು ಪುತ್ರರು ಸೈನ್ಯದಲ್ಲಿದ್ದಾರೆ. ಹಿರಿಯ ಪುತ್ರ ಹರೀಶಾ ಮಂಜುನಾಥ ನಾಯ್ಕ ಗುಜರಾತಿನಲ್ಲಿ ಭಾರತೀಯ ಭೂ ಸೇನೆಯಲ್ಲಿ ಕಮಾಂಡೋ ಆಗಿದ್ದರೆ, ಇನ್ನೋರ್ವ ಪುತ್ರ ನಂದೀಶ ಮಂಜುನಾಥ ನಾಯ್ಕ ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಭೂ ಸೇನೆಯಲ್ಲಿ ಕಮಾಂಡೋ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಸೈನಿಕರ ತಂದೆ ಮಂಜುನಾಥ ಶನಿಯಾರ ನಾಯ್ಕ, ನನ್ನ ಪತ್ನಿ ದನ ಮೇಯಿಸಲು ತೆರಳಿದ ವೇಳೆ ಅಡ್ಡಗಟ್ಟಿ ಕತ್ತಿ ಹಿಡಿದು ಹಲ್ಲೆ ನಡೆಸಿದ್ದಾರೆ. ಕೆಟ್ಟ ಶಬ್ದದಿಂದ ಬೈಯ್ದು ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದಾರೆ. ಮಕ್ಕಳಿಬ್ಬರು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದು ಪಾಲಕರಾದ ನಮಗೆ ಯಾವುದೇ ರಕ್ಷಣೆಯಿಲ್ಲವಾಗಿದೆ. ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೇ ವಾಸವಿದ್ದು, ನಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಇನ್ನು ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

sample description

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.